ETV Bharat / bharat

ರಾಹುಲ್​ಗಾಗಿ ಮುಂದುವರಿದ ಕಾರ್ಯಾಚರಣೆ.. ಪ್ರಕೃತಿ ಅಡ್ಡಿ ನಡುವೆಯೂ ಭರದಿಂದ ಸಾಗುತ್ತಿರುವ ರಕ್ಷಣಾ ಕಾರ್ಯ!

author img

By

Published : Jun 14, 2022, 7:22 AM IST

ಜಾಂಜ್‌ಗೀರ್ ಚಂಪಾ ಪಿಹ್ರಿದ್​ ಗ್ರಾಮದಲ್ಲಿ ಬೋರ್‌ವೆಲ್‌ನಲ್ಲಿ ಬಾಲಕ ರಾಹುಲ್​ ಸಿಲುಕಿ 80 ಗಂಟೆಗಳು ಕಳೆದಿವೆ. ಶುಕ್ರವಾರ ಮಧ್ಯಾಹ್ನ 3 ಗಂಟೆ ವೇಳೆ ಮನೆ ಹಿಂಭಾಗದ ಬ್ಯಾರಿ ಬೋರ್‌ವೆಲ್‌ಗೆ ಬಿದ್ದ ರಾಹುಲ್​ ಅನ್ನು ಕಾಪಾಡಲು ಎನ್​ಡಿಆರ್​ಎಫ್​ ತಂಡ ಮತ್ತು ಸ್ಥಳೀಯ ಪೊಲೀಸ್​ ತಂಡ ಸೇರಿದಂತೆ ಅನೇಕ ಅಧಿಕಾರಿಗಳು ನಿರಂತರ ಶ್ರಮ ವಹಿಸುತ್ತಿದ್ದಾರೆ. ಇನ್ನು ಕೆಲವೇ ಕ್ಷಣಗಳಲ್ಲಿ ರಾಹುಲ್​ ನಮ್ಮ ಕೈ ಸೇರಲಿದ್ದಾನೆ.

latest update of rahul sahu Rescue operation  Rescue operation of Rahul sahu  Rahul sahu fell in borewell of Pihrid village of Janjgir champa  Janjgir champa Chhattisgarh Operation Rahul sahu  Chhattisgarh Operation Rahul sahu  rahul sahu Rescue operation  ಜಾಂಜ್‌ಗೀರ್ ಚಂಪಾ ಪಿಹ್ರಿದ್​ ಗ್ರಾಮದಲ್ಲಿ ಬೋರ್‌ವೆಲ್‌ ವಿಚಾರ  ಜಾಂಜ್‌ಗೀರ್ ಚಂಪಾ ಪಿಹ್ರಿದ್​ ಗ್ರಾಮದಲ್ಲಿ ಬೋರ್‌ವೆಲ್‌ನಿಂದ ಹೊರಗೆ ಬಂದ ರಾಹುಲ್​ ಜಾಂಜ್‌ಗೀರ್ ಚಂಪಾ ಪಿಹ್ರಿದ್​ ಗ್ರಾಮದಲ್ಲಿ ಬೋರ್‌ವೆಲ್‌ ಕಾರ್ಯಾಚರಣೆ  ಜಾಂಜ್​ಗೀರ್​ನಲ್ಲಿ ರಾಹುಲ್​ಗಾಗಿ ನಡೆಯುತ್ತಿರುವ ರಕ್ಷಣಾ ಕಾರ್ಯ  80 ಗಂಟೆಗಳ ಬಳಿಕ ಬದುಕುಳಿದ ಪಿಹ್ರಿದ್ ಗ್ರಾಮದ ರಾಹುಲ್ ಸಾಹು  ಜಾಂಜ್‌ಗೀರ್ ಚಂಪಾ ಬೋರ್​ವೆಲ್​ ಕಾರ್ಯಾಚರಣೆ ಯಶಸ್ವಿ
ಬದುಕುಳಿದ ಬಾಲಕ

ಜಂಜಗೀರ್ ಚಂಪಾ: ಶುಕ್ರವಾರ ಪಿಹ್ರಿದ್ ಗ್ರಾಮದಲ್ಲಿ ರಾಹುಲ್ ಸಾಹು ಬೋರ್‌ವೆಲ್‌ಗೆ ಬಿದ್ದಿದ್ದಾರೆ. 60 ಅಡಿ ಕೆಳಗಿರುವ ಬೋರ್‌ವೆಲ್‌ನಲ್ಲಿ ಸಿಲುಕಿಕೊಂಡಿರುವ ರಾಹುಲ್ ಅನ್ನು ಹೊರ ತರಲು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಎನ್‌ಡಿಆರ್‌ಎಫ್ ತಂಡ ರಾಹುಲ್ ಅನ್ನು ತಲುಪಲು ಸುರಂಗ ನಿರ್ಮಿಸುವ ಕೆಲಸ ಮಾಡುತ್ತಿದೆ. 80 ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿರುವ ರಕ್ಷಣಾ ರಾಹುಲ್​ ಸಮೀಪ ತೆರಳಿದ್ದು, ರಾಹುಲ್​ ಧ್ವನಿಯನ್ನು ಕೇಳುತ್ತಿದ್ದಾರೆ ಎಂದು ಹೇಳಿದ್ದಾರೆ.

  • सबकी दुआओं में शामिल है राहुल

    राहुल के बचाव अभियान में अब गांव पिहरिद का हर नागरिक जुड़ गया है। आम लोग गांव में लगे सभी हैण्डपम्प से पानी निकाल रहे जिससे कि बोरवेल में पानी का स्तर कम रहे। राहुल के बचाव अभियान में हर वर्ग की प्रार्थना शामिल है।#saverahulabhiyan @JanjgirDist pic.twitter.com/kTmJPt5byF

    — CMO Chhattisgarh (@ChhattisgarhCMO) June 13, 2022 " class="align-text-top noRightClick twitterSection" data=" ">

ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡದೊಂದಿಗೆ, ಎಸ್‌ಇಸಿಎಲ್ ಮತ್ತು ಬಾಲ್ಕೊ ರಕ್ಷಣಾ ತಂಡವೂ ಸ್ಥಳದಲ್ಲಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಹೊರ ಬರುವ ರಾಹುಲ್​ಗೆ ಬಟ್ಟೆ ತರಲಾಗಿದೆ. ರಾಹುಲ್‌ಗಾಗಿ ಹಳದಿ ಬಣ್ಣದ ಅಂಗಿ ಮತ್ತು ಪ್ಯಾಂಟ್‌ಗಳನ್ನು ತರಲಾಗಿತ್ತು. ರಾಹುಲ್‌ನನ್ನು ಹೊರತೆಗೆದ ನಂತರ ರಕ್ಷಣಾ ತಂಡವು ರಾಹುಲ್‌ನನ್ನು ಸ್ವಚ್ಛಗೊಳಿಸಿ ಆ್ಯಂಬುಲೆನ್ಸ್‌ನಿಂದ ಬಿಲಾಸ್‌ಪುರಕ್ಕೆ ಕರೆದೊಯ್ಯುತ್ತದೆ. ರಾಹುಲ್ ಸುರಕ್ಷಿತವಾಗಿ ಹೊರಬರಲು ಗ್ರಾಮಸ್ಥರು ರಾತ್ರಿಯಿಡೀ ಪ್ರಾರ್ಥಿಸುತ್ತಿದ್ದಾರೆ. ರಾಹುಲ್‌ರನ್ನು ಆರೋಗ್ಯದಿಂದ ನೋಡಲು ಮಹಿಳೆಯರೂ ರಾತ್ರಿಯಿಂದಲೇ ರಕ್ಷಣಾ ಕಾರ್ಯಾಚರಣೆ ಸ್ಥಳಕ್ಕೆ ತಲುಪುತ್ತಿದ್ದಾರೆ.

  • ब्रेकिंग -

    मुख्यमंत्री श्री @bhupeshbaghel ने @JanjgirDist कलेक्टर जितेंद्र शुक्ला व एस.पी. विजय अग्रवाल को राहुल के रेस्क्यू के बाद उसे अस्पताल ले जाने हेतु ग्रीन कॉरिडोर बनाने के दिए निर्देश |#Saverahulabhiyaan

ಯಂತ್ರ ಖರೀದಿ: ಬಿಲಾಸ್ಪುರದಿಂದ ಡ್ರಿಲ್ ಯಂತ್ರವನ್ನು ಖರೀದಿಸಲಾಗಿದ್ದು, ಕಾರ್ಯಾಚರಣೆ ಆರಂಭಿಸಲಾಗಿತ್ತು. ಆದರೆ, ಕೊರೆಯುವ ಕೆಲಸವನ್ನು ಬಹಳ ಎಚ್ಚರಿಕೆಯಿಂದ ಮಾಡಲಾಗುತ್ತಿದೆ. ಇದರಿಂದ ಎಲ್ಲಿಯೂ ಮಣ್ಣು ಇಲ್ಲದಂತಾಗಿದೆ. ಇತ್ತೀಚೆಗಷ್ಟೇ ಬಂದಿರುವ ಮಾಹಿತಿಯ ಪ್ರಕಾರ ರಾಹುಲ್ ಚಲನವಲನಗಳು ಕಡಿಮೆಯಾಗಿದೆ. ಆದರೆ ರಾಹುಲ್​ ಚೆನ್ನಾಗಿದ್ದಾರೆ ಎಂದು ಜಿಲ್ಲಾಡಳಿತ ಹೇಳಿದೆ.

ಜನರೇಟರ್ ವ್ಯವಸ್ಥೆ: ರಾಹುಲ್ ಸಾಹು ರಕ್ಷಿಸಲು ಹವಾಮಾನದ ಪರಿಣಾಮವನ್ನು ಎದುರಿಸಬೇಕಾಗ ಬಹುದು. ಪಿಹ್ರಿದ್​ನಲ್ಲಿ ಬಲವಾದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವಂತಹ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ವಿದ್ಯುತ್ ಸೇವೆಗೆ ತೊಂದರೆಯಾಗಬಹುದು. ಇದಕ್ಕಾಗಿ ವಿದ್ಯುತ್ ವ್ಯವಸ್ಥೆ ಸುಗಮವಾಗಿರಲು ಜನರೇಟರ್ ವ್ಯವಸ್ಥೆ ಮಾಡಲಾಗಿದೆ.

ಓದಿ: ಕೊಳವೆ ಬಾವಿಗೆ ಬಿದ್ದ 12 ವರ್ಷದ ಬಾಲಕ... ಹುಡುಗನ ಜೀವ ಉಳಿಸಲು ಸಾಗಿದೆ ಕಾರ್ಯಾಚರಣೆ

ವೈದ್ಯಕೀಯ ತಂಡಕ್ಕೆ ಎಚ್ಚರಿಕೆ: ರಕ್ಷಣಾ ಸ್ಥಳದಲ್ಲಿ ವೈದ್ಯಕೀಯ ಸಿಬ್ಬಂದಿಯನ್ನು ಸಂಪೂರ್ಣ ಸಿದ್ಧತೆಯೊಂದಿಗೆ ಅಲರ್ಟ್ ಮೋಡ್‌ನಲ್ಲಿ ಇರಿಸಲಾಗಿದೆ. ಆ್ಯಂಬುಲೆನ್ಸ್​​​ಗಳನ್ನೂ ಸಿದ್ಧಪಡಿಸಲಾಗಿದೆ. ರಾಹುಲ್ ಹೊರ ತೆಗೆದ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುವುದು. ಸದ್ಯ ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಕೊರೆಯುವ ಕೆಲಸ ಪ್ರಗತಿಯಲ್ಲಿದೆ. ರಾಹುಲ್‌ಗಾಗಿ ಜಾಂಜ್‌ಗೀರ್ ಚಂಪಾದಿಂದ ಬಿಲಾಸ್‌ಪುರದ ಅಪೊಲೊ ಆಸ್ಪತ್ರೆವರೆಗೆ ಹಸಿರು ಕಾರಿಡಾರ್ ನಿರ್ಮಿಸಲಾಗುವುದು ಎಂದು ಹೇಳಲಾಗುತ್ತಿದೆ. ಹೀಗಾಗಿ ಅವರನ್ನು ಆದಷ್ಟು ಬೇಗ ಅಪೋಲೋ ಆಸ್ಪತ್ರೆಗೆ ಕರೆದೊಯ್ಯಬಹುದು.

  • मेडिकल टीम की कोशिश होगी जब राहुल को बाहर निकाला जाएगा तो उसकी स्वास्थ्य जांच करते हुए एम्बुलेंस में ही सम्पूर्ण चिकित्सकीय सुविधाएं उपलब्ध कराते हुए उसे अपोलो अस्पताल बिलासपुर तक सुरक्षित पहुँचाया जाए।

    2/2

ಬೋರ್ ನಲ್ಲಿ ನೀರು: ರಕ್ಷಣಾ ಕಾರ್ಯದ ವೇಳೆ ಗುಂಡಿಯಿಂದ ನೀರು ಸೋರುತ್ತಿದೆ. ಅದನ್ನು ತೆಗೆಯಲು ಗ್ರಾಮದ ಎಲ್ಲ ಬೋರ್‌ ಪಂಪ್‌ಗಳನ್ನು ಆರಂಭಿಸಲಾಗಿದೆ. ಗ್ರಾಮವು 2 ಸ್ಟಾಪ್ ಅಣೆಕಟ್ಟುಗಳನ್ನು ಹೊಂದಿದ್ದು, ಅದನ್ನು ಮುಚ್ಚಲಾಗಿದೆ. ಸುರಂಗ ಉತ್ಖನನದ ವೇಳೆ ಸಾಕಷ್ಟು ಧೂಳು ಹೊರಬರುತ್ತಿದೆ. ನೀರು ಚಿಮ್ಮಿಸುವ ಮೂಲಕ ಧೂಳನ್ನು ನಿಯಂತ್ರಿಸಲಾಗಿದೆ.

ಸೋಮವಾರ ರಕ್ಷಣಾ: ಸೋಮವಾರ ಬೆಳಗ್ಗೆ 6 ಗಂಟೆಯಿಂದಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು. ಬೋರ್‌ವೆಲ್ ತಲುಪಲು 20 ಕ್ಕೂ ಹೆಚ್ಚು ಅಡ್ಡ ಉತ್ಖನನ ಮಾಡಲಾಯಿತು. ಇದೇ ವೇಳೆ, ದೊಡ್ಡ ಬಂಡೆ ಬಂದಿದ್ದರಿಂದ ಸುರಂಗ ನಿರ್ಮಾಣಕ್ಕೆ ಸಾಕಷ್ಟು ತೊಂದರೆ ಉಂಟಾಗಿದ್ದು, ಈ ಬಂಡೆಯನ್ನು ಕಡಿಯಲು ಬಿಲಾಸ್ ಪುರದಿಂದ ಡ್ರಿಲ್ ಮಷಿನ್ ಖರೀದಿಸಲಾಗಿತ್ತು.

ಭಾನುವಾರ ಮತ್ತು ಶನಿವಾರದ ಕಾರ್ಯ: ಮೊದಲ ಹಂತದ ರೊಬೊಟಿಕ್ ರಕ್ಷಣಾ ಕಾರ್ಯಾಚರಣೆ ವಿಫಲವಾದ ಹಿನ್ನೆಲೆ ಸುರಂಗ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಸುರಂಗವನ್ನು ನಿರ್ಮಿಸಲು ಕುಸ್ಮುಂಡಾ ಮತ್ತು ಮನೇಂದ್ರಗಢ್‌ನ ಎಸ್‌ಇಸಿಎಲ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು. ಜಿಲ್ಲಾಧಿಕಾರಿ ಜಿತೇಂದ್ರ ಶುಕ್ಲಾ ಸೇರಿದಂತೆ ಎಲ್ಲ ಅಧಿಕಾರಿಗಳು ಪರಿಶೀಲನೆ ನಡೆಸಿದರು.

ರಾಹುಲ್ ಸಾಹು ಬೋರ್‌ವೆಲ್‌ಗೆ ಬಿದ್ದಿದ್ದು ಹೇಗೆ : ಜೂನ್ 10 ಶುಕ್ರವಾರ ಮಧ್ಯಾಹ್ನ ರಾಹುಲ್​ ತನ್ನ ಮನೆಯ ಹಿಂದೆ ಆಟವಾಡುತ್ತಿದ್ದಾಗ ಬೋರ್‌ವೆಲ್​ಗೆ ಬಿದ್ದಿದ್ದಾನೆ. ಘಟನೆ ಕುರಿತು ಮಾಹಿತಿ ಪಡೆದ ಜಿಲ್ಲಾಡಳಿತ ರಾತ್ರಿಯಿಂದಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿತ್ತು. ಜಿಲ್ಲಾಧಿಕಾರಿ ಜಿತೇಂದ್ರ ಶುಕ್ಲಾ ನೇತೃತ್ವದ ಜಿಲ್ಲಾಡಳಿತ ತಂಡ ಪಿಹ್ರಿದ್ ಗ್ರಾಮಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದರು.

ಗುಜರಾತ್‌ ಮತ್ತು ಒಡಿಶಾ ಅಧಿಕಾರಿಗಳು ಮೊಕ್ಕಾಂ: ರಾಹುಲ್ ಸಾಹುವನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆಯು ಯುದ್ಧದ ರೀತಿ ಪ್ರಾರಂಭವಾಯಿತು. ಜಿಲ್ಲಾಧಿಕಾರಿ ಜಿತೇಂದ್ರ ಶುಕ್ಲಾ ಮತ್ತು ಎಸ್ಪಿ ವಿಜಯ್ ಅಗರ್ವಾಲ್ ಅವರು ರಾಹುಲ್ ಕುಟುಂಬ ಸದಸ್ಯರನ್ನು ಮುಖ್ಯಮಂತ್ರಿಯೊಂದಿಗೆ ಮಾತನಾಡುವಂತೆ ಮಾಡಿದರು. ಶನಿವಾರ ಸಿಎಂ ಸೂಚನೆ ಮೇರೆಗೆ ಗುಜರಾತ್‌ನಿಂದ ರೋಬೋಟ್ ಇಂಜಿನಿಯರ್‌ಗೆ ಕರೆ ಮಾಡಲಾಗಿತ್ತು. ಒಡಿಶಾದಿಂದ ಎನ್‌ಡಿಆರ್‌ಎಫ್ ತಂಡವನ್ನು ಕರೆಸಲಾಗಿತ್ತು.

ಈ ರಕ್ಷಣಾ ಕಾರ್ಯಾಚರಣೆಯಲ್ಲಿ ನಾಲ್ಕು ಐಎಎಸ್​ ಅಧಿಕಾರಿಗಳು, ಇಬ್ಬರು ಐಪಿಎಸ್​ ಅಧಿಕಾರಿಗಳು, ಐದು ಹೆಚ್ಚುವರಿ ಎಸ್ಪಿ, ನಾಲ್ಕು ಎಸ್​ಡಿಒಪಿ, ಐದು ತಹಸೀಲ್ದಾರ್, ಎಂಟು TI ಮತ್ತು 120 ಪೊಲೀಸರು, EE (PWD), EE (PHE), CMHO, ಸಹಾಯಕ ಖನಿಜ ಅಧಿಕಾರಿ, 32 ಎನ್​ಡಿಆರ್​ಎಫ್​ ಸಿಬ್ಬಂದಿ, 15 ಎಸ್​ಡಿಆರ್​ಎಫ್​ ಸಿಬ್ಬಂದಿಯಿಂದ ಸೇರಿದಂತೆ ನೌಕರರು ಮತ್ತು ಗೃಹರಕ್ಷಕ ದಳದ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಯುತ್ತಿತ್ತು.

ಓದಿ: ಕೊಳವೆ ಬಾವಿಯಲ್ಲಿ ಬಿದ್ದ ಎರಡು ವರ್ಷದ ಮಗುವಿನ ರಕ್ಷಣೆ.. ಯೋಧರ ಕಾರ್ಯಕ್ಕೆ ಶ್ಲಾಘನೆ

ಸಿಎಂ ಭೂಪೇಶ್ ಬಘೇಲ್​ಗೆ ಮಾಹಿತಿ: ರಾಹುಲ್ ಸಾಹು ರಕ್ಷಣಾ ಕಾರ್ಯಾಚರಣೆಯನ್ನು ಸಿಎಂ ಭೂಪೇಶ್ ಬಘೇಲ್ ಕ್ಷಣದಿಂದ ಕ್ಷಣಕ್ಕೆ ಅಪ್​ಡೇಟ್​ ಪಡೆದುಕೊಳ್ಳುತ್ತಿದ್ದಾರೆ. ಸಿಎಂ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಅವರು ಜಿಲ್ಲಾಧಿಕಾರಿ ಜಿತೇಂದ್ರ ಶುಕ್ಲಾ ಅವರಿಂದ ರಾಹುಲ್ ಸಾಹುಗೆ ಸಂಬಂಧಿಸಿದ ಮಾಹಿತಿಯನ್ನು ತೆಗೆದುಕೊಳ್ಳುತ್ತಿದ್ದಾರೆ.

ಸುಮಾರು 80ಕ್ಕೂ ಹೆಚ್ಚು ಗಂಟೆಗಳ ಕಾಲ ಬೋರ್​ವೆಲ್​ನಲ್ಲಿ ಸಿಲುಕಿಕೊಂಡಿರುವ ರಾಹುಲ್​ಗೆ ವೈದ್ಯರ ತಂಡವು ಆ್ಯಂಬುಲೆನ್ಸ್‌ನಲ್ಲಿ ಪ್ರಥಮ ಚಿಕಿತ್ಸೆ ನೀಡಲಿದೆ. ರಕ್ಷಣಾ ಸ್ಥಳದಲ್ಲಿ ಕೊರೆಯುವ ಯಂತ್ರವನ್ನು ಮುಚ್ಚಲಾಗಿದ್ದು, ಈಗ ಕೈಯಿಂದ ಅಗೆಯಲಾಗುತ್ತಿದೆ ಎಂದು ಸಿಎಂ ಭೂಪೇಶ್ ಬಘೇಲ್ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.

ಆ್ಯಂಬುಲೆನ್ಸ್, ಆಕ್ಸಿಜನ್ ಮಾಸ್ಕ್, ಸ್ಟ್ರೆಚರ್ ವ್ಯವಸ್ಥೆ ಸೇರಿದಂತೆ ವೈದ್ಯಕೀಯ ಸಿಬ್ಬಂದಿ ಸಂಪೂರ್ಣ ಸಿದ್ಧತೆಯೊಂದಿಗೆ ಅಲರ್ಟ್ ಮೋಡ್‌ನಲ್ಲಿದ್ದಾರೆ. ರಾಹುಲ್ ಹೊರಗೆ ಕರೆದೊಯ್ದಾಗ ಅವರ ಆರೋಗ್ಯ ತಪಾಸಣೆ ನಡೆಸಿ, ಆ್ಯಂಬುಲೆನ್ಸ್‌ನಲ್ಲಿಯೇ ಸಂಪೂರ್ಣ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿ, ಅವರನ್ನು ಸುರಕ್ಷಿತವಾಗಿ ಬಿಲಾಸ್‌ಪುರದ ಅಪೋಲೋ ಆಸ್ಪತ್ರೆಗೆ ಕರೆದೊಯ್ಯಬೇಕು ಎಂಬುದು ವೈದ್ಯಕೀಯ ತಂಡದ ಪ್ರಯತ್ನವಾಗಿದೆ.

ಮಾಜಿ ಸಿಎಂ ರಮಣ್ ಸಿಂಗ್ ಪ್ರಾರ್ಥನೆ: ರಾಹುಲ್ ಸಾಹು ಅವರ ಯೋಗಕ್ಷೇಮಕ್ಕಾಗಿ ಮಾಜಿ ಸಿಎಂ ರಮಣ್ ಸಿಂಗ್ ಪ್ರಾರ್ಥಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.