ETV Bharat / bharat

ಸೆ.25ರಂದು 'ಭಾರತ್ ಬಂದ್'ಗೆ ರೈತರ ಕರೆ : ಬೆಂಬಲ ಸೂಚಿಸಿದ ಎಡಪಕ್ಷಗಳು - September 25

ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಮತ್ತು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡುವ ಕಾನೂನು ಖಾತರಿ ನೀಡಬೇಕೆಂದು ಒತ್ತಾಯಿಸಿ ಮಾಡುತ್ತಿರುವ ರೈತರ ಹೋರಾಟ 10ನೇ ತಿಂಗಳಿಗೆ ಪ್ರವೇಶಿಸಿದೆ..

Bharat Bandh
Bharat Bandh
author img

By

Published : Sep 3, 2021, 5:44 PM IST

ನವದೆಹಲಿ : ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಸೆಪ್ಟೆಂಬರ್ 25ರಂದು ರೈತ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್​ಗೆ ಎಡಪಕ್ಷಗಳು ತಮ್ಮ ಬೆಂಬಲ ಸೂಚಿಸಿವೆ.

ಗುರುವಾರ ಬಿಡುಗಡೆ ಮಾಡಿದ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಎಡಪಕ್ಷಗಳಾದ ಸಿಪಿಐ (ಎಂ), ಸಿಪಿಐ, ಫಾರ್ವರ್ಡ್ ಬ್ಲಾಕ್ ಮತ್ತು ಆರ್​​ಎಸ್​ಪಿ ಮುಷ್ಕರಕ್ಕೆ ಬೆಂಬಲ ನೀಡುವಂತೆ ಜನರಿಗೂ ಮನವಿ ಮಾಡಿವೆ.

ಇದನ್ನೂ ಓದಿ: ಬೇಡಿಕೆ ಈಡೇರುವವರೆಗೆ ರೈತ ಚಳವಳಿ ಮುಂದುವರೆಯುತ್ತದೆ: ಟಿಕಾಯತ್

ನರೇಂದ್ರ ಮೋದಿ ಸರ್ಕಾರವು ನಿರ್ಲಕ್ಷ್ಯದಿಂದ ಮುಂದುವರಿಯುತ್ತಿದೆ ಮತ್ತು ಮಾತುಕತೆಯ ಮೂಲಕ ಅನ್ನದಾತರ ಸಮಸ್ಯೆಗಳನ್ನು ಬಗೆಹರಿಸಲು ನಿರಾಕರಿಸುತ್ತಿದೆ. ಸರ್ಕಾರದ ಈ ಹಠಮಾರಿತನವನ್ನು ನಾವು ಖಂಡಿಸುತ್ತಿದ್ದೇವೆ. ಕೂಡಲೇ ಕೃಷಿ ಕಾನೂನು ಹಾಗೂ ರಾಷ್ಟ್ರೀಯ ಹಣಗಳಿಕೆಯ ಪೈಪ್‌ಲೈನ್ ಅನ್ನು ರದ್ದುಗೊಳಿಸಬೇಕು ಮತ್ತು ಎಂಎಸ್‌ಪಿ ಜಾರಿಗೊಳಿಸಬೇಕು ಎಂದು ಎಡಪಕ್ಷಗಳು ಒತ್ತಾಯಿಸಿವೆ.

ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಮತ್ತು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡುವ ಕಾನೂನು ಖಾತರಿ ನೀಡಬೇಕೆಂದು ಒತ್ತಾಯಿಸಿ ಮಾಡುತ್ತಿರುವ ರೈತರ ಹೋರಾಟ 10ನೇ ತಿಂಗಳಿಗೆ ಪ್ರವೇಶಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.