ETV Bharat / bharat

ವೇಟ್‌ಲಿಫ್ಟಿಂಗ್ ಸ್ಪರ್ಧೆ: ಆರು ಚಿನ್ನದೊಂದಿಗೆ ತವರಿಗೆ ಬಂದ ಕೃತಿ ರಾಜ್ ಸಿಂಗ್​ಗೆ ಅದ್ಧೂರಿ ಸ್ವಾಗತ

author img

By

Published : Dec 3, 2022, 1:01 PM IST

ನ್ಯೂಜಿಲೆಂಡ್‌ನಲ್ಲಿ ನಡೆದ ಸಬ್ ಜೂನಿಯರ್ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಆರು ಚಿನ್ನದ ಪದಕ ಗಳಿಸಿ ಬಿಹಾರಕ್ಕೆ ಬಂದಿಳಿದ ಕೃತಿ ರಾಜ್ ಸಿಂಗ್ ಅವರಿಗೆ ಅದ್ಧೂರಿಯಾಗಿ ಸ್ವಾಗತ ಮಾಡಲಾಯಿತು.

kriti-raj-singh
ಕೃತಿ ರಾಜ್ ಸಿಂಗ್

ಪಾಟ್ನಾ(ಬಿಹಾರ): ನ್ಯೂಜಿಲೆಂಡ್‌ನಲ್ಲಿ ನಡೆದ ಜೂನಿಯರ್ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್ 2022 ಸ್ಪರ್ಧೆಯಲ್ಲಿ 6 ಚಿನ್ನದ ಪದಕ ಗಳಿಸಿದ ಖುಸ್ರುಪುರ್ ನಿವಾಸಿ ಕೃತಿ ರಾಜ್ ಸಿಂಗ್ ಅವರಿಗೆ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಈ ವೇಳೆ ಅಪಾರ ಅಭಿಮಾನಿಗಳು ಅವರನ್ನು ಸುತ್ತುವರಿದು ಶುಭಾಶಯ ಕೋರಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಕೃತಿ ರಾಜ್ ಸಿಂಗ್, ಬಾಲ್ಯದಿಂದಲೂ ನನಗೆ ಈ ರೀತಿಯ ಆಟದಲ್ಲಿ ಆಸಕ್ತಿ ಇತ್ತು. ನನ್ನ ಕಠಿಣ ಪರಿಶ್ರಮಕ್ಕೆ ಪೋಷಕರು ಪ್ರೋತ್ಸಾಹ ನೀಡಿದರು. ಅಲ್ಲದೇ ಕೋಚ್​ ಸಹ ಸಹಾಯ ಮಾಡಿದರು ಎಂದು ಕೃತಜ್ಞತೆ ಸಲ್ಲಿಸಿದರು.

ಸರ್ಕಾರದಿಂದ ಸಹಕಾರ ಸಿಗಲಿಲ್ಲ: ಬಿಹಾರ ಸರ್ಕಾರದಿಂದ ಸಹಕಾರ ಕೇಳಿದ್ದೆವು. ಆದರೆ ಯಾವುದೇ ಬೆಂಬಲ ಸಿಗಲಿಲ್ಲ. ಇಲ್ಲಿ ಕ್ರೀಡೆಗೆ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ. ಸದ್ಯದಲ್ಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಬಗ್ಗೆ ಮಾತನಾಡುತ್ತೇನೆ. ಮುಖ್ಯಮಂತ್ರಿಗಳು ಅಭಿನಂದಿಸಿದ್ದರು. ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.

ಇದನ್ನೂ ಓದಿ: ಮಂಗಳೂರು ತಲುಪಿದ ಡೀಗೊ ಮರಡೋನಾ 'ಹ್ಯಾಂಡ್‌ ಆಫ್ ಗಾಡ್‌' ಚಿನ್ನದ ಮೂರ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.