ETV Bharat / bharat

ಗುಜರಾತ್​ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಮಹಿಳೆಯರೆಷ್ಟು?.. ಮರುಕಳಿಸಿದ ಇತಿಹಾಸ! - ಒಬ್ಬರೇ ಮಹಿಳಾ ಮುಖ್ಯಮಂತ್ರಿ

1962ರಿಂದ ಇದುವರೆಗಿನ ವಿಧಾನಸಭಾ ಚುನಾವಣೆಗಳನ್ನು ಪರಿಗಣಿಸಿದರೆ ಪ್ರತಿವರ್ಷ ಚುನಾವಣಾ ಕಣಕ್ಕಿಳಿಯುತ್ತಿರುವ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದರೆ, ಗೆದ್ದವರ ಸಂಖ್ಯೆಯಲ್ಲಿ ಮಾತ್ರ ಅದೇ ಇತಿಹಾಸ ಮರುಕಳಿಸಿದೆ.

less-success-women-in-gujarat-assembly-election
ಗುಜರಾತ್​ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಮಹಿಳೆಯರೆಷ್ಟು
author img

By

Published : Dec 9, 2022, 8:23 AM IST

ಗುಜರಾತ್​: ನಿನ್ನೆಯಷ್ಟೇ ಗುಜರಾತ್​ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಒಟ್ಟು 182 ಸ್ಥಾನಗಳಿಗೆ ನಡೆದ ಪೈಪೋಟಿಯಲ್ಲಿ 156 ಸ್ಥಾನಗಳನ್ನು ಬಿಜೆಪಿ ಪ್ರತಿ ಬಾರಿಯಂತೆ ಈ ಬಾರಿಯೂ ಗದ್ದುಗೆಯ ಕೀಲಿಕೈ ತನ್ನದಾಗಿಸಿಕೊಂಡಿದೆ. 17 ಕ್ಷೇತ್ರಗಳನ್ನು ಗೆದ್ದ ಕಾಂಗ್ರೆಸ್​ ಪ್ರತಿಪಕ್ಷ ಸ್ಥಾನಕ್ಕೂ ಏರದ ಸ್ಥಿತಿಯಲ್ಲಿ ನಿಂತಿದೆ. ಉಳಿದ 5 ಸ್ಥಾನಗಳನ್ನು ಆಪ್​ ಹಾಗೂ 4 ಸ್ಥಾನಗಳನ್ನು ಪಕ್ಷೇತರರು ತಮ್ಮದಾಗಿಸಿಕೊಂಡಿದ್ದಾರೆ. ಇಲ್ಲಿ ಗೆದ್ದಿರುವವರ ಪೈಕಿ ಪುರುಷರ ಸಂಖ್ಯೆಯೇ ಹೆಚ್ಚು ಮಹಿಳಾ ಮಣಿಗಳು ಬೆರಳೆಣಿಕೆಯಷ್ಟು ಮಾತ್ರ.

ಈ ಬಾರಿಯ ಗುಜರಾತ್ ವಿಧಾನಸಭೆ ಚುನಾವಣೆಯ 182 ಸ್ಥಾನಗಳಿಗೆ 1,621 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಅವರಲ್ಲಿ 139 ಮಹಿಳೆಯರು. ಆ 139ರಲ್ಲಿ 56 ಸ್ವತಂತ್ರ ಅಭ್ಯರ್ಥಿಗಳಾದರೆ, 38 ಮಂದಿ ಮಾತ್ರ ಎಎಪಿ, ಬಿಜೆಪಿ ಅಥವಾ ಕಾಂಗ್ರೆಸ್​ನಂತ ಮೂರು ದೊಡ್ಡ ರಾಜಕೀಯ ಪಕ್ಷಗಳ ಸದಸ್ಯರು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅತೀ ಹೆಚ್ಚು ಮಹಿಳಾ ಸ್ಪರ್ಧಿಗಳಿದ್ದರೂ ಪ್ರತಿ ವರ್ಷದಂತೆ ಈ ಬಾರಿ ಫಲಿತಾಂಶ ಮಾತ್ರ ನಿರಾಶದಾಯಕ. 139 ಅಭ್ಯರ್ಥಿಗಳಲ್ಲಿ 14 ಮಹಿಳೆಯರಷ್ಟೇ ವಿಜಯಶಾಲಿಗಳಾಗಿದ್ದಾರೆ.

ನಾವು ಗುಜರಾತ್​ ವಿಧಾನಸಭಾ ಚುನಾವಣೆಯ ಇತಿಹಾಸವನ್ನು ಮೆಲುಕು ಹಾಕಿದರೂ ಅಲ್ಲಿ ಗೆದ್ದಿರುವ ಮಹಿಳೆಯರ ಸಂಖ್ಯೆ ಕಡಿಮೆ. 1962ರಿಂದ ಇಲ್ಲಿಯವರೆಗಿನ ಚುನಾವಣೆಗಳನ್ನು ಪರಿಗಣಿಸುವುದಾರೆ ಮಹಿಳಾ ಸ್ಪರ್ಧಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇರುತ್ತವೆ. ಆದರೆ ಗೆದ್ದವರ ಸಂಖ್ಯೆ ಎಂದೂ ಹೆಚ್ಚಾದದ್ದಿಲ್ಲ. 1962ರಲ್ಲಿ 23 ಮಹಿಳೆಯರು ಕಣಕ್ಕಿಳಿದಿದ್ದರು. ಅದರಲ್ಲಿ 15 ಮಂದಿ ವಿಜಯ ಸಾಧಿಸಿದ್ದರು.

ಸ್ಪರ್ಧಿಸಿದ್ದು 139 ಅಭ್ಯರ್ಥಿಗಳು ಗೆದ್ದಿದ್ದು ಮಾತ್ರ 13: ಆದರೆ, 2017 ರಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ 126 ಮಹಿಳೆಯರಲ್ಲಿ ಕೇವಲ 13 ಮಹಿಳೆಯರು ಮಾತ್ರ ಗೆದ್ದಿದ್ದರು. 1985, 2002, ಮತ್ತು 2007 ರಲ್ಲಿ 16 ಮಹಿಳೆಯರು ಮಾತ್ರ ಗದ್ದುಗೆ ಏರಿದ್ದರು. ಆಶ್ಚರ್ಯವೆಂದರೆ ಈ ವರ್ಷ ವಿವಿಧ ಪಕ್ಷಗಳಿಂದ ಬರೋಬ್ಬರಿ 139 ಮಹಿಳೆಯರು ಎಂಎಲ್​ಎ ಕುರ್ಚಿಗಾಗಿ ಸ್ಪರ್ಧಿಸಿದ್ದಾರೆ. ಇದುವರೆಗಿನ ಸಂಖ್ಯೆಗಳಲ್ಲಿ ಇದು ಅತ್ಯಧಿಕವಾಗಿದೆ. ಆದರೆ ಗೆದ್ದವರು ಎಷ್ಟು ಮಂದಿ? ಮತ್ತದೇ ಇತಿಹಾಸ ಮರುಕಳಿಸದಂತಿದೆ.

ವಾವ್ ಅಸೆಂಬ್ಲಿಯಿಂದ ಕಾಂಗ್ರೆಸ್‌ನ ಒಬ್ಬ ಮಹಿಳಾ ಅಭ್ಯರ್ಥಿ ಗೇನಿ ಠಾಕೋರ್ ಮಾತ್ರ ಗೆದ್ದಿದ್ದಾರೆ. ಜೊತೆಗೆ ಗೋಡಾಲ್ ಕ್ಷೇತ್ರದಲ್ಲಿ ಗೀತಾಬಾ ಜಡೇಜಾ, ಜಾಮ್‌ನಗರ (ಗ್ರಾಮೀಣ) ಕ್ಷೇತ್ರದಲ್ಲಿ ರಿವಾಬ ಜಡೇಜಾ, ಭಾವನಗರ (ಪೂರ್ವ) ಕ್ಷೇತ್ರದಲ್ಲಿ ಸೇಜಲ್ ಪಾಂಡ್ಯ, ನರ್ಮದಾ (ನಂದೋಡ್) ಕ್ಷೇತ್ರದಲ್ಲಿ ದರ್ಶನಾ ದೇಶಮುಖ, ಸೂರತ್ (ಲಿಂಬಯತ್) ಕ್ಷೇತ್ರದಿಂದ ಸಂಗೀತಾ ಪಾಟೀಲ್, ಮೊರ್ವಾಹದ್ಫ್ ಕ್ಷೇತ್ರದಲ್ಲಿ ನಿಮಿಷಾ ಬೆನ್ ಸುತಾರ್, ಗಧಿಧಾಮ್ ಕ್ಷೇತ್ರದಲ್ಲಿ ಮಾಲ್ತಿ ಮಹೇಶ್ವರಿ, ಗಾಂಧಿನಗರ (ಉತ್ತರ) ಕ್ಷೇತ್ರದಲ್ಲಿ ರೀಟಾ ಪಟೇಲ್, ನರೋಡಾದಲ್ಲಿ ಪಾಯಲ್ ಕುಕ್ರಾಣಿ, ಥಕ್ಕರ್ಬಾಪನಗರದಲ್ಲಿ ಕಾಂಚನ್ ರಡ್ಡಿಯಾ, ಅಸರ್ವಾದಲ್ಲಿ ದರ್ಶನ ವಘೇಲಾ, ರಾಜ್ಕೋಟ್(ಪಶ್ಚಿಮ)​ ಕ್ಷೇತ್ರದಲ್ಲಿ ಡಾ. ದರ್ಶಿತಾ ಶಾ ಸ್ಥಾನ ಗೆದ್ದವರು.

ಇದುವರೆಗೆ ಒಬ್ಬರೇ ಮಹಿಳಾ ಮುಖ್ಯಮಂತ್ರಿ: 1962 ರಿಂದ ಇದುವರೆಗೆ ಸಿಎಂ ಗದ್ದುಗೆ ಏರಿದ್ದು ಒಬ್ಬಳೆ ಮಹಿಳೆ. ಗುಜರಾತ್​ನ ಮೊದಲ ಮಹಿಳಾ ಮುಖ್ಯಮಂತ್ರಿ ಆನಂದಿಬೆನ್​ ಪಟೇಲ್​. ವಿಧಾನಸಭೆ ಸ್ಪೀಕರ್​ ಸ್ಥಾನವನ್ನು ಕೂಡ ಇದುವರೆಗೆ ಒಬ್ಬಳೇ ಮಹಿಳೆ ಅಲಂಕರಿಸಿರುವುದು ಅದು ಡಾ.ನಿಮಾಬೆನ್. ವಿಧಾನಸಭೆಯ ಸದಸ್ಯರಲ್ಲಿ ಶೇ.10ಕ್ಕಿಂತ ಕಡಿಮೆ ಮಹಿಳೆಯರಿದ್ದು, ಈ ಪ್ರಮಾಣ ಇನ್ನೂ ಬದಲಾಗಿಲ್ಲ.

ಇಲ್ಲಿಯವರೆಗೆ ನಡೆದ 13 ಚುನಾವಣೆಗಳಲ್ಲಿ ಚುನಾಯಿತರಾದ 2307 ಶಾಸಕರ ಪೈಕಿ 111 ಮಂದಿ ಮಾತ್ರ ಮಹಿಳೆಯರು. ಮಹಾರಾಷ್ಟ್ರ 1960 ಮೇ 1 ರಂದು ಮಹಾರಾಷ್ಟ್ರದಿಂದ ಬೇರ್ಪಟ್ಟು ಪ್ರತ್ಯೇಕ ರಾಜ್ಯವಾಗಿತ್ತು. ಒಬ್ಬ ಮಹಿಳೆ ಗುಜರಾತ್​ನ ಗವರ್ನರ್​ ಸ್ಥಾನ ಅಲಂಕರಿಸಿದ್ದು 54 ವರ್ಷಗಳ ನಂತರ ಅಂದರೆ ನರೇಂದ್ರ ಮೋದಿ ಅವರು 2014ರಲ್ಲಿ ಪ್ರಧಾನಿಯಾಗಿ ಆಯ್ಕೆಯಾದಾಗ. ಆನಂದಿ ಬೇನ್ ಪಟೇಲ್​ಗೆ ಮೋದಿ ಸಿಎಂ ಸ್ಥಾನ ಬಿಟ್ಟುಕೊಟ್ಟಿದ್ದರು.

ಪ್ರಸ್ತುತ ಉತ್ತರ ಪ್ರದೇಶದ ರಾಜ್ಯಪಾಲರಾಗಿರುವ ಆನಂದಿಬೆನ್​ ಪಟೇಲ್​ 2016 ಆಗಸ್ಟ್​ 6 ರವೆರೆಗೆ ಗುಜರಾತ್‌ನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅವರು ಪಾಟಿದಾರ್ ಮೀಸಲಾತಿ ಚಳವಳಿಯ ಪರಿಣಾಮವಾಗಿ ರಾಜೀನಾಮೆ ನೀಡಬೇಕಾಯಿತು.

ಶೇ.10ಕ್ಕಿಂತ ಕಡಿಮೆ ಪ್ರಾತಿನಿಧ್ಯ: ಡಾ.ನಿಮಾಬೆನ್ ಆಚಾರ್ಯ ಅವರು 2021ರ ಸೆಪ್ಟೆಂಬರ್ 27ರಂದು ರಾಜ್ಯ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್ ಆಯ್ಕೆಯಾದರು. 2007ಕ್ಕೂ ಮುನ್ನ ಡಾ.ನಿಮಾಬೆನ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. 1962 ಮತ್ತು 2017 ರ ನಡುವೆ ರಾಜ್ಯದಲ್ಲಿ 13 ವಿಧಾನಸಭಾ ಚುನಾವಣೆಗಳು ನಡೆದಿವೆ. ಒಟ್ಟು 2307 ಶಾಸಕರು ಚುನಾವಣೆ ಗೆದ್ದಿದ್ದಾರೆ. ಅದರಲ್ಲಿ 2196 ಪುರುಷರಾದರೆ, 111 ಮಹಿಳೆಯರು ಮಾತ್ರ ಶಾಸಕರ ಸ್ಥಾನ ಗೆದ್ದವರು.

ಸುಮಾರು 50 ಪ್ರತಿಶತ ಮಹಿಳಾ ಮತದಾರರು: ಚುನಾವಣಾ ಆಯೋಗವು ಒದಗಿಸಿದ ಮಾಹಿತಿಯ ಪ್ರಕಾರ ಗುಜರಾತ್‌ನಲ್ಲಿ ಸರಿಸುಮಾರು 50% ಮತದಾರರು ಮಹಿಳೆಯರು. 2017 ರ ಚುನಾವಣೆಗೆ ಹೋಲಿಸಿದರೆ, ಪ್ರತಿಪಕ್ಷ ಕಾಂಗ್ರೆಸ್ ಮತ್ತು ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಎರಡೂ ಹೆಚ್ಚು ಮಹಿಳಾ ಅಭ್ಯರ್ಥಿಗಳನ್ನು ಹಾಕಿರುವುದರಿಂದ ಈ ಬಾರಿ ಹೆಚ್ಚು ಮಹಿಳೆಯರು ಸ್ಪರ್ಧಿಸುತ್ತಿದ್ದಾರೆ.

2017 ರಲ್ಲಿ 12 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಬಿಜೆಪಿಯಿಂದ ಈ ಬಾರಿ 18 ಮಹಿಳಾ ಅಭ್ಯರ್ಥಿಗಳನ್ನು ಸ್ಪರ್ಧಿಸಿದ್ದಾರೆ. 2017ರಲ್ಲಿ 10 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಕಾಂಗ್ರೆಸ್​ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 14 ಮಹಿಳೆಯರಿಗೆ ಅವಕಾಶ ನೀಡಿದೆ.

ಇದನ್ನೂ ಓದಿ: 156 ಸೀಟು ಗೆದ್ದು ಗುಜರಾತ್‌ನಲ್ಲಿ​ ಬಿಜೆಪಿ ದಾಖಲೆಯ ಜಯಭೇರಿ: 'ಕೈ'ಗೆ ಪ್ರತಿಪಕ್ಷ ಸ್ಥಾನವೂ ಇಲ್ಲ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.