ಪಾಂಪೋರ್ (ಜಮ್ಮು ಮತ್ತು ಕಾಶ್ಮೀರ) : ಜಮ್ಮು ಮತ್ತು ಕಾಶ್ಮೀರದ ಪಾಂಪೋರ್ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಪೊಲೀಸರ ಮೋಸ್ಟ್ ವಾಂಟೆಡ್ ಲಿಸ್ಟ್ನಲ್ಲಿದ್ದ ಲಷ್ಕರ್-ಇ-ತೊಯ್ಬಾ (ಎಲ್ಇಟಿ) ಕಮಾಂಡರ್ ಉಮರ್ ಮುಸ್ತಾಕ್ ಖಾಂಡೆ ಸೆರೆಸಿಕ್ಕಿದ್ದಾನೆ. ಈತ ಇಬ್ಬರು ಪೊಲೀಸ್ ಸಿಬ್ಬಂದಿಯ ಹತ್ಯೆ ಸೇರಿದಂತೆ ಬಾಘಾಟ್, ಶ್ರೀನಗರ ಮತ್ತು ಇತರೆಡೆ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದ.
ಪಾಂಪೋರ್ ಎನ್‌ಕೌಂಟರ್‌ನಲ್ಲಿ ಮೋಸ್ಟ್ ವಾಂಟೆಡ್ ಉಗ್ರ ಉಮರ್ ಮುಸ್ತಾಕ್ ಸೆರೆಯಾದ ಬಗ್ಗೆ ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ. ಪುಲ್ವಾಮಾ ಜಿಲ್ಲೆಯ ಪಂಪೋರ್‌ನಲ್ಲಿ ಶನಿವಾರ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎನ್ಕೌಂಟರ್ ನಡೆದಿತ್ತು.
ಸಲೀಂ ಪರ್ರೆ, ಯೂಸುಫ್ ಕಾಂಟ್ರೂ, ಅಬ್ಬಾಸ್ ಶೇಖ್, ರಿಯಾಜ್ ಶೆಟರ್‌ಗುಂಡ್, ಫಾರೂಕ್ ನಲಿ, ಜುಬೇರ್ ವಾನಿ, ಅಶ್ರಫ್ ಮೊಲ್ವಿ, ಸಾಕಿಬ್ ಮಂಜೂರ್, ಉಮರ್ ಮುಸ್ತಾಕ್ ಖಾಂಡೆ ಮತ್ತು ವಕೀಲ್ ಶಾ ಮೊದಲಾದವರು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಮೋಸ್ಟ್ ವಾಂಟೆಡ್ ಲಿಸ್ಟ್ನಲ್ಲಿರುವ ಹತ್ತು ಭಯೋತ್ಪಾದಕರಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ನಾಗರಿಕರ ಹತ್ಯೆ ಬಳಿಕ ನಂತರ ಭದ್ರತಾ ಪಡೆಗಳು ಕೈಗೊಂಡ ಎಂಟು ಎನ್ಕೌಂಟರ್ಗಳಲ್ಲಿ ಈವರೆಗೆ ಒಟ್ಟು 11 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಕಾಶ್ಮೀರ ಪೊಲೀಸ್ ಮಹಾನಿರೀಕ್ಷಕರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಯುವತಿಯ ಖಾಸಗಿ ಫೋಟೊ ಬಳಸಿಕೊಂಡು ಬ್ಲ್ಯಾಕ್‌ಮೇಲ್... ಯುವಕನ ವಿರುದ್ಧ ದೂರು