ETV Bharat / bharat

'ಈ ನ್ಯಾಯಾಲಯದ ಭಾಷೆ ಇಂಗ್ಲಿಷ್‌..' ಕಕ್ಷಿದಾರನಿಗೆ ವಕೀಲರ ನೆರವು ನೀಡಿದ ಸುಪ್ರೀಂ ಕೋರ್ಟ್‌ - Solicitor General Madhavi Dewan

ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಿ ತನ್ನ ಪ್ರಕರಣವನ್ನು ಹಿಂದಿಯಲ್ಲಿ ವಾದಿಸಿದ ಅರ್ಜಿದಾರನಿಗೆ, ಈ ನ್ಯಾಯಾಲಯದ ಭಾಷೆ ಇಂಗ್ಲಿಷ್ ಎಂದು ಸುಪ್ರೀಂ ಕೋರ್ಟ್​ ತಿಳಿಸಿ, ಆತನಿಗೆ ವಕೀಲರ ಸಹಾಯ ನೀಡಿತು.

Supreme Court
ಸುಪ್ರೀಂ ಕೋರ್ಟ್​
author img

By

Published : Nov 18, 2022, 5:23 PM IST

ನವದೆಹಲಿ: ಖುದ್ದು ಹಾಜರಾಗಿ ತನ್ನ ಪ್ರಕರಣವನ್ನು ತಾನೇ ಹಿಂದಿಯಲ್ಲಿ ವಾದಿಸಲು ಪ್ರಾರಂಭಿಸಿದ ಅರ್ಜಿದಾರನಿಗೆ, ಈ ನ್ಯಾಯಾಲಯದ ಭಾಷೆ ಇಂಗ್ಲಿಷ್ ಎಂದು ಸುಪ್ರೀಂ ಕೋರ್ಟ್ ತಿಳಿ ಹೇಳಿದ ಪ್ರಸಂಗ ಇಂದು ನಡೆಯಿತು. ನ್ಯಾಯಮೂರ್ತಿಗಳಾದ ಕೆಎಂ ಜೋಸೆಫ್ ಮತ್ತು ಹೃಷಿಕೇಶ್ ರಾಯ್ ಅವರಿದ್ದ ಪೀಠವು, ಅರ್ಜಿದಾರ ಶಂಕರ್ ಲಾಲ್ ಶರ್ಮಾ ಪರ ವಾದಿಸಲು ವಕೀಲರನ್ನು ನೇಮಿಸಿತು.

ಇದನ್ನೂ ಮುನ್ನ ಶರ್ಮಾ ಹಿಂದಿಯಲ್ಲಿ ವಾದಿಸಲು ಪ್ರಾರಂಭಿಸಿ, ನನ್ನ ಪ್ರಕರಣದ ಬಗ್ಗೆ ಸರ್ವೋಚ್ಛ ನ್ಯಾಯಾಲಯವೂ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆದಿದೆ. ಆದರೆ ಎಲ್ಲಿಯೂ ಪರಿಹಾರ ಸಿಕ್ಕಿಲ್ಲ ಎಂದು ಅಳಲು ತೋಡಿಕೊಂಡರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ನ್ಯಾ.ಜೋಸೆಫ್ ಅವರು, "ನಾವು ನಿಮ್ಮ ಪ್ರಕರಣದ ಕಡತವನ್ನು ಓದಿದ್ದೇವೆ. ಇದು ತುಂಬಾ ಗೊಂದಲಮಯವಾಗಿದೆ. ನೀವು ಏನು ಹೇಳುತ್ತಿದ್ದೀರಿ ಎಂಬುದನ್ನು ಅರ್ಥ ಮಾಡಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ" ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮತ್ತೊಂದು ಕೋರ್ಟ್‌ ಹಾಲ್‌ನಲ್ಲಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಮಾಧವಿ ದಿವಾನ್ ಅವರು ಶರ್ಮಾ ಸಹಾಯಕ್ಕೆ ಧಾವಿಸಿ, ನ್ಯಾಯಪೀಠ ಹೇಳುತ್ತಿರುವುದನ್ನು ಅವರಿಗೆ ಅನುವಾದಿಸಿದರು. ಬಳಿಕ ಕೋರ್ಟ್‌ ತನಗೆ ಸೂಚಿಸಿದ ಕಾನೂನು ನೆರವಿನ ಪ್ರಸ್ತಾವನೆಯನ್ನು ಶರ್ಮಾ ಅವರಿಗೆ ಮನವರಿಕೆ ಮಾಡಿದರು. ಶರ್ಮಾ ಇದಕ್ಕೆ ಒಪ್ಪಿಕೊಂಡ ಬಳಿಕ ಪೀಠವು ವಕೀಲರನ್ನು ನೇಮಿಸಿತು. ಅಲ್ಲದೇ ವಕೀಲರು ಈ ಕೆಲಸವನ್ನು ಉಚಿತವಾಗಿ ಮಾಡಿಕೊಡಲು ಒಪ್ಪಿಕೊಂಡರು. ವಕೀಲರಿಗೆ ಪ್ರಕರಣದ ಕಡತವನ್ನು ಅಧ್ಯಯನ ಮಾಡುವಂತೆ ಸೂಚಿಸಿದ ನ್ಯಾಯಪೀಠ ಮುಂದಿನ ವಿಚಾರಣೆಯನ್ನು ಡಿಸೆಂಬರ್ 4 ಕ್ಕೆ ಮುಂದೂಡಿತು.

ಇದನ್ನೂ ಓದಿ:ಜನಪ್ರತಿನಿಧಿಗಳ ವಾಕ್, ಅಭಿವ್ಯಕ್ತಿ ಸ್ವಾತಂತ್ರ್ಯ ನಿರ್ಬಂಧ ವಿಚಾರ: ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.