ETV Bharat / bharat

'ಮಹತ್ವಾಕಾಂಕ್ಷಿ ಬ್ಲಾಕ್' ಯೋಜನೆ ಆರಂಭ: ತರ್ಕಹೀನ ನಿರ್ಬಂಧ ಬೇಡ ಎಂದ ಪ್ರಧಾನಿ ಮೋದಿ - etv bharat kannada

ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿರುವ ಮಹತ್ವಾಕಾಂಕ್ಷಿ ಬ್ಲಾಕ್ ಯೋಜನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದರು. ವಿಶ್ವದ ಸರಕು ಪೂರೈಕೆ ಸರಪಳಿಯಲ್ಲಿ ಭಾರತವು ಮುಖ್ಯ ಪಾತ್ರ ವಹಿಸಲಿದೆ ಎಂದು ಪ್ರಧಾನಿ ಈ ಸಂದರ್ಭದಲ್ಲಿ ಪ್ರತಿಪಾದಿಸಿದರು.

ಪ್ರಧಾನಿ ಮೋದಿ ಮಹತ್ವಾಕಾಂಕ್ಷೆಯ ಬ್ಲಾಕ್ ಕಾರ್ಯಕ್ರಮಕ್ಕೆ ಚಾಲನೆ
PM Modi launches Aspirational Block Programme asks chief secys to end mindless compliances
author img

By

Published : Jan 8, 2023, 1:05 PM IST

ನವದೆಹಲಿ: ದೇಶದ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಯ ಗುರಿಯನ್ನು ಹೊಂದಿರುವ ಯೋಜನೆಯ ಮಾದರಿಯಲ್ಲಿ ಮಹತ್ವಾಕಾಂಕ್ಷಿ ಬ್ಲಾಕ್ ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಲು ಮೂಲಸೌಕರ್ಯ, ಹೂಡಿಕೆ, ನಾವೀನ್ಯತೆ ಮತ್ತು ಸೇರ್ಪಡೆ ಈ ನಾಲ್ಕು ಸ್ತಂಭಗಳ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸುತ್ತಿದೆ ಎಂದು ಹೇಳಿದರು.

ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಎರಡನೇ ರಾಷ್ಟ್ರೀಯ ಸಮ್ಮೇಳನದ ಮೂರನೇ ಮತ್ತು ಕೊನೆಯ ದಿನದಂದು ಅಧ್ಯಕ್ಷತೆ ವಹಿಸಿ ಮಾತನಾಡಿದ ಮೋದಿ, ಜಾಗತಿಕ ಪೂರೈಕೆ ಸರಪಳಿಯಲ್ಲಿ ಸ್ಥಿರತೆ ಮೂಡಿಸಲು ಇಡೀ ಜಗತ್ತು ಭಾರತದತ್ತ ನೋಡುತ್ತಿದೆ. ಈ ನಿಟ್ಟಿನಲ್ಲಿ ದೇಶದ ಎಂಎಸ್​ಎಂಇ ವಲಯವು ಜಾಗತಿಕ ಚಾಂಪಿಯನ್ ಆಗುವಂತೆ ಮತ್ತು ಈ ವಲಯ ಜಾಗತಿಕ ಮೌಲ್ಯ ಸರಪಳಿಯ ಒಂದು ಭಾಗವಾಗುವಂತೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಕೇಳಿಕೊಂಡರು. ರಾಜ್ಯಗಳು ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ಮತ್ತು ಭಾರತವೇ ಪ್ರಥಮ ಎಂಬ ವಿಧಾನದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಮುನ್ನಡೆ ಸಾಧಿಸಿದರೆ ಮಾತ್ರ ದೇಶವು ಇದರ ಸಂಪೂರ್ಣ ಪ್ರಯೋಜನವನ್ನು ಪಡೆಯಬಹುದು. ತರ್ಕವಿಲ್ಲದ ಅನುಸರಣೆ ಹಾಗೂ ಹಳತಾದ ಕಾನೂನು ಮತ್ತು ನಿಯಮಗಳನ್ನು ಕೊನೆಗೊಳಿಸುವತ್ತ ಗಮನಹರಿಸುವಂತೆ ಪ್ರಧಾನ ಮಂತ್ರಿಗಳು ಮುಖ್ಯ ಕಾರ್ಯದರ್ಶಿಗಳಿಗೆ ಕರೆ ನೀಡಿದರು.

ಭಾರತವು ಯಾರಿಗೂ ಸಾಟಿಯಿಲ್ಲದಂಥ ಸುಧಾರಣೆಗಳನ್ನು ಪ್ರಾರಂಭಿಸುತ್ತಿರುವ ಈ ಸಮಯದಲ್ಲಿ, ಮಿತಿಮೀರಿದ ನಿಯಂತ್ರಣ ಮತ್ತು ತರ್ಕಹೀನ ನಿರ್ಬಂಧಗಳಿಗೆ ಯಾವುದೇ ಅವಕಾಶವಿಲ್ಲ. ರಾಜ್ಯಗಳು ಅಭಿವೃದ್ಧಿ ಪರ ಆಡಳಿತ, ಸುಲಭ ವ್ಯವಹಾರ, ಬದುಕಲು ಸುಲಭ ಮತ್ತು ದೃಢವಾದ ಮೂಲಸೌಕರ್ಯಗಳನ್ನು ಒದಗಿಸುವತ್ತ ಗಮನಹರಿಸಬೇಕು ಎಂದು ಮೋದಿ ಟ್ವೀಟ್​ನಲ್ಲಿ ಹೇಳಿದ್ದಾರೆ. ನಾವು ಸ್ವಯಂ ಪ್ರಮಾಣೀಕರಣ, ಸ್ವಯಂ ಅನುಮೋದನೆಗಳು ಮತ್ತು ನಿಯಮಗಳ ಪ್ರಮಾಣೀಕರಣದತ್ತ ಸಾಗಬೇಕು. ಇಡೀ ವಿಶ್ವದ ದೃಷ್ಟಿ ಭಾರತದ ಮೇಲೆ ನೆಟ್ಟಿರುವುದರಿಂದ ನಮ್ಮ ಯುವಜನರ ಅಪ್ರತಿಮ ಪ್ರತಿಭೆಯ ಬಲದಿಂದ ಮುಂಬರುವ ವರ್ಷಗಳು ಭಾರತದ ವರ್ಷಗಳಾಗಲಿವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ದೇಶವು ಸ್ವಾವಲಂಬಿಯಾಗಲು ಮತ್ತು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ನಮ್ಮ ಎಂಎಸ್​ಎಂಇ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು) ವಲಯವನ್ನು ಬಲಪಡಿಸುವುದು ಮುಖ್ಯವಾಗಿದೆ ಎಂದು ಮೋದಿ ಹೇಳಿದರು. ಸ್ಥಳೀಯ ಉತ್ಪನ್ನಗಳನ್ನು ಜನಪ್ರಿಯಗೊಳಿಸುವುದು ಕೂಡ ಅಷ್ಟೇ ಮುಖ್ಯವಾಗಿದೆ. 2023ರ ವರ್ಷ ಅಂತಾರಾಷ್ಟ್ರೀಯ ರಾಗಿ ವರ್ಷವಾಗುವುದರ ಮಹತ್ವ ಮತ್ತು ಅವರ ಉತ್ಪನ್ನಗಳ ಜನಪ್ರಿಯತೆಯನ್ನು ಹೆಚ್ಚಿಸುವ ಕ್ರಮಗಳ ಕುರಿತು ಪ್ರಧಾನಮಂತ್ರಿಗಳು ಇದೇ ಸಂದರ್ಭದಲ್ಲಿ ಚರ್ಚಿಸಿದರು. ಭಾರತವು ಜಿ 20 ಅಧ್ಯಕ್ಷ ಸ್ಥಾನ ಪಡೆಯುತ್ತಿರುವುದು, ಐದನೇ ಅತಿದೊಡ್ಡ ಜಾಗತಿಕ ಆರ್ಥಿಕತೆಯಾಗಿರುವುದು, ಹೊಸ ಸ್ಟಾರ್ಟ್‌ಅಪ್‌ಗಳ ತ್ವರಿತ ನೋಂದಣಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆದಾರರಿಗೆ ಅವಕಾಶ, ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯ ಪ್ರಾರಂಭ ಮತ್ತು ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್‌ನ ಅನುಮೋದನೆಗಳ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.

ಎಂಎಸ್‌ಎಂಇಗಳನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸಲು ಹಣಕಾಸು, ತಂತ್ರಜ್ಞಾನ, ಮಾರುಕಟ್ಟೆ ಮತ್ತು ಕೌಶಲ್ಯಗಳು ಆ ವಲಯಕ್ಕೆ ಲಭಿಸಬೇಕು ಎಂದು ಪ್ರಧಾನಿ ತಿಳಿಸಿದರು. ಜಿಇಎಂ ಪೋರ್ಟಲ್‌ನಲ್ಲಿ ಹೆಚ್ಚಿನ ಎಂಎಸ್‌ಎಂಇಗಳನ್ನು ತರುವ ಕುರಿತು ಮಾತನಾಡಿದರು. ಎಂಎಸ್‌ಎಂಇಗಳ ಅಭಿವೃದ್ಧಿಯಲ್ಲಿ ಕ್ಲಸ್ಟರ್ ವಿಧಾನದ ಯಶಸ್ಸಿನ ಕುರಿತು ಚರ್ಚಿಸಿದ ಅವರು, ವಿಶಿಷ್ಟವಾದ ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸಲು ಮತ್ತು ಅವುಗಳಿಗೆ ಜಿಐ ಟ್ಯಾಗ್‌ಗಳ ನೋಂದಣಿಯನ್ನು ಪಡೆಯಲು ಎಂಎಸ್‌ಎಂಇ ಕ್ಲಸ್ಟರ್‌ಗಳು ಮತ್ತು ಸ್ವ-ಸಹಾಯ ಗುಂಪುಗಳ ಸಂಪರ್ಕದ ಸಹಾಯ ಪಡೆಯಬಹುದು. ಇದನ್ನು ಒಂದು ಜಿಲ್ಲೆ ಒಂದು ಉತ್ಪನ್ನದ ಯೋಜನೆಯೊಂದಿಗೆ ಸಂಯೋಜಿಸಬಹುದು ಎಂದು ಅವರು ಹೇಳಿದರು.

ಇದನ್ನೂ ಓದಿ: ಬಿಹಾರದಲ್ಲಿ ಜಾತಿವಾರು ಜನಗಣತಿ ಆರಂಭ: ಎರಡು ಹಂತದಲ್ಲಿ ಜನಗಣತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.