ಜಮ್ಮು ಕಾಶ್ಮೀರ: ಶ್ರೀನಗರದ ಬಾರಾಮುಲ್ಲಾ ಹೆದ್ದಾರಿಯಲ್ಲಿ ತಪಾಸಣೆ ನಡೆಸುತ್ತಿದ್ದಾಗ ಭದ್ರತಾ ಪಡೆಗಳಿಂದ ಸೆರೆಹಿಡಿಯಲ್ಪಟ್ಟ ಲಷ್ಕರ್-ಇ-ತೊಯ್ಬಾ ಉಗ್ರ ಅಬ್ರಾರ್ ವಿಡಿಯೋ ವೈರಲ್ ಆಗುತ್ತಿದೆ.
ಶ್ರೀನಗರ ನಗರದ ಹೊರವಲಯದಲ್ಲಿರುವ ಮಾಲೂರಾ ಗ್ರಾಮದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಉಗ್ರ ಅಬ್ರಾರ್ ಹತನಾಗಿದ್ದ. ಅದಕ್ಕೂ ಮುನ್ನ ಆತನನ್ನು ಶ್ರೀನಗರದ ಬಾರಾಮುಲ್ಲಾ ಹೆದ್ದಾರಿಯಲ್ಲಿ ಭದ್ರತಾ ಪಡೆಯ ಸಿಬ್ಬಂದಿ ಸೆರೆ ಹಿಡಿದಿರುವ ವಿಡಿಯೋ ಇದಾಗಿದೆ.
ಕೆಲದಿನಗಳ ಹಿಂದಷ್ಟೇ ಜಮ್ಮುವಿನ ವಾಯುನೆಲೆ ಮೇಲೆ ಪಾಕ್ ಉಗ್ರರು ಡ್ರೋನ್ ಬಾಂಬ್ ದಾಳಿ ನಡೆಸಿದ್ದರು.