ಸುಲ್ತಾನ್‌ಪುರ (ಉತ್ತರಪ್ರದೇಶ): ಲಿಖೀಂಪುರ ಘಟನೆ ಬಗ್ಗೆ ತುಂಬಾ ದಿನಗಳ ನಂತರ ಮಾತನಾಡಿರುವ ಸುಲ್ತಾನ್‌ಪುರದ ಸಂಸದೆ ಮನೇಕಾ ಗಾಂಧಿ, ನ್ಯಾಯಾಲಯದ ತೀರ್ಪನ್ನು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ ಎಂದಿದ್ದಾರೆ.
ಲಂಬುವಾ ತಹಸಿಲ್ ಪ್ರದೇಶದಲ್ಲಿ ಚುನಾವಣಾ ಪ್ರಚಾರಕ್ಕೆಂದು ಬಂದಾಗ ಮನೇಕಾ ಗಾಂಧಿ ಈ ವಿಷಯದ ಬಗ್ಗೆ ಮಾತನಾಡಿದ್ದು, ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದ್ರೆ, ಜನರ ನಂಬಿಕೆಗೆ ಧಕ್ಕೆಯಾಗುತ್ತದೆ. ನ್ಯಾಯಾಂಗ ವ್ಯವಸ್ಥೆ ಜನರ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ನಾವೆಲ್ಲರೂ ದುಃಖಿತರಾಗಿದ್ದೇವೆ. ದೇಶದ ಕಟ್ಟ ಕಡೆಯ ಬಡವರೂ ನ್ಯಾಯ ಕೇಳುತ್ತಿದ್ದಾರೆ. ನೀವು ಕೊಲೆಗಾರರನ್ನು ಜೈಲಿನಿಂದ ಬಿಡುಗಡೆ ಮಾಡಿದ್ದೀರಾ ? ಲಖಿಂಪುರ ಪ್ರಕರಣದ ಬಗ್ಗೆ ಲಕ್ಷಾಂತರ ಜನರು ಕಾಮೆಂಟ್ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. ಇನ್ನೂ ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠವು ಕೆಲವು ದಿನಗಳ ಹಿಂದೆ ಲಖೀಂಪುರ ಪ್ರಕರಣದ ಪ್ರಮುಖ ಆರೋಪಿಗಳಿಗೆ ಜಾಮೀನು ನೀಡಿದೆ.
ಇದನ್ನೂ ಓದಿ: ಕಾಲೇಜು ದಿನಗಳ 'ಮೋಡದ ಮೇಲಿನ ಮಹಾರಾಜ'ನ ಬ್ಯಾನರ್ ಜಾಹೀರಾತು ನೆನಪಿಸಿಕೊಂಡ ಬಿಗ್‌ಬಿ
ವಿಧಾನಸಭಾ ಚುನಾವಣೆ ಹಿನ್ನೆಲೆ ಅಭ್ಯರ್ಥಿಗಳ ಪರವಾಗಿ ಅವರು ನಿರಂತರವಾಗಿ ಪ್ರಚಾರ ಮಾಡುತ್ತಿದ್ದಾರೆ. ಭಾನುವಾರ ಸಂಸದೆ ಮನೇಕಾ ಗಾಂಧಿ ತಮ್ಮ ಕಾರ್ಯಕರ್ತರೊಂದಿಗೆ ಲಂಬುವಾ ತಹಸಿಲ್ ಪ್ರದೇಶಕ್ಕೆ ತೆರಳಿ, ಅಭ್ಯರ್ಥಿ ಸೀತಾರಾಮ್ ವರ್ಮಾ ಅವರಿಗೆ ಮತ ನೀಡಿ ಎಂದು ಕರೆ ನೀಡಿದರು. ಜೈಸಿಂಗ್‌ಪುರದಿಂದ ರಾಜ್ ಬಾಬು ಉಪಾಧ್ಯಾಯ ಮತ್ತು ಸುಲ್ತಾನ್‌ಪುರ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ ವಿನೋದ್ ಸಿಂಗ್ ಪರವಾಗಿ ಮತ ಕೇಳಿದರು.