ETV Bharat / bharat

ಭಾರತೀಯ ವರನ ಕೈ ಹಿಡಿದ ರಷ್ಯಾ ಬೆಡಗಿ.. ಅದ್ಧೂರಿ ಮದುವೆಯಲ್ಲಿ ನಾಲ್ಕು ದೇಶಗಳು ಭಾಗಿ!

ಉತ್ತರ ಪ್ರದೇಶದ ವರ ಮತ್ತು ರಷ್ಯಾದ ವಧು ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾದರು. ಈಗಲೇ ಈ ಮದುವೆ ಸಾಕಷ್ಟು ಸುದ್ದಿಯಲ್ಲಿದೆ.

Russian bride in Kushinagar  kushinagar russian wedding  International wedding in kushinagar  russian married hindu  ಭಾರತೀಯ ವರನ ಕೈ ಹಿಡಿದ ರಷ್ಯಾ ಬೆಡಗಿ  ಉತ್ತರಪ್ರದೇಶದಲ್ಲಿ ಭಾರತೀಯ ವರನ ಕೈ ಹಿಡಿದ ರಷ್ಯಾ ಬೆಡಗಿ  ಕುಶಿನಗರದಲ್ಲಿ ಅಂತರಾಷ್ಟ್ರೀಯ ಮದುವೆ  ಉತ್ತರಪ್ರದೇಶ ಸುದ್ದಿ
ಭಾರತೀಯ ವರನ ಕೈ ಹಿಡಿದ ರಷ್ಯಾ ಬೆಡಗಿ
author img

By

Published : Jul 19, 2022, 2:36 PM IST

ಕುಶಿನಗರ: ಉತ್ತರ ಪ್ರದೇಶದ ವರ ಮತ್ತು ರಷ್ಯಾದ ವಧು ಸೋಮವಾರ ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾದರು. ಭಾರತವಲ್ಲ ನಾಲ್ಕು ದೇಶಗಳ ಜನರು ಈ ಮದುವೆಗೆ ಸಾಕ್ಷಿಯಾದರು. ಖುಷಿನಗರದ ಈ ವಿಶಿಷ್ಟ ಮದುವೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಲ್ಲಿದೆ.

Russian bride in Kushinagar  kushinagar russian wedding  International wedding in kushinagar  russian married hindu  ಭಾರತೀಯ ವರನ ಕೈ ಹಿಡಿದ ರಷ್ಯಾ ಬೆಡಗಿ  ಉತ್ತರಪ್ರದೇಶದಲ್ಲಿ ಭಾರತೀಯ ವರನ ಕೈ ಹಿಡಿದ ರಷ್ಯಾ ಬೆಡಗಿ  ಕುಶಿನಗರದಲ್ಲಿ ಅಂತರಾಷ್ಟ್ರೀಯ ಮದುವೆ  ಉತ್ತರಪ್ರದೇಶ ಸುದ್ದಿ
ಭಾರತೀಯ ವರನ ಕೈ ಹಿಡಿದ ರಷ್ಯಾ ಬೆಡಗಿ

ಭಗವಾನ್ ಬುದ್ಧನ ಮಹಾಪರಿನಿರ್ವಾಣ ತಾಣವಾದ ಕುಶಿನಗರವು ಅಂತಾರಾಷ್ಟ್ರೀಯ ದೃಶ್ಯಗಳ ಪ್ರವಾಸಿ ನಗರವಾಗಿ ಮಾರ್ಪಟ್ಟಿದ್ದಲ್ಲದೇ, ಭಾನುವಾರದ ಅಂತಾರಾಷ್ಟ್ರೀಯ ವಿವಾಹಕ್ಕೆ ಸಾಕ್ಷಿಯಾಯಿತು. ಕುಶಿನಗರದ ಮಂಗಳಪುರ ಗ್ರಾಮದ ನಿವಾಸಿ ದೀಪಕ್ ನಾಲ್ಕು ವರ್ಷಗಳ ಹಿಂದೆ ವೈದ್ಯಕೀಯ ವ್ಯಾಸಂಗಕ್ಕಾಗಿ ಆಸ್ಟ್ರಿಯಾಕ್ಕೆ ತೆರಳಿದ್ದರು. ಅಲ್ಲಿ ದೀಪಕ್‌ನ ಸೀನಿಯರ್ ವಿದ್ಯಾರ್ಥಿಯಾಗಿದ್ದ ಜಾರಾ ಇಬ್ಬರ ನಡುವೆ ಪ್ರೇಮಾಂಕುರವಾಯಿತು. ಆ ನಂತರ ಇಬ್ಬರೂ ಅಲ್ಲಿಯೇ ಮದುವೆಯಾದರು. ಕೊರೊನಾ ನಂತರ ಅವರು ಮನೆಗೆ ಬಂದಾಗ ಅವರ ಕುಟುಂಬ ಸದಸ್ಯರು ಹಿಂದೂ ಸಂಪ್ರದಾಯದ ಪ್ರಕಾರ ಇಬ್ಬರನ್ನೂ ಮದುವೆ ಮಾಡಿಸಿದರು.

ಓದಿ: ತಾಯಿ ಶವ ಮನೆಯಲ್ಲಿ.. ಮಗನ ವಿವಾಹ ದೇವಸ್ಥಾನದಲ್ಲಿ.. ವಿಚಿತ್ರ ಮದುವೆ!!

ಪಥಿಕ್ ನಿವಾಸ್‌ನಲ್ಲಿ ಹಿಂದೂ ವಧುವಿನಂತೆ ಅಲಂಕಾರಗೊಂಡಿದ್ದ ಜಾರಾ ತುಂಬಾ ಉತ್ಸುಕಳಾಗಿ ಕಾಣುತ್ತಿದ್ದರು. ಮದುವೆಯ ನಂತರ ಮಾತನಾಡಿದ ಜಾರಾ, ಈ ಉಡುಗೆ ಅತ್ಯುತ್ತಮವಾಗಿದೆ. ಭಾರತದ ಸಂಸ್ಕೃತಿ ಸಾಕಷ್ಟು ಆಕರ್ಷಕವಾಗಿದೆ. ಭಾರತೀಯ ಪದ್ಧತಿಯಂತೆ ಮದುವೆಯಾಗಿದ್ದಕ್ಕೆ ತುಂಬಾ ಖುಷಿಯಾಗಿದೆ ಎಂದರು. ಜಾರಾಳ ಮದುವೆಯಲ್ಲಿ ಆತನ ವಿದೇಶಿ ಗೆಳೆಯರೂ ಭಾಗವಹಿಸಿದ್ದರು. ಜಾರಾಳ ಸ್ನೇಹಿತರು ಅವಳನ್ನು ವೇದಿಕೆಗೆ ಕರೆದೊಯ್ದರು.

ಗಡಿಯಾಚೆಗಿನ ವಧು ದೇಶದ ಗೋಡೆಗಳನ್ನು ದಾಟಿ ತಾನೂ ಭಾರತೀಯಳಾಗಿರುವುದು ಜಿಲ್ಲೆಯಲ್ಲಿ ಇದೇ ಮೊದಲ ಪ್ರಕರಣವಾಗಿತ್ತು. ವಿದೇಶಿ ವಧುವಿನ ಜೊತೆ ಬಂದಿದ್ದ ಇಸ್ರೇಲ್, ರಷ್ಯನ್, ಅರ್ಜೆಂಟೀನಾದ ವಿದೇಶಿ ಮಿತ್ರರೂ ಭಾರತೀಯರ ಮದುವೆಯಲ್ಲಿ ಸಂಭ್ರಮಿಸಿ ಖುಷಿಪಟ್ಟರು. ಇದರೊಂದಿಗೆ ವರನ ಭಾರತೀಯ ಬಂಧುಗಳೂ ಸಂಭ್ರಮದಿಂದ ಕಾಣುತ್ತಿದ್ದರು.

ಇಸ್ರೇಲ್‌ನಿಂದ ಬಂದಿರುವ ಡೇನಿಯಲ್ ಅಲ್ಫೊನ್ಸೊ, ತಮ್ಮ ಸ್ನೇಹಿತರಿಬ್ಬರೂ ಇಷ್ಟೊಂದು ಆಡಂಬರದಿಂದ ಮದುವೆಯಾಗುತ್ತಿರುವುದಕ್ಕೆ ತುಂಬಾ ಸಂತೋಷವಾಗಿದೆ. ಜನರು ಮದುವೆಗೆ ಬಂದು ಊಟ ಮಾಡಿದ ನಂತರವೇ ಹೋಗುತ್ತಾರೆ. ಆದರೆ, ಭಾರತದಲ್ಲಿ ಎಲ್ಲ ಜನರು ಒಟ್ಟಾಗಿ ಇರುವುದು ಹೇಗೆ ಎಂಬುದನ್ನು ನಾವು ಗಮನಿಸಿದ್ದೇವೆ. ಎಲ್ಲರೂ ಒಟ್ಟಿಗೆ ಊಟ ಮಾಡುವುದು, ಡ್ಯಾನ್ಸ್​ ಮಾಡುವುದು ಸೇರಿದಂತೆ ಇನ್ನಿತರ ವಿಷಯಗಳು ನಮಗೆ ಸಂಪೂರ್ಣವಾಗಿ ಹೊಸದಾಗಿ ಕಂಡವು ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.