ಖೂಂಟಿ(ಜಾರ್ಖಂಡ್) : ಜಾರ್ಖಂಡ್ನ ಖೂಂಟಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೇದೆ ಮಗುವನ್ನ ಮಡಿಲಲ್ಲಿಟ್ಟುಕೊಂಡು ಡ್ಯೂಟಿ ಮಾಡ್ತಿದ್ದಾರೆ. ಮಹಿಳಾ ಪೊಲೀಸ್ ಪೇದೆ ಮಡಲಲ್ಲಿ ಮಗುವನ್ನಿಟ್ಟುಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದು, ಮಗುವಿನ ಆರೈಕೆ ಸಹ ಮಾಡ್ತಿದ್ದಾರೆ. ಮಹಿಳಾ ಕಾನ್ಸ್ಟೇಬಲ್ ಮುಕ್ತಿ ಹಿಸ್ಸಾ ಎಂಬುವರು ಪೂರ್ತಿ ತಮ್ಮ ಸೊಂಟದ ಭಾಗದಲ್ಲಿ ಮಗುವನ್ನ ಕಟ್ಟಿಕೊಂಡು ಎಲ್ಲ ಕೆಲಸ ನಿರ್ವಹಿಸುತ್ತಿದ್ದಾರೆ. ಮುಕ್ತಿ ಹಿಸ್ಸಾ 2017ರ ಬ್ಯಾಚ್ನ ಮಹಿಳಾ ಕಾನ್ಸ್ಟೇಬಲ್ ಆಗಿದ್ದು, ಠಾಣೆಯಲ್ಲಿ ದೂರು ದಾಖಲು ಮಾಡಿಕೊಳ್ಳುವುದು, ಮಹಿಳಾ ಅಪರಾಧಿಗಳನ್ನ ನೋಡಿಕೊಳ್ಳುವುದು ಇವರ ಕರ್ತವ್ಯವಾಗಿದೆ.
ಠಾಣೆಗೆ ಬರುವ ಪ್ರತಿಯೊಬ್ಬರೊಂದಿಗೆ ನಗುಮುಖದಿಂದಲೇ ಮಾತನಾಡುವ ಅವರು. ಶ್ರದ್ಧೆಯಿಂದಲೇ ಕೆಲಸ ಮಾಡ್ತಾರೆ. ಇದರ ಜೊತೆಗೆ ಮಗುವಿನ ಜವಾಬ್ದಾರಿ ಹೊತ್ತುಕೊಂಡಿರುವುದಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಈ ಹಿಂದೆ ಕೂಡ ಮಧ್ಯಪ್ರದೇಶದ ಧರ್ ಜಿಲ್ಲೆಯ ಉಪ ಪೊಲೀಸ್ ವರಿಷ್ಠಾಧಿಕಾರಿ ಮೋನಿಕಾ ಸಿಂಗ್ ಕರ್ತವ್ಯದಲ್ಲಿದ್ದ ವೇಳೆ ಒಂದೂವರೆ ವರ್ಷದ ಮಗುವನ್ನ ಹೊತ್ತುಕೊಂಡು ಕೆಲಸ ನಿರ್ವಹಿಸಿದ್ದರು. ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅದಕ್ಕೆ ಖುದ್ದಾಗಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು.