ETV Bharat / bharat

'ಆಕಾಶ್​ ಕೊಲೆಗಾರರು ಸಹ ಅವರ ಹೆತ್ತವರ ಮಕ್ಕಳು, ಶಪಿಸಬೇಡಿ' - ಶ್ರೀನಗರ

ಜಮ್ಮು ಕಾಶ್ಮೀರದಲ್ಲಿ ನಿವಾಸ ಪ್ರಮಾಣಪತ್ರವನ್ನು ಪಡೆದಿದ್ದಕ್ಕಾಗಿ ಆಕಾಶ್ ಕುಮಾರ್ ಮೆಹ್ರಾನನ್ನು ಉಗ್ರರು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಸಂಬಂಧ ರಮೇಶ್ ಕುಮಾರ್ ಅವರು ಮಗನ ಸಾವಿನ ಬಗ್ಗೆ ನೋವಿನ ಮಾತುಗಳನ್ನಾಡಿದರು.

Krishna Dhaba
ಜಮ್ಮು-ಕಾಶ್ಮೀರ
author img

By

Published : Apr 14, 2021, 10:12 AM IST

ಶ್ರೀನಗರ (ಜಮ್ಮು ಕಾಶ್ಮೀರ): "ನನ್ನ ಮಗ ಸಾವನ್ನಪ್ಪಿದ್ದಾನೆ. ಅವನು ಮತ್ತೆಂದೂ ಹಿಂತಿರುಗಿ ಬರಲಾರ. ಅವನನ್ನು ಕೊಲೆಗೈದವರ ಮೇಲೆ ನನಗೆ ದ್ವೇಷವಿಲ್ಲ. ಏಕೆಂದರೆ, ಕೊಂದವರು ಸಹ ಅವರ ಹೆತ್ತವರ ಮಕ್ಕಳು. ಅವರನ್ನು ಶಪಿಸಬೇಡಿ..." ಇದು ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದ್ದ ಆಕಾಶ್​ರವರ ತಂದೆ, ಕೃಷ್ಣಾ ಡಾಬಾದ ಮಾಲೀಕ ರಮೇಶ್ ಕುಮಾರ್ ನೋವಿನ ಮಾತು.

ಶ್ರೀನಗರದಲ್ಲಿರುವ ಕೃಷ್ಣ ಡಾಬಾ ಮಾಲೀಕನ ಪುತ್ರನನ್ನು ಹತ್ಯೆಗೈದ ಉಗ್ರರು.

ಮೂಲತಃ ಜಮ್ಮು ಪ್ರದೇಶದವರಾದ ಕುಮಾರ್, ದಶಕಗಳಿಂದ ಉಪಹಾರ ಗೃಹವನ್ನು ನಡೆಸುತ್ತಿದ್ದಾರೆ. ಈ ವರ್ಷದ ಫೆಬ್ರವರಿ 17 ರಂದು ವಿದೇಶಿ ರಾಯಭಾರಿಗಳು ಎರಡು ದಿನಗಳ ಕಾಲ ಕಣಿವೆಗೆ ಭೇಟಿ ನೀಡುತ್ತಿದ್ದಾರೆ ಎಂಬ ಮಾಹಿತಿ ತಿಳಿದ ಉಗ್ರರು, ಕುಮಾರ್​ ಅವರ ಮಗ ಆಕಾಶ್ ಕುಮಾರ್ ಮೆಹ್ರಾ ಅವರನ್ನು ಹತ್ಯೆ ಮಾಡಿದ್ದರು.

ಜಮ್ಮು ಕಾಶ್ಮೀರದಲ್ಲಿ "ರಾಜ್ಯೇತರ ವಿಷಯ ಮತ್ತು ನಿವಾಸ ಪ್ರಮಾಣಪತ್ರವನ್ನು ಪಡೆದಿದ್ದಕ್ಕಾಗಿ" ಮೆಹ್ರಾನನ್ನು ಕೊಂದಿರುವುದಾಗಿ ಮುಸ್ಲಿಂ ಜನ್ಬಾಜ್ ಫೋರ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದೆ.

ಇದಕ್ಕೂ ಮುನ್ನ, ಕಳೆದ ವರ್ಷ ಶ್ರೀನಗರದ ಹರಿಸಿಂಗ್ ಹೈಸ್ಟ್ರೀಟ್‌ನಲ್ಲಿ ವಾಸಸ್ಥಳದ ವಿಷಯದಲ್ಲಿ ಸತ್ಪಾಲ್ ನಿಸ್ಚಾಲ್ ಎಂಬ ಆಭರಣ ವ್ಯಾಪಾರಿ ಉಗ್ರರಿಂದ ಕೊಲ್ಲಲ್ಪಟ್ಟಿದ್ದ.

ಸಂವಿಧಾನದ ಆರ್ಟಿಕಲ್ 370 ಮತ್ತು 35 ಎ ರದ್ದುಗೊಳಿಸಿದ ನಂತರ, ಬಿಜೆಪಿ ಸರ್ಕಾರವು ಹಿಂದಿನ ರಾಜ್ಯದ ನಿವಾಸ ಕಾನೂನುಗಳನ್ನು ರದ್ದುಗೊಳಿಸಿತು. ಈ ಮೂಲಕ ಭಾರತದ ಯಾವುದೇ ನಿವಾಸಿ ಈಗ ಕೆಲವು ಷರತ್ತುಗಳನ್ನು ಪೂರೈಸಿದ ನಂತರ ಜಮ್ಮು ಕಾಶ್ಮೀರದ ನಿವಾಸಿಯಾಗಬಹುದು.

ಕಾಶ್ಮೀರ ವಲಯದ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ವಿಜಯ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಮೆಹ್ರಾ ಅವರ ಮೇಲೆ ಹಲ್ಲೆ ನಡೆಸಿದ ಮೂವರು ಉಗ್ರರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

"ನಾನು ಈಗ ದಶಕಗಳಿಂದ ಶ್ರೀನಗರದಲ್ಲಿ ವಾಸಿಸುತ್ತಿದ್ದೇನೆ ಮತ್ತು ಕೆಲಸ ಮಾಡುತ್ತಿದ್ದೇನೆ. ಭವಿಷ್ಯದಲ್ಲಿಯೂ ಯಾವುದೇ ಭಯವಿಲ್ಲದೆ ಕೆಲಸ ಮಾಡುತ್ತೇನೆ. ನನ್ನ ಮಗನ ಹತ್ಯೆಯ ನಂತರ ಅನೇಕ ಕಾಶ್ಮೀರದವರು ನನ್ನೊಂದಿಗೆ ಸಹಾನುಭೂತಿ ಮತ್ತು ಒಗ್ಗಟ್ಟು ವ್ಯಕ್ತಪಡಿಸಿದ್ದಾರೆ" ಎಂದು ರಾಕೇಶ್ ಕುಮಾರ್ ಮೆಹ್ರಾ ಹೇಳುತ್ತಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.