ಪತ್ತನಂತಿಟ್ಟ(ಕೇರಳ): ಶಬರಿಮಲೆಗೆ ಬರಲು ಬಯಸುವವರಿಗೆ ಈಗಾಗಲೇ ಸ್ಪಾಟ್ ಬುಕಿಂಗ್ ಕಲ್ಪಿಸಲಾಗಿದ್ದು, ದಿನಕ್ಕೆ ಸುಮಾರು 5 ಸಾವಿರ ಮಂದಿ ಸ್ಪಾಟ್ ಬುಕಿಂಗ್ ಮಾಡಿಕೊಳ್ಳಬಹುದಾಗಿದೆ. ಆದರೆ ಈಗ ದಿನಕ್ಕೆ ಸರಾಸರಿ 700 ಮಂದಿ ಮಾತ್ರ ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ತಿರುವಂಕೂರು ದೇವಸ್ವಂ ಬೋರ್ಡ್ ಮಾಹಿತಿ ನೀಡಿದೆ.
ನೀಲಕ್ಕಲ್ ಸೇರಿದಂತೆ ಸುಮಾರು 10 ಸ್ಥಳಗಳಲ್ಲಿ ಸ್ಪಾಟ್ ಬುಕಿಂಗ್ಗೆ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ ಬುಕಿಂಗ್ ಮಾಡಿಕೊಳ್ಳುವ ಮೂಲಕ ಶಬರಿಮಲೆಗೆ ಯಾತ್ರಾರ್ಥಿಗಳು ಬರಬಹುದಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಹೇಳಿದೆ.
ಹೊರ ರಾಜ್ಯದವರಿಗೂ ಈ ಸೇವೆ ಬಳಸಿಕೊಳ್ಳಲು ಅವಕಾಶ ನೀಡಲಾಗಿದ್ದು, ಆನ್ಲೈನ್ ಮೂಲಕವೂ ಬುಕಿಂಗ್ ಮಾಡಿಕೊಳ್ಳಬಹುದಾಗಿದೆ. ಭಾನುವಾರದಂದು ಅತಿ ಹೆಚ್ಚು ಯಾತ್ರಾರ್ಥಿಗಳು ಅಂದರೆ 30 ಸಾವಿರಕ್ಕೂ ಹೆಚ್ಚು ಮಂದಿ ಶಬರಿಮಲೆ ಬಂದಿದ್ದಾರೆ.
ಶಬರಿಮಲೆ ಮಂಗಳವಾರ ಮುಂಜಾನೆ 3.30ಕ್ಕೆ ತೆರೆಯಲಿದೆ. ಬೆಳಗ್ಗೆ 5ರಿಂದ 7ರವರೆಗೆ ತುಪ್ಪದ ಅಭಿಷೇಕ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಹೇಳಿದೆ.
ಇದನ್ನೂ ಓದಿ: ವಿದ್ಯಾರ್ಥಿಗಳ ಮತಾಂತರ ಆರೋಪ: ಹಿಂದೂ ಸಂಘಟನೆ ಕಾರ್ಯಕರ್ತರಿಂದ ಶಾಲೆಗೆ ಕಲ್ಲು ತೂರಾಟ