ETV Bharat / bharat

ಕುಂಭಮೇಳವನ್ನು ನಿಜಾಮುದ್ದೀನ್​ ಮರ್ಕಝ್​ಗೆ ಹೋಲಿಸಬೇಡಿ: ಉತ್ತರಾಖಂಡ ಸಿಎಂ

ಎರಡು ಧಾರ್ಮಿಕ ಘಟನೆಗಳನ್ನೇಕೆ (ನಿಜಾಮುದ್ದೀನ್ ಮರ್ಕಝ್​ ಮತ್ತು ಕುಂಭಮೇಳ) ಸಮೀಕರಿಸಬಾರದು ಎಂಬ ಪ್ರಶ್ನೆಗೆ ಉತ್ತರಿಸಿದ ಉತ್ತರಾಖಂಡ ಸಿಎಂ ರಾವತ್​, ' ಕುಂಭಮೇಳ ಕೂಡ ಜನಸಮೂಹವನ್ನು ಸೆಳೆಯುತ್ತದೆ. ಕುಂಭಕ್ಕೆ ಹಾಜರಾಗುವ ಭಕ್ತರು ಹೊರಗಿನವರಲ್ಲ, ಬದಲಾಗಿ ನಮ್ಮ ಜನರೇ ಎಂದು ಹೇಳಿದ್ದಾರೆ.

ಕುಂಭಮೇಳ
ಕುಂಭಮೇಳ
author img

By

Published : Apr 14, 2021, 12:10 PM IST

ಡೆಹ್ರಾಡೂನ್: ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳವನ್ನು ಒಳಾಂಗಣ ಪ್ರದೇಶದಲ್ಲಿ ನಡೆಸಿದ ಮತ್ತು ವಿದೇಶಿಯರು ಹಾಜರಾಗಿದ್ದ ನಿಜಾಮುದ್ದೀನ್ ಮರ್ಕಝ್​ಗೆ ಹೋಲಿಸಬಾರದು ಎಂದು ಉತ್ತರಾಖಂಡ ಮುಖ್ಯಮಂತ್ರಿ ತಿರಥ್ ​​ಸಿಂಗ್ ರಾವತ್ ಹೇಳಿದ್ದಾರೆ.

ಕುಂಭ ಮತ್ತು ಮರ್ಕಝ್​ ನಡುವೆ ಯಾವುದೇ ಹೋಲಿಕೆ ಇರಬಾರದು. ಮರ್ಕಝ್ ಅನ್ನು ಒಳಾಂಗಣ ಜಾಗದಲ್ಲಿ ನಡೆಸಲಾಯಿತು. ಆದರೆ ಗಂಗೆಯ ವಿಸ್ತಾರವಾದ ಘಟ್ಟಗಳಲ್ಲಿ ಕುಂಭ ಮೇಳವನ್ನು ಮುಕ್ತವಾಗಿ ನಡೆಸಲಾಗುತ್ತಿದೆ ಎಂದು ಅವರು ಸಮರ್ಥಿಸಿಕೊಂಡರು.

ಎರಡು ಧಾರ್ಮಿಕ ಘಟನೆಗಳನ್ನು (ನಿಜಾಮುದ್ದೀನ್ ಮಾರ್ಕಝ್​ ಮತ್ತು ಕುಂಭ) ಏಕೆ ಸಮೀಕರಿಸಬಾರದು ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, 'ಕುಂಭ ಕೂಡ ಜನಸಮೂಹವನ್ನು ಸೆಳೆಯುತ್ತದೆ. ಈಗ ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆಯನ್ನು ಬಲವಾಗಿ ಎದುರಿಸಬಹುದು. ಹರಿದ್ವಾರದಲ್ಲಿನ ಕುಂಭಮೇಳ ಮತ್ತು ನಿಜಾಮುದ್ದೀನ್ ಮರ್ಕಝ್​ ನಡುವಿನ ವ್ಯತ್ಯಾಸಗಳನ್ನು ಉಲ್ಲೇಖಿಸುತ್ತಾ, ಕುಂಭಕ್ಕೆ ಹಾಜರಾಗುವ ಭಕ್ತರು ಹೊರಗಿನವರಲ್ಲ. ನಮ್ಮ ಜನರೇ. ಹೊರ ದೇಶಗಳಿಂದ ಬಂದವರಲ್ಲ ಎಂದರು.

ಇದನ್ನೂ ಓದಿ: ಕೋವಿಡ್ ಕರ್ತವ್ಯಕ್ಕೆ ಎಂಬಿಬಿಎಸ್ ವಿದ್ಯಾರ್ಥಿಗಳ ನಿಯೋಜನೆ: ಯೋಗಿ ಸರ್ಕಾರದ ನಿರ್ಧಾರ

ಮರ್ಕಝ್​ ನಡೆದಾಗ ಕೊರೊನಾದ ಬಗ್ಗೆ ಹೆಚ್ಚಿನ ಅರಿವು ಇರಲಿಲ್ಲ ಅಥವಾ ಯಾವುದೇ ಮಾರ್ಗಸೂಚಿಗಳು ಇರಲಿಲ್ಲ. ಮರ್ಕಝ್​​ನಲ್ಲಿ ಪಾಲ್ಗೊಳ್ಳುವವರು ಎಷ್ಟು ದಿನ ಉಳಿದಿದ್ದಾರೆಂದು ಯಾರಿಗೂ ತಿಳಿದಿಲ್ಲ. ಈಗ ಕೋವಿಡ್ ಮತ್ತು ಅದಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳ ಬಗ್ಗೆ ಹೆಚ್ಚಿನ ಅರಿವಿದೆ ಎಂದು ಹೇಳಿದರು.

ಕುಂಭಮೇಳ 12 ವರ್ಷಗಳಿಗೊಮ್ಮೆ ಬರುತ್ತದೆ. ಲಕ್ಷಾಂತರ ಜನರ ನಂಬಿಕೆ ಮತ್ತು ಭಾವನೆಗಳೊಂದಿಗೆ ಸಂಬಂಧ ಬೆಸೆದಿದೆ. ಎಸ್‌ಒಪಿ ಕಟ್ಟುನಿಟ್ಟಾಗಿ ಪಾಲಿಸಿ ಅನುಸರಿಸಲಾಗುತ್ತಿದೆ. ಕೋವಿಡ್ ಸೋಂಕಿನ ಸವಾಲಿನ ಮಧ್ಯೆ ಅದನ್ನು ಯಶಸ್ವಿಯಾಗಿ ಹಿಡಿದಿಟ್ಟುಕೊಳ್ಳುವುದು ನಮ್ಮ ಗುರಿಯಾಗಿದೆ ಎಂದರು.

ಜನರ ಆರೋಗ್ಯವು ನಮಗೆ ಆದ್ಯತೆಯಾಗಿದೆ. ಆದರೆ ನಂಬಿಕೆಯ ವಿಷಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುವುದಿಲ್ಲ. ಸೋಂಕು ಪ್ರಕರಣಗಳು ಸಹಜವಾಗಿ ತಡವಾಗಿ ಏರಿಕೆಯಾಗುತ್ತಿವೆ. ನಾವು ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದೇವೆ. ಚೇತರಿಕೆಯ ಪ್ರಮಾಣವು ಉತ್ತಮವಾಗಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ವ್ಯವಸ್ಥೆ ಕೂಡ ಸಮರ್ಪಕವಾಗಿ ಮಾಡಿಕೊಂಡಿದ್ದೇವೆ ಎಂದು ರಾವತ್ ಹೇಳಿದರು.

ಮೇಳ ಪ್ರದೇಶದಲ್ಲಿ ಮಾಸ್ಕ್​ ಮತ್ತು ಸ್ಯಾನಿಟೈಸರ್​ಗಳನ್ನು ದೊಡ್ಡ ಪ್ರಮಾಣದ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಮಾರ್ಗಸೂಚಿಗಳನ್ನು ಎಲ್ಲರೂ ಅನುಸರಿಸುತ್ತಾರೆ. ಇದನ್ನು ಖಚಿತಪಡಿಸಲು ಆಡಳಿತವು ಹಗಲು ರಾತ್ರಿ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.