ETV Bharat / bharat

ಇದೆಂಥಾ ದುಃಸ್ಥಿತಿ ನೋಡಿ:  ಡೋಲಿಯಲ್ಲಿ ರೋಗಿಯನ್ನಿಟ್ಟು 4-5 ಕಿ.ಮೀ ನಡೆದು ಮುಖ್ಯರಸ್ತೆಗೆ ತಲುಪಿಸುವ ಸ್ಥಿತಿ! - ಬಂಜಾರ್‌ ಕುಲ್ಲು

ರಸ್ತೆ ಸೌಲಭ್ಯ ಇಲ್ಲದ ಕಾರಣ ರೋಗಿಯನ್ನು ಡೋಲಿ ಮೂಲಕ ನಾಲ್ಕೈದು ಕಿಲೋ ಮೀಟರ್‌ ದೂರ ನಡೆದು ಮುಖ್ಯ ರಸ್ತೆಗೆ ತಲುಪಿಸಿರುವ ಘಟನೆ ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

lack-of-road-facility-in-many-villages-of-tirthan-valley-in-kullu
ಕಲ್ಲು: ರಸ್ತೆ ಇಲ್ಲದೆ ಡೋಲಿಯಲ್ಲಿ ರೋಗಿಯನ್ನು ನಾಲ್ಕೈದು ಕಿ.ಮೀ ನಡೆದು ಮುಖ್ಯರಸ್ತೆಗೆ ತಲುಪಿಸುವ ಸ್ಥಿತಿ
author img

By

Published : Jun 16, 2021, 4:09 PM IST

ಕುಲ್ಲು (ಹಿಮಾಚಲ ಪ್ರದೇಶ): ದೇಶ ಎಷ್ಟೇ ಮುಂದುವರಿದಿದ್ದರೂ ಇನ್ನೂ ಅದೆಷ್ಟೋ ಗ್ರಾಮಗಳಿಗೆ ರಸ್ತೆ ಸೇರಿದಂತೆ ಮೂಲ ಸೌಲಭ್ಯಗಳು ಸಿಕ್ಕಿಲ್ಲ. ಅಂತಹ ಗ್ರಾಮಗಳ ಪೈಕಿ ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಅನೇಕ ಗ್ರಾಮಗಳು ಕಾಣ ಸಿಗುತ್ತವೆ. ಇಂದಿಗೂ ಉಪವಿಭಾಗದ ಬಂಜಾರ್‌ನ ತೀರ್ಥನ್ ಕಣಿವೆಯ ಅನೇಕ ಗ್ರಾಮಗಳು ರಸ್ತೆ ಸೌಲಭ್ಯಗಳಿಂದ ವಂಚಿತವಾಗಿವೆ.

ಈ ಭಾಗದ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರು ಸಮಸ್ಯೆಗಳನ್ನು ನುಂಗಿಕೊಂಡು ಜೀವನ ನಡೆಸುತ್ತಿದ್ದಾರೆ. ಹಳ್ಳಿಯಲ್ಲಿ ಯಾರಾದರೂ ಅನಾರೋಗ್ಯಕ್ಕೆ ಒಳಗಾಗಿದ್ದರೆ, ಗ್ರಾಮಸ್ಥರಿಗೆ ಉಳಿದಿರುವುದು ಮರದಿಂದ ಮಾಡಿರುವ ಡೋಲಿ ಮಾತ್ರ. ಗ್ರಾಮಸ್ಥರು ರೋಗಿಯನ್ನು ಡೋಲಿ ಮೂಲಕ ನಾಲ್ಕೈದು ಕಿಲೋಮೀಟರ್ ನಡೆದು ಮುಖ್ಯ ರಸ್ತೆಗೆ ತಲುಪಿಸುತ್ತಾರೆ. ಇದು ಸರ್ವೇ ಸಾಮಾನ್ಯವಾಗಿದೆ.

ಕಲ್ಲು: ರಸ್ತೆ ಇಲ್ಲದೆ ಡೋಲಿಯಲ್ಲಿ ರೋಗಿಯನ್ನು ನಾಲ್ಕೈದು ಕಿ.ಮೀ ನಡೆದು ಮುಖ್ಯರಸ್ತೆಗೆ ತಲುಪಿಸುವ ಸ್ಥಿತಿ

ತೀರ್ಥನ್ ಕಣಿವೆಯಲ್ಲಿ ರಸ್ತೆ ಸೌಲಭ್ಯವಿಲ್ಲ

ತೀರ್ಥನ್ ವ್ಯಾಲಿಯಲ್ಲಿನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ, ಮಹಿಳಾ ರೋಗಿಯನ್ನು ಗ್ರಾಮಸ್ಥರು ಡೋಲಿಯಲ್ಲಿ ಮುಖ್ಯ ರಸ್ತೆಗೆ ಕರೆದೊಯ್ಯುತ್ತಿದ್ದಾರೆ. ತೀರ್ಥನ್ ವ್ಯಾಲಿಯ ಗ್ರಾಮ ಪಂಚಾಯತ್ ಪೆಖ್ದಿಯ ನಹಿ ಗ್ರಾಮದ ಈ ಮಹಿಳೆಗೆ ಹಿಂದೆ ಶಿಮ್ಲಾದ ಐಜಿಎಂಸಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆಪರೇಷನ್‌ನಿಂದಾಗಿ ಮಹಿಳೆಗೆ ನಡೆಯಲು ಸಾಧ್ಯವಾಗುತ್ತಿಲ್ಲ. ರಸ್ತೆ ಇಲ್ಲದ ಕಾರಣ ಮರದಿಂದ ಮಾಡಿದ ಡೋಲಿ ಸಹಾಯದಿಂದ ರೋಗಿಯನ್ನು ಮುಖ್ಯ ರಸ್ತೆಗೆ ತಲುಪಿಸುತ್ತಿದ್ದಾರೆ.

ಪೆಖ್ದಿ ಪಂಚಾಯತ್ ಗ್ರಾಮಗಳನ್ನು ರಸ್ತೆಗಳೊಂದಿಗೆ ಸಂಪರ್ಕಿಸಲು ಸರ್ಕಾರ ಮತ್ತು ಆಡಳಿತ ಮಂಡಳಿ ಹಲವು ಬಾರಿ ಮಾತುಕತೆ ನಡೆಸಿದೆ ಎಂದು ಸ್ಥಳೀಯ ಗ್ರಾಮಸ್ಥರು ಹೇಳುತ್ತಾರೆ, ಆದರೆ ಇದುವರೆಗೂ ಯಾವುದೇ ಪರಿಹಾರ ಕಂಡು ಬಂದಿಲ್ಲ. ಸ್ವಾತಂತ್ರ್ಯ ಬಂದು 7 ದಶಕಗಳು ಕಳೆದರೂ ಇಂದಿಗೂ ಗ್ರಾಮೀಣ ಭಾಗದಲ್ಲಿ ಮೂಲ ಸೌಲಭ್ಯಗಳು ಇಲ್ಲದೇ ಇರುವುದು ದುರತಂವೇ ಸರಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.