ETV Bharat / bharat

Ladakh row: ಗಡಿಯಲ್ಲಿನ ಸಮಸ್ಯೆಗಳನ್ನು ಶೀಘ್ರ ಬಗೆಹರಿಸುವಂತೆ ಚೀನಾಗೆ ಭಾರತ ಒತ್ತಾಯ!

ಲಡಾಖ್​​ನಲ್ಲಿ ಉಳಿದಿರುವ ಸಮಸ್ಯೆಗಳನ್ನು ಶೀಘ್ರ ಬಗೆಹರಿಸುವಂತೆ ಚೀನಾಗೆ ಭಾರತ ಒತ್ತಾಯಿಸಿದೆ. ಅಲ್ಲದೇ, ಈ ತಿಂಗಳ ಅಂತ್ಯ ಅಥವಾ ಆಗಸ್ಟ್ ಮೊದಲ ವಾರದಲ್ಲಿ 12 ನೇ ಸುತ್ತಿನ ಕಮಾಂಡರ್ ಮಟ್ಟದ ಮಾತುಕತೆ ನಡೆಯುವ ಸಾಧ್ಯತೆಯಿದೆ.

ಚೀನಾಗೆ ಭಾರತ
ಚೀನಾಗೆ ಭಾರತ
author img

By

Published : Jul 23, 2021, 12:06 PM IST

ನವದೆಹಲಿ: ಗಡಿ ವಿವಾದ ಸಂಬಂಧ ಚೀನಾ ಮತ್ತು ಭಾರತದ ನಡುವೆ ಆಗಿರುವ ದ್ವಿಪಕ್ಷೀಯ ಒಪ್ಪಂದಗಳನ್ನು ಪಾಲಿಸುವಂತೆ ಹಾಗೂ ಉಳಿದ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವಂತೆ ಡ್ರ್ಯಾಗನ್​ ರಾಷ್ಟ್ರಕ್ಕೆ ಭಾರತ ಮತ್ತೊಮ್ಮೆ ಒತ್ತಾಯಿಸಿದೆ.

1988 ರ ಒಪ್ಪಂದದ ಪ್ರಕಾರ ಗಡಿ ಪ್ರದೇಶದಲ್ಲಿ ಶಾಂತಿ ಕಾಪಾಡುವುದು ಉಭಯ ರಾಷ್ಟ್ರಗಳ ಸಂಬಂಧದ ನಡುವಿನ ಅಡಿಪಾಯವಾಗಿದೆ. ಈ ಹಿನ್ನೆಲೆ ಗಡಿಯಲ್ಲಿ ಶಾಂತಿ ಸ್ಥಾಪಿಸುವ ಬಗ್ಗೆ ಎಂಇಎ ವಕ್ತಾರ ಅರಿಂದಮ್​ ಬಾಗ್​ಚಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ ಎಸ್​ ಜೈ ಶಂಕರ್​​​ ಚೀನಾದ ಸಹವರ್ತಿ ವಾಂಗ್​​ಯಿಗೆ ತಿಳಿಸಿದ್ದಾರೆ.

ಈ ಸಂಬಂಧ ಜುಲೈ 14 ರಂದು ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಸಮಾವೇಶದ ವೇಳೆ ಜೈಶಂಕರ್ ಮತ್ತು ವಾಂಗ್ ದುಶನ್‌ಬೆ ಒಂದು ಗಂಟೆ ಸಭೆ ನಡೆಸಿದರು. ಮುಂದಿನ ಸುತ್ತಿನ ಕಮಾಂಡರ್ ಮಟ್ಟದ ಮಾತುಕತೆಗಳನ್ನು ಶೀಘ್ರದಲ್ಲಿಯೇ ಕರೆಯಬೇಕು. ಉಳಿದ ಎಲ್ಲ ಸಮಸ್ಯೆಗಳನ್ನು ಚರ್ಚಿಸಿ, ಪರಸ್ಪರ ಸ್ವೀಕಾರಾರ್ಹ ಪರಿಹಾರವನ್ನು ಪಡೆಯಬೇಕು ಎಂದು ಉಭಯ ನಾಯಕರು ಒಪ್ಪಿದ್ದಾರೆ ಎಂದು ಬಾಗ್ಚಿ ಹೇಳಿದರು.

ಈಗಿನ ಪರಿಸ್ಥಿತಿ ದೀರ್ಘ ಕಾಲದವರೆಗೆ ಮುಂದುವರಿದರೆ ಉಭಯ ರಾಷ್ಟ್ರಗಳ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ವಕ್ತಾರರು ಹೇಳಿದ್ದಾರೆ. ಉಭಯ ರಾಷ್ಟ್ರಗಳ ಹಿತದೃಷ್ಟಿಯಿಂದ ಪೂರ್ವ ಲಡಾಖ್​ನ ಎಲ್​ಎಸಿಯ ಉದ್ದಕ್ಕೂ ಇರುವ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲು ಎರಡೂ ಕಡೆಯವರು ಕೆಲಸ ಮಾಡುತ್ತಿದ್ದಾರೆ.

12 ನೇ ಸುತ್ತಿನ ಕಮಾಂಡರ್​ ಮಟ್ಟದ ಮಾತುಕತೆ ಜುಲೈ ಅಂತ್ಯದ ವೇಳೆಗೆ ಅಥವಾ ಆಗಸ್ಟ್ ಮೊದಲ ವಾರದಲ್ಲಿ ನಡೆಯುವ ಸಾಧ್ಯತೆಯಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.