ETV Bharat / bharat

ಜೀವನ ಕಲಿಸಿದ ಪಾಠ: 'ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಟ್ರಕ್ ಚಾಲಕಿಯಾದೆ' - ಮಹಿಳೆ ತಾನು ಏನನ್ನಾದರೂ ಸಾಧಿಸಬಲ್ಲೆ

ಮಹಿಳೆ ತಾನು ಏನನ್ನಾದರೂ ಸಾಧಿಸಬಲ್ಲೆ ಎಂದು ಸಾಬೀತುಪಡಿಸುವುದರಲ್ಲಿ ಹೆಮ್ಮೆ ಪಡುತ್ತಾಳೆ. ಅನೇಕರು ನನ್ನಿಂದ ಪ್ರೇರಿತರಾಗಿ ಇದೇ ಮಾರ್ಗದಲ್ಲಿ ಅವರೂ ಸಾಗುತ್ತಿದ್ದಾರೆ. ನೀವು ಯಾವುದೇ ಒಂದು ಕೆಲಸವನ್ನು ಮಾಡುವ ವಿಶ್ವಾಸ ಹೊಂದಿದ್ದರೆ ಧೈರ್ಯದಿಂದ ಹೆಜ್ಜೆ ಹಾಕಿ.. ಯಶಸ್ಸು ನಿಮ್ಮದಾಗುತ್ತದೆ.

ಜೀವನ ಕಲಿಸಿದ ಪಾಠ: 'ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಟ್ರಕ್ ಚಾಲಕಿಯಾದೆ'
Life lesson Became a truck driver for children education
author img

By

Published : Dec 15, 2022, 12:47 PM IST

ಭೋಪಾಲ್​( ಮಧ್ಯಪ್ರದೇಶ)​: ಕೆಲವೊಮ್ಮೆ ನಮ್ಮ ನಿರ್ಧಾರಗಳು ನಮ್ಮ ಜೀವನವನ್ನೇ ಬದಲಾಯಿಸುತ್ತವೆ. ನಾನು ಹುಟ್ಟಿದ್ದು ಉತ್ತರ ಪ್ರದೇಶದಲ್ಲಿ. ಓದಿದ್ದು ವಾಣಿಜ್ಯ ಮತ್ತು ಕಾನೂನು. ನನ್ನ ಪತಿ ಮಧ್ಯಪ್ರದೇಶದ ಭೋಪಾಲ್ ಮೂಲದವರು. ನನಗೆ 2001ರಲ್ಲಿ ಮದುವೆಯಾಯಿತು. ಮದುವೆಯಾದ ನಂತರ ಆತ ಡ್ರೈವರ್ ಎಂದು ತಿಳಿಯಿತು. ಅವರು ಸಣ್ಣ ಸಾರಿಗೆ ಕಂಪನಿಯನ್ನು ಹೊಂದಿದ್ದರು. ನನಗೆ ಎರಡು ಮಕ್ಕಳಾದ ನಂತರ ಅವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರು.

ನಾನು ಕಂಪನಿ ಮತ್ತು ಮನೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರೂ ಸಹ ಚಾಲಕ ಸರಿಯಾದ ಸಮಯಕ್ಕೆ ಸರಕುಗಳನ್ನು ತಲುಪಿಸದಿದ್ದಾಗ ಕಂಪನಿಗೆ ನಷ್ಟವಾಗತೊಡಗಿತು. ಲಾಭ ಇಲ್ಲದಿದ್ದರೂ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ನಾನು ಸ್ಟೀರಿಂಗ್ ಹಿಡಿಯಬೇಕಾಯಿತು. ತರಬೇತಿ ಪಡೆದು ವಾಹನ ಚಲಾಯಿಸಲು ಆರಂಭಿಸಿದ್ದೇನೆ.

ಆಗ ನಮ್ಮ ದೇಶದಲ್ಲಿ ಮಹಿಳಾ ಟ್ರಕ್ ಚಾಲಕರು ಇರಲಿಲ್ಲ. ಅದು ನನಗೆ ದೊಡ್ಡ ಸವಾಲಾಗಿತ್ತು. ಆರಂಭದಲ್ಲಿ ನಾನು ಸಾಕಷ್ಟು ಟೀಕೆ ಮತ್ತು ಅವಮಾನಗಳನ್ನು ಎದುರಿಸಿದರೂ ನಾನು ತಾಳ್ಮೆಯಿಂದಲೇ ಎಲ್ಲವನ್ನೂ ನಿಭಾಯಿಸಿದೆ. ಹೆದ್ದಾರಿಗಳಲ್ಲಿ ಟ್ರಕ್ ಓಡಿಸುವುದು ತುಂಬಾ ಕಷ್ಟದ ಕೆಲಸ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋಗಬೇಕಾದರೆ ರಾತ್ರಿ ವೇಳೆ ವಾಹನ ಚಲಾಯಿಸಬೇಕು. ಈ ಎಲ್ಲ ಅಡಚಣೆಗಳನ್ನು ತಿಳಿದುಕೊಂಡ ನಂತರವೂ ನಾನು ಡ್ರೈವರ್ ಆಗಲು ನಿರ್ಧರಿಸಿದೆ. ಡ್ರೈವಿಂಗ್ ಸೀಟಿನಲ್ಲಿ ನನ್ನನ್ನು ನೋಡಿ ಎಲ್ಲರಿಗೂ ಆಶ್ಚರ್ಯವಾಯಿತು.

ಕೆಲವರು ನನ್ನನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆರಂಭದಲ್ಲಿ ನಾನು ಕೆಲವೇ ಪ್ರದೇಶಗಳಿಗೆ ಹೋಗುತ್ತಿದ್ದೆ. ನಂತರ ದೇಶಾದ್ಯಂತ ಸರಕುಗಳನ್ನು ಸಾಗಿಸುವ ಹಂತಕ್ಕೆ ತಲುಪಿದೆ. ಪುರುಷರು ಮಾತ್ರ ಭಾರಿ ವಾಹನಗಳನ್ನು ಓಡಿಸಬಹುದು ಎಂಬ ಕಲ್ಪನೆಯನ್ನು ನಾನು ಬದಲಾಯಿಸಿದ್ದೆ. ಮಹಿಳೆ ತಾನು ಏನನ್ನಾದರೂ ಸಾಧಿಸಬಲ್ಲೆ ಎಂದು ಸಾಬೀತುಪಡಿಸುವುದರಲ್ಲಿ ಹೆಮ್ಮೆ ಪಡುತ್ತಾಳೆ. ಅನೇಕರು ನನ್ನಿಂದ ಪ್ರೇರಿತರಾಗಿ ಇದೇ ಮಾರ್ಗದಲ್ಲಿ ಅವರೂ ಸಾಗುತ್ತಿದ್ದಾರೆ. ನೀವು ಯಾವುದೇ ಒಂದು ಕೆಲಸವನ್ನು ಮಾಡುವ ವಿಶ್ವಾಸ ಹೊಂದಿದ್ದರೆ ಧೈರ್ಯದಿಂದ ಹೆಜ್ಜೆ ಹಾಕಿ. ಯಶಸ್ಸು ನಿಮ್ಮದಾಗುತ್ತದೆ.

ಇದನ್ನೂ ಓದಿ: ಬಳೆಗಳನ್ನು ಧರಿಸುವ ಕೈಯಲ್ಲಿ ಸ್ಟೇರಿಂಗ್, ಗೆಜ್ಜೆ ಧರಿಸುವ ಕಾಲು ಬ್ರೇಕ್​ ಮೇಲೆ.. ಕೇರಳದಲ್ಲಿ ಟ್ಯಾಂಕರ್ ಲಾರಿ ಓಡಿಸುವ ನಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.