ಪನ್ನಾ(ಮಧ್ಯಪ್ರದೇಶ): ಜಮೀನಿನಲ್ಲಿ ಕೆಲಸ ಮಾಡ್ತಿದ್ದ ಸಂದರ್ಭದಲ್ಲಿ ಬಡ ಅನ್ನದಾತನಿಗೆ ಅದೃಷ್ಟವೊಂದು ಒಲಿದು ಬಂದಿದ್ದು, ಬರೋಬ್ಬರಿ 30 ಲಕ್ಷ ರೂಪಾಯಿ ಮೌಲ್ಯದ ವಜ್ರ ಸಿಕ್ಕಿದೆ. ಹೀಗಾಗಿ ರಾತ್ರೋರಾತ್ರಿ ಲಕ್ಷಾಧೀಶನಾಗಿದ್ದಾನೆ. ಇದೀಗ ಸರ್ಕಾರದ ಮಾರ್ಗಸೂಚಿಯಂತೆ ಬೆಲೆ ನಿಗದಿ ಮಾಡಲಾಗಿದ್ದು, ಮುಂಬರುವ ಹರಾಜಿನಲ್ಲಿ ಮಾರಾಟಕ್ಕೀಡಲು ನಿರ್ಧರಿಸಲಾಗಿದೆ.
ಕಳೆದ ಫೆಬ್ರವರಿ ತಿಂಗಳಲ್ಲಿ ಪ್ರತಾಪ್ ಸಿಂಗ್ ಯಾದವ್ ತಮ್ಮ ಜಮೀನಿನಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಿ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಅವರ 10X10 ಜಮೀನಿನಲ್ಲಿ ಗಣಿಗಾರಿಕೆ ನಡೆಸಲು ಅನುಮೋದನೆ ನೀಡಲಾಗಿತ್ತು. ಕಳೆದ ಮೂರು ತಿಂಗಳ ಸತತ ಪರಿಶ್ರಮದ ಬಳಿಕ ಇದೀಗ ರೈತನಿಗೆ 11.88 ಕ್ಯಾರೆಟ್ ವಜ್ರ ಸಿಕ್ಕಿದೆ.
ಇದನ್ನೂ ಓದಿ: 7 ವರ್ಷ ಪ್ರೀತಿಸಿ ಮದುವೆಯಾಗಿದ್ದ ಜೋಡಿ: ಯುವತಿಯ ಅಣ್ಣನಿಂದ ಯುವಕನ ಮರ್ಯಾದಾ ಹತ್ಯೆ..
ವಜ್ರ ಮಾರಾಟದಿಂದ ಬರುವ ಹಣದಿಂದ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಹಣ ಬಳಕೆ ಮಾಡಲು ಬಡ ರೈತ ನಿರ್ಧಾರ ಮಾಡಿದ್ದಾನೆ. ಕಳೆದ ಮೂರು ತಿಂಗಳನಿಂದ ಕಷ್ಟಪಟ್ಟು ದುಡಿದಿದ್ದೇನೆ. ಇದೀಗ ವಜ್ರ ಸಿಕ್ಕಿದ್ದು, ಇದರಿಂದ ಬರುವ ಹಣವನ್ನ ವ್ಯಾಪಾರ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಳಕೆ ಮಾಡಿಕೊಳ್ಳುವೆ ಎಂದಿದ್ದಾರೆ.
ಮಧ್ಯಪ್ರದೇಶದ ಪನ್ನಾದಲ್ಲಿ ಅನೇಕ ವಜ್ರದ ಗಣಿಗಳಿದ್ದು, ಈ ಹಿಂದೆ ಕೂಡ ಅನೇಕ ರೈತರಿಗೆ ಈ ಭಾಗದಲ್ಲಿ ವಜ್ರದ ಹರಳು ಸಿಕ್ಕಿರುವ ಪುರಾವೆಗಳಿವೆ.