ETV Bharat / bharat

ಲೈಫ್ ಮಿಷನ್ ಪ್ರಾಜೆಕ್ಟ್ ಹಗರಣ: ಕೇರಳ ಸಿಎಂ ಖಾಸಗಿ ಕಾರ್ಯದರ್ಶಿ ಜಾರಿ ನಿರ್ದೇಶನಾಲಯದ ಎದುರು ಹಾಜರು

ಲೈಫ್​ ಮಿಷನ್​ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಚೇರಿಗೆ ಕೇರಳ ಮುಖ್ಯಮಂತ್ರಿ ಹೆಚ್ಚುವರಿ ಖಾಸಗಿ ಕಾರ್ಯದರ್ಶಿ ಸಿ.ಎಂ.ರವೀಂದ್ರನ್​ ಹಾಜರಾಗುವಂತೆ ಇಡಿ ಸಮನ್ಸ್​ ಕಳುಹಿಸಿತ್ತು.

life-mission-housing-project-scam-case
ಲೈಫ್ ಮಿಷನ್ ಪ್ರಾಜೆಕ್ಟ್ ಹಗರಣ: ಕೇರಳ ಸಿಎಂ ಕಾರ್ಯದರ್ಶಿ ಜಾರಿ ನಿರ್ದೇಶನಾಲಯಕ್ಕೆ ಹಾಜರು
author img

By

Published : Mar 7, 2023, 10:17 PM IST

ಕೊಚ್ಚಿ (ಕೇರಳ): ಲೈಫ್​ ಮಿಷನ್​ ಭ್ರಷ್ಟಾಚಾರ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಅವರ ಹೆಚ್ಚುವರಿ ಖಾಸಗಿ ಕಾರ್ಯದರ್ಶಿ ಸಿ.ಎಂ.ರವೀಂದ್ರನ್​ ಅವರು ಮಂಗಳವಾರ ಬೆಳಗ್ಗೆ ಕೊಚ್ಚಿಯಲ್ಲಿರುವ ಇಡಿ (ಜಾರಿ ನಿರ್ದೇಶನಾಲಯ) ಕಚೇರಿಗೆ ಹಾಜರಾಗಿದ್ದಾರೆ. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಚೇರಿಗೆ ಹಾಜರಾಗುವಂತೆ ಇಡಿ ಸಮನ್ಸ್​ ಕಳುಹಿಸಿತ್ತು.

ಈ ಹಿಂದೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ಜಾರಿ ಮಾಡಿದ್ದರೂ ಸಿ.ಎಂ.ರವೀಂದ್ರ ಅವರು ಹಾಜರಾಗಿರಲಿಲ್ಲ. ವಿಧಾನಸಭೆ ಕಲಾಪ ನಡೆಯುತ್ತಿರುವುದರಿಂದ ವಿಚಾರಣೆಗೆ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸಿ.ಎಂ ರವೀಂದ್ರ ಅವರು ಇಡಿಗೆ ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲೆ ಎರಡನೇ ಬಾರಿ ನೋಟಿಸ್​ ಜಾರಿ ಮಾಡಲಾಗಿತ್ತು.

ಭ್ರಷ್ಟಾಚಾರ ಪ್ರಕರಣದಲ್ಲಿ ಇತರೆ ಆರೋಪಿಗಳಾಗಿರುವ ಸ್ವಪ್ನಾ ಸುರೇಶ್​ ಮತ್ತು ಸರಿತ್​ ನೀಡಿದ ಹೇಳಿಕೆ ಮತ್ತು ಸಾಕ್ಷ್ಯ ಚಿತ್ರದ ಆದಾರದ ಮೇಲೆ ಸಿ.ಎಂ ರವೀಂದ್ರ ಅವರನ್ನು ವಿಚಾರಣೆ ನಡೆಸಲು ಇಡಿ ಸಮನ್ಸ್ ​​ಕಳುಹಿಸಿತ್ತು. ರವೀಂದ್ರನ್​ ಮತ್ತು ಆರೋಪಿ ಸ್ವಪ್ನಾ ಸುರೇಶ್​ ನಡುವಿನ ಚಾಟ್​ ವಿವರಗಳನ್ನೂ ಜಾರಿ ನಿರ್ದೇಶನಾಲಯ ಪರಿಶೀಲನೆ ನಡೆಸಿದೆ. ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರು ದಿನಗಳ ಕಾಲ ವಿಚಾರಣೆ ನಂತರ ಮುಖ್ಯಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್​ ಅವರನ್ನು ಫೆಬ್ರವರಿ 14 ರಂದು ಬಂಧಿಸಲಾಯಿತು.

ಆದರೆ, ಶಿವಶಂಕರ್​ ಅವರು ತಮ್ಮ ವಿರುದ್ಧ ಲೈಫ್​ ಮಿಷನ್​ ಲಂಚ ಪ್ರಕರಣ ಪೂರ್ವನಿಯೋಜಿತ ಎಂದು ಆರೋಪಿಸಿದ್ದರು. ಆದರೆ, ಜಾರಿ ನಿರ್ದೇಶನಾಲಯದ ಪ್ರಕಾರ, ಶಿವಶಂಕರ್​ ಅವರು ಲೈಪ್​ ಮಿಷನ್​ ‘‘ಹಗರಣ’’ದಲ್ಲಿ ಕಮಿಷನ್​ ಅನ್ನು ಸೃಷ್ಟಿಸಲು ‘‘ಸಕ್ರಿಯ ಬೆಂಬಲ’’ ನೀಡಿದ್ದಾರೆ ಎಂದು ಹೇಳಿದೆ.

ಲೈಫ್ ಮಿಷನ್ ಹಗರಣ: ಕೇರಳ ರಾಜ್ಯ ಸರ್ಕಾರದ ಲೈಫ್​ ಮಿಷನ್​ ಯೋಜನೆಗೆ ಸಂಬಂಧಿಸಿದಂತೆ ಲಂಚದ ವ್ಯವಹಾರ ಪ್ರಕರಣ ದಾಖಲಾಗಿದೆ. ತ್ರಿಶೂರ್​ ವಡಕಂಚೇರಿಯಲ್ಲಿ 140 ಕುಟುಂಬಗಳಿಗೆ ಮನೆ ನಿರ್ಮಿಸುವ ಯೋಜನೆ ಇದಾಗಿದ್ದು, ರೆಡ್​ ಕ್ರೆಸೆಂಟ್​ ಯುಎಇ ಕಾನ್ಸುಲೇಟ್​ ಮೂಲಕ ಮಂಜೂರು ಮಾಡಿದ ಹಣವನ್ನು ಖರ್ಚು ಮಾಡಿ ವಸತಿ ಸಂಕೀರ್ಣವನ್ನು ನಿರ್ಮಿಸಲಾಗುತ್ತದೆ. ಈ ಯೋಜನೆಯ ಗುತ್ತಿಗೆ ಪಡೆಯಲು ಲಂಚ ನೀಡಲಾಗಿದೆ ಎಂದು ಯುನಿಟಾಕ್​ ವ್ಯವಸ್ಥಾಪಕ ನಿರ್ದೇಶಕ ಸಂತೋಷ್​ ಈಪನ್​ ಆರೋಪಿಸಿದ್ದರು.

ದೆಹಲಿ ಲಿಕ್ಕರ್ ಹಗರಣ: ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ದೆಹಲಿ ಲಿಕ್ಕರ್ ಹಗರಣವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ನವದೆಹಲಿ ಮದ್ಯ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ನ ಅರುಣ್ ರಾಮಚಂದ್ರ ಪಿಳ್ಳೈ ಎಂಬಾತನನ್ನು ಇತ್ತೀಚೆಗೆ ಬಂಧಿಸಿದ್ದು, ಪಿಳ್ಳೈ ಅವರನ್ನು ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯವು ಒಂದು ವಾರ ಇಡಿ ಕಸ್ಟಡಿಗೆ ಒಪ್ಪಿಸಿದೆ. ದೆಹಲಿ ಲಿಕ್ಕರ್ ಹಗರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಮೂಲದ ಅರುಣ್ ಪಿಳ್ಳೈ ಅವರನ್ನು ಮಂಗಳವಾರ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.

ಅರುಣ್ ಪಿಳ್ಳೈ ಅವರ ರಿಮಾಂಡ್ ವರದಿಗೆ ಸಂಬಂಧಿಸಿದಂತೆ 17 ಪುಟಗಳನ್ನು ಪ್ರಕಟಿಸಿದ್ದು, ಇದರಲ್ಲಿ ಪ್ರಮುಖ ಅಂಶಗಳನ್ನು ಇಡಿ ಬಹಿರಂಗಪಡಿಸಿದೆ. ವರದಿಯಲ್ಲಿ ದೆಹಲಿಯ ಲಿಕ್ಕರ್ ಹಗರಣ... ತೆಲಂಗಾಣದ ಎಂಎಲ್​​ಸಿ ಅವರಿಗೆ ಲಾಭ ಮಾಡಿಕೊಡಲು ಅನ್ನಿ ಠಾಣಾ ಮತ್ತು ಅರುಣ್ ಪಿಳ್ಳೈ ನಡೆದುಕೊಂಡಿದ್ದಾರೆ ಎಂದು ಇಡಿ ಆರೋಪಿಸಿದೆ.

ಇದನ್ನೂ ಓದಿ: ಮೇಲಿಂದ ಮೇಲೆ ಗಾಂಜಾ ಡೆಲಿವರಿ ಮಾಡಲು ಕೇಳಿದ ಗ್ರಾಹಕ.. ಜೊಮ್ಯಾಟೊ ಮಾಡಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.