ಶಹಜಾನ್ಪುರ್(ಉತ್ತರ ಪ್ರದೇಶ): ಕೋರ್ಟ್ ಆವರಣದಲ್ಲೇ ವಕೀಲನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಶಹಜಾನ್ಪುರ್ದಲ್ಲಿ ನಡೆದಿದ್ದು, ಮೃತರನ್ನ ಭುಪೇಂದ್ರ ಪ್ರತಾಪ್ ಸಿಂಗ್ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಶಹಜಾನ್ಪುರ್ ಸಿವಿಲ್ ಕೋರ್ಟ್ನ ಮೂರನೇ ಮಹಡಿಯಲ್ಲಿ ಈ ದುರ್ಘಟನೆ ನಡೆದಿದ್ದು, ಕಂಟ್ರಿ(ನಾಡ) ಪಿಸ್ತೂಲ್ನಿಂದ ವಕೀಲರ ಮೇಲೆ ಹಲ್ಲೆ ನಡೆಸಲಾಗಿದೆ. ಘಟನೆ ನಡೆಯುತ್ತಿದ್ದಂತೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ದುಷ್ಕರ್ಮಿಗಳ ಬಂಧನಕ್ಕಾಗಿ ವಿಶೇಷ ತಂಡ ರಚನೆ ಮಾಡಿ ಕಾರ್ಯಾಚರಣೆ ಆರಂಭಿಸಿದ್ದಾರೆ.
-
Lawyer shot dead in court complex in Shahjahanpur today
— ANI UP (@ANINewsUP) October 18, 2021 " class="align-text-top noRightClick twitterSection" data="
Forensics team have collected the evidence from the incident spot. Post-mortem of the deceased to be conducted by a panel of 3-doctors. Further investigation is underway: Police pic.twitter.com/4yM3unXYMA
">Lawyer shot dead in court complex in Shahjahanpur today
— ANI UP (@ANINewsUP) October 18, 2021
Forensics team have collected the evidence from the incident spot. Post-mortem of the deceased to be conducted by a panel of 3-doctors. Further investigation is underway: Police pic.twitter.com/4yM3unXYMALawyer shot dead in court complex in Shahjahanpur today
— ANI UP (@ANINewsUP) October 18, 2021
Forensics team have collected the evidence from the incident spot. Post-mortem of the deceased to be conducted by a panel of 3-doctors. Further investigation is underway: Police pic.twitter.com/4yM3unXYMA
ಯಾವ ಕಾರಣಕ್ಕಾಗಿ ಈ ಕೊಲೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲವಾದರೂ,ಹಳೇ ವೈಷಮ್ಯದಿಂದಾಗಿ ಕೃತ್ಯವೆಸಗಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಘಟನಾ ಸ್ಥಳದಿಂದ ನಾಡ ಪಿಸ್ಥೂಲ್ ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಶೋಧಕಾರ್ಯ ಆರಂಭ ಮಾಡಿದ್ದಾರೆ.
-
यूपी के जिला शाहजहाँपुर के कोर्ट परिसर में वकील की आज दिन दहाड़े हुई हत्या अति-दुखद व शर्मनाक जो यहाँ की भाजपा सरकार में कानून-व्यवस्था की स्थिति व इस सम्बंध में सरकारी दावों की पोल खोलती है। अब अन्ततः यही सवाल उठता है कि यूपी में आखिर सुरक्षित कौन? सरकार इस ओर समुचित ध्यान दे।
— Mayawati (@Mayawati) October 18, 2021 " class="align-text-top noRightClick twitterSection" data="
">यूपी के जिला शाहजहाँपुर के कोर्ट परिसर में वकील की आज दिन दहाड़े हुई हत्या अति-दुखद व शर्मनाक जो यहाँ की भाजपा सरकार में कानून-व्यवस्था की स्थिति व इस सम्बंध में सरकारी दावों की पोल खोलती है। अब अन्ततः यही सवाल उठता है कि यूपी में आखिर सुरक्षित कौन? सरकार इस ओर समुचित ध्यान दे।
— Mayawati (@Mayawati) October 18, 2021यूपी के जिला शाहजहाँपुर के कोर्ट परिसर में वकील की आज दिन दहाड़े हुई हत्या अति-दुखद व शर्मनाक जो यहाँ की भाजपा सरकार में कानून-व्यवस्था की स्थिति व इस सम्बंध में सरकारी दावों की पोल खोलती है। अब अन्ततः यही सवाल उठता है कि यूपी में आखिर सुरक्षित कौन? सरकार इस ओर समुचित ध्यान दे।
— Mayawati (@Mayawati) October 18, 2021
ಘಟನೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಮಾಯಾವತಿ, ನ್ಯಾಯಾಲಯದ ಆವರಣದಲ್ಲಿ ಹಗಲು ಹೊತ್ತಿನಲ್ಲೇ ವಕೀಲರೊಬ್ಬರ ಹತ್ಯೆ ಮಾಡಿರುವುದು ಅತ್ಯಂತ ದುಃಖಕರ ಹಾಗೂ ನಾಚಿಕೆಗೇಡಿನ ಸಂಗತಿ. ಇದು ಇಲ್ಲಿನ ಬಿಜೆಪಿ ಸರ್ಕಾರದಲ್ಲಿನ ಕಾನೂನು - ಸುವ್ಯವಸ್ಥೆ ಬಗ್ಗೆ ತಿಳಿಸುತ್ತದೆ. ಉತ್ತರ ಪ್ರದೇಶದಲ್ಲಿ ಯಾರು ಸುರಕ್ಷಿತವಾಗಿದ್ದಾರೆ ಎಂಬ ಪ್ರಶ್ನೆ ಉದ್ಭವವಾಗುತ್ತದೆ ಎಂದಿರುವ ಮಾಯಾವತಿ, ಸರ್ಕಾರ ಇದರ ಬಗ್ಗೆ ಗಮನ ಹರಿಸಲಿ ಎಂದಿದ್ದಾರೆ.
ಇದನ್ನೂ ಓದಿರಿ: ಹೊಸ ಹೇರ್ ಸ್ಟೈಲ್ನಲ್ಲಿ ಶಿಲ್ಪಾ ಶೆಟ್ಟಿ.. ಈ ರೀತಿಯಾಗಿ ಕಾಲೆಳೆದ ನೆಟ್ಟಿಗರು!
ಕಳೆದ ಕೆಲ ದಿನಗಳ ಹಿಂದೆ ದೆಹಲಿಯ ರೋಹಿಣಿ ಕೋರ್ಟ್ನಲ್ಲಿ ಲಾಯರ್ಗಳ ಸಮವಸ್ತ್ರ ಹಾಕಿಕೊಂಡು ಕೋರ್ಟ್ನೊಳಗೆ ನುಗ್ಗಿ, ಓರ್ವ ಗ್ಯಾಂಗ್ಸ್ಟರ್ಗೆ ಗುಂಡಿಕ್ಕಿ ಕೊಲೆ ಮಾಡಿದ್ದರು.