ತಿರುಪತಿ, ಆಂಧ್ರಪ್ರದೇಶ : ತಿರುಪತಿ ಸನ್ನಿಧಿಯಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ತಂದೆ - ತಾಯಿ ಎದುರೇ ಆಟವಾಡುತ್ತಿದ್ದ ಮಗುವನ್ನು ಚಿರತೆಯೊಂದು ಕತ್ತು ಹಿಡಿದು ಕಾಡಿಗೆ ಎಳೆದೊಯ್ದಿರುವ ಘಟನೆ ಬೆಳಕಿಗೆ ಬಂದಿದೆ. ಆದರೆ ಆ ಚಿರತೆಯಿಂದ ಮಗುವನ್ನು ಕಾಪಾಡಿರುವುದು ಒಂದೇ ಸಾಹಸವೇ ಆಗಿದೆ. ಗುರುವಾರ ರಾತ್ರಿ ಈ ಘಟನೆ ನಡೆದಿದೆ.
ಏನಿದು ಘಟನೆ: ಪ್ರತ್ಯಕ್ಷದರ್ಶಿಗಳ ಪ್ರಕಾರ, ಕರ್ನೂಲ್ ಜಿಲ್ಲೆಯ ಆದೋನಿ ನಿವಾಸಿ ದಂಪತಿ ತಮ್ಮ ನಾಲ್ಕು ವರ್ಷದ ಮಗ ಕೌಶಿಕ್ ಜೊತೆಗೆ ಅಲಿಪಿರಿಯಿಂದ ತಿರುಮಲಕ್ಕೆ ತೆರಳಿದ್ದರು. ಒಂದನೇ ಘಾಟ್ ರಸ್ತೆಯ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಕುಳಿತು ಊಟ ಮಾಡುತ್ತಿದ್ದರು. ಅವರ ಪಕ್ಕದಲ್ಲಿ ಕೌಶಿಕ್ ಆಟವಾಡುತ್ತಿದ್ದನು.
ತಂದೆ - ತಾಯಿ ಎದುರೇ ಆಟವಾಡುತ್ತಿದ್ದ ಮಗುವಿನ ಮೇಲೆ ಚಿರತೆಯೊಂದು ಏಕಾಏಕಿ ದಾಳಿ ನಡೆಸಿದೆ. ಚಿರತೆ ಮಗುವಿನ ಕತ್ತಿನ ಭಾಗಕ್ಕೆ ಬಾಯಿ ಹಾಕಿ ಹಿಡಿದು ಕಾಡಿಗೆ ಕೊಂಡೊಯ್ದಿದೆ. ಈ ವೇಳೆ, ಗಾಬರಿಗೊಂಡ ಪೋಷಕರು ರಕ್ಷಣೆಗಾಗಿ ಕೂಗಾಡಿ ಚಿರತೆಯಿಂದೆ ಓಡಿದ್ದಾರೆ. ಆಗ ಪೋಷಕರ ಸಹಾಯಕ್ಕೆ ಸ್ಥಳೀಯ ಅಂಗಡಿಯಾತ ಹಾಗೂ ಅಲ್ಲಿದ್ದ ಭದ್ರತಾ ಸಿಬ್ಬಂದಿ ಚಿರತೆ ಹಿಂದೆ ಓಡಿದ್ದಾರೆ.
ಇನ್ನು ಚಿರತೆ ಮಗುವಿನ ತಲೆ ಹಿಡಿದ ಅಲ್ಲೆ ಪ್ರತ್ಯೇಕ್ಷವಾಗಿದೆ. ಇದನ್ನು ಕಂಡ ಪೋಷಕರು ಮತ್ತು ಸ್ಥಳೀಯರು ಚಿರತೆಗೆ ಟಾರ್ಚ್ ಬಿಟ್ಟು, ಕಲ್ಲಿನಿಂದ ದಾಳಿ ಮಾಡಿದ್ದಾರೆ. ಕಲ್ಲೇಟು ತಿಂದ ಚಿರತೆ ಮಗುವನ್ನು ಪೊಲೀಸ್ ಔಟ್ ಪೋಸ್ಟ್ ಬಳಿ ಬಿಟ್ಟು ಹೋಗಿದೆ. ಮಗುವಿನ ಧ್ವನಿ ಕೇಳಿದ ಪೋಷಕರು ಮತ್ತು ಅಲ್ಲಿದ್ದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು.
ಗಂಭೀರವಾಗಿ ಗಾಯಗೊಂಡ ಬಾಲಕನಿಗೆ ಅಲ್ಲಿನ ಪೊಲೀಸರು ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಬಳಿಕ ಮಗು ಕೌಶಿಕ್ನನ್ನು ಆಂಬ್ಯುಲೆನ್ಸ್ ಮೂಲಕ ತಿರುಪತಿಯ ಶ್ರೀ ಪದ್ಮಾವತಿ ಮಕ್ಕಳ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಗುವಿನ ಕಿವಿಯ ಹಿಂದೆ ಹಾಗೂ ತಲೆಯ ಇತರೆಡೆ ಚಿರತೆ ಹಲ್ಲುಗಳು ಮೂಡಿವೆ. ಆದರೆ ಕೌಶಿಕ್ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ಶ್ರೀ ಪದ್ಮಾವತಿ ಮಕ್ಕಳ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಚಿಕಿತ್ಸೆ ಪಡೆಯುತ್ತಿರುವ ಮಗುವಿನ ಕುಟುಂಬದವರನ್ನು ಟಿಟಿಡಿ ಇಒ ಧರ್ಮ ರೆಡ್ಡಿ ಭೇಟಿ ಮಾಡಿದರು. ಮಗುವಿನ ಯೋಗಕ್ಷೇಮಕ್ಕೆ ಪ್ರಾರ್ಥಿಸಿದ್ದಾರೆ. ದೇವರ ದಯದಿಂದ ಮಗು ಬದುಕುಳಿದಿದೆ ಎಂದು ಕುಟುಂಬಸ್ಥರ ಮಾತಾಗಿದೆ.
ಓದಿ: Leopard death: ಬಂಡೀಪುರ ಅರಣ್ಯದಲ್ಲಿ 3 ಚಿರತೆಗಳ ಶವ ಪತ್ತೆ; ಸಾಕು ನಾಯಿಯ ಕಳೇಬರಕ್ಕೆ ವಿಷ ಬೆರೆಸಿದ ವ್ಯಕ್ತಿ ಸೆರೆ
ಹಿಮ ಚಿರತೆ ಪ್ರತ್ಯೇಕ್ಷ: ಇತ್ತೀಚೆಗೆ ಹಿಮಾಲಯದ ಮಡಿಲಿನಲ್ಲಿರುವ ಗಂಗೋತ್ರಿ ರಾಷ್ಟ್ರೀಯ ಉದ್ಯಾನದ ನೆಲೋಂಗ್ ಕಣಿವೆಯ ಪಗಲ್ನಾಲೆ ಬಳಿ ಅಪರೂಪದ ಹಿಮ ಚಿರತೆಯೊಂದು ಕ್ಯಾಮರಾ ಕಣ್ಣಿಗೆ ಸೆರೆಯಾಗಿತ್ತು. ಗಡಿ ರಸ್ತೆ ಸಂಸ್ಥೆ (ಬಿಆರ್ಒ)ಯ ಮೇಜರ್ ಬಿನು ವಿ.ಎಸ್ ಅವರು, ನೆಲಾಂಗ್ ಕಣಿವೆ ಪ್ರದೇಶದಲ್ಲಿ ಅಪರೂಪದ ಈ ಹಿಮ ಚಿರತೆಯ ಫೋಟೋವನ್ನು ಸೆರೆ ಹಿಡಿದಿದ್ದರು. ಹಿಮ ಚಿರತೆ ಪತ್ತೆಯಾದ ಹಿನ್ನಲೆ ಈ ಕಣಿವೆ ಪ್ರದೇಶದಲ್ಲಿ ಅತಿ ಹೆಚ್ಚು ಹಿಮ ಚಿರತೆಗಳು ಅಭಿವೃದ್ಧಿ ಹೊಂದುತ್ತಿರುವುದನ್ನು ಸೂಚಿಸಿದಂತಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಅಧಿಕೃತ ಮೂಲಗಳ ಮಾಹಿತಿ ಪ್ರಕಾರ ಉತ್ತರಾಖಂಡದ ಗಂಗೋತ್ರಿ ರಾಷ್ಟ್ರೀಯ ಉದ್ಯಾನವು 35 ಕ್ಕೂ ಹೆಚ್ಚು ಹಿಮ ಚಿರತೆಗಳಿಗೆ ನೆಲೆಯಾಗಿದೆ ಎಂದು ನಂಬಲಾಗಿದೆ.