ಬಸ್ತಾರ್, ಛತ್ತೀಸ್ಗಢ: ನಕ್ಸಲರ ಹಾವಳಿ ಹೆಚ್ಚಾಗಿರುವ ಛತ್ತೀಸ್‌ಗಢದ ಬಸ್ತಾರ್ ಜಿಲ್ಲೆಗೆ ನಿಯೋಜನೆಯಾಗಿರುವ ಐಪಿಎಸ್ ಅಧಿಕಾರಿ ಅಂಕಿತಾ ಶರ್ಮ ಅವರ ಬಗ್ಗೆ ಈಗ ದೇಶಾದ್ಯಂತ ಚರ್ಚೆಯಾಗುತ್ತಿದೆ. ಬಾಲಿವುಡ್ ನಟಿಯಾದ ರವೀನಾ ಟಂಡನ್ ಕೂಡಾ ಅಂಕಿತಾ ಶರ್ಮ ಅವರನ್ನು ನಿಜವಾದ ನಾಯಕಿ ಎಂದು ಹೊಗಳಿದ್ದಾರೆ.
ಹೌದು.. ನಕ್ಸಲರ ಹಾವಳಿ ಹೆಚ್ಚಾಗಿರುವ ಬಸ್ತಾರ್ ಜಿಲ್ಲೆಯಲ್ಲಿ ನಿಯೋಜನೆಗೊಂಡಿರುವ ಅಂಕಿತಾ ಶರ್ಮ ತಾವೇ ಖುದ್ದಾಗಿ ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಪೊಲೀಸ್ ಸಿಬ್ಬಂದಿಯೊಂದಿಗೆ ಅರಣ್ಯದೊಳಗೆ ಪ್ರವೇಶಿಸಿರುವ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಟ್ವೀಟ್ ಮಾಡಿರುವ ನೆಟ್ಟಿಗರು ಬಸ್ತಾರ್ನಲ್ಲಿ ನಕ್ಸಲ್ ವಿರೋದಿ ಕಾರ್ಯಾಚರಣೆಯನ್ನು ಮೊದಲ ಬಾರಿಗೆ ಮಹಿಳೆಯೊಬ್ಬರು ವಹಿಸಿಕೊಂಡಿದ್ದಾರೆ ಎಂದಿದ್ದು, ಈ ಟ್ವೀಟ್ಗೆ ರಿಟ್ವೀಟ್ ಮಾಡಿರುವ ಬಾಲಿವುಡ್ ನಟಿ ರವೀನಾ ಟಂಡನ್, 'True Blue Blooded Heroines.. #Proudindianwoman' ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಅಂಕಿತಾ ಶರ್ಮ ಕಾಮೆಂಟ್ ಮಾಡಿ, ಧನ್ಯವಾದ ಸಲ್ಲಿಸಿದ್ದಾರೆ.
-
True Blue Blooded Heroines .. #proudindianwomen🇮🇳 https://t.co/tBLv3tlEaK
— Raveena Tandon (@TandonRaveena) December 28, 2021 " class="align-text-top noRightClick twitterSection" data="
">True Blue Blooded Heroines .. #proudindianwomen🇮🇳 https://t.co/tBLv3tlEaK
— Raveena Tandon (@TandonRaveena) December 28, 2021True Blue Blooded Heroines .. #proudindianwomen🇮🇳 https://t.co/tBLv3tlEaK
— Raveena Tandon (@TandonRaveena) December 28, 2021
ಶಿಕ್ಷಕಿಯೂ ಆಗ್ತಾರೆ : ಐಪಿಎಸ್ ಅಧಿಕಾರಿಯಾದ ಅಂಕಿತಾ ಶರ್ಮ ಪ್ರತಿ ಭಾನುವಾರ ತಮ್ಮ ಕಚೇರಿಯಲ್ಲಿ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಸುಮಾರು 25 ಯುವಕರಿಗೆ ಮಾರ್ಗದರ್ಶನ ಮಾಡುತ್ತಾರೆ. ಕೋಚಿಂಗ್ ಕ್ಲಾಸ್ಗೆ ಶುಲ್ಕ ಭರಿಸಲು ಸಾಧ್ಯವಾಗದವರು ಇವರ ಬಳಿ ಮಾರ್ಗದರ್ಶನ ಪಡೆಯುತ್ತಾರೆ.
ಅಂದಹಾಗೆ ಅಂಕಿತಾ ಶರ್ಮ ಅವರು ಛತ್ತೀಸ್‌ಗಢದ ದುರ್ಗ್ ಜಿಲ್ಲೆಯ ಒಂದು ಸಣ್ಣ ಹಳ್ಳಿಯವರು. ಆರಂಭಿಕ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲಿ ಮುಗಿಸಿದ ಅವರು 2018 ರಲ್ಲಿ UPSC ಪರೀಕ್ಷೆಯ ಮೂರನೇ ಪ್ರಯತ್ನದಲ್ಲಿ 203ನೇ ರ್ಯಾಂಕ್ ಗಳಿಸಿದ್ದರು. ಈಗ ಎಎಸ್ಪಿ ಹುದ್ದೆಯಲ್ಲಿದ್ದು, ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ.
ಇದನ್ನೂ ಓದಿ: ತಿನ್ನಲು ಸೊಪ್ಪಲ್ಲ.. ಪ್ರತಿದಿನ ಈ ಮೇಕೆಗೆ ಬೇಕೇ ಬೇಕು ಚಿಕನ್, ಮಟನ್ ಬಿರಿಯಾನಿ!