ETV Bharat / bharat

ಕೊಟಕಪುರ ಗುಂಡಿನ ದಾಳಿ ಪ್ರಕರಣ; ಜನರು ಮಾಹಿತಿ ಹಂಚಿಕೊಳ್ಳಲು ಸಮಯ ನಿಗದಿ ಮಾಡಿದ ಎಡಿಜಿಪಿ - ADGP LK Yadav

ಕೋಟಕಪುರ ಗುಂಡಿನ ದಾಳಿ ಪ್ರಕರಣದ ಕುರಿತು ಜನರು ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಲು, ಪೊಲೀಸರು ಏಪ್ರಿಲ್ 6 ರಂದು ದಿನಾಂಕ ನಿಗದಿಪಡಿಸಿದ್ದಾರೆ.

Special Investigation Team
ಕೊಟಕಪುರ ಗುಂಡಿನ ದಾಳಿ ಪ್ರಕರಣ
author img

By

Published : Apr 3, 2023, 8:51 PM IST

ಚಂಡೀಗಢ: ಕೊಟಕಪುರ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಏ.6 ರಂದು ಸಾಮಾನ್ಯ ಜನರು ಯಾವುದೇ ಮಾಹಿತಿಯನ್ನು ತಮ್ಮೊಂದಿಗೆ ಹಂಚಿಕೊಳ್ಳಬಹುದು ಎಂದು ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಮುಖ್ಯಸ್ಥ ಎಡಿಜಿಪಿ ಎಲ್‌ಕೆ ಯಾದವ್ ಹೇಳಿದ್ದಾರೆ. ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಎಲ್​.ಕೆ. ಯಾದವ್, ಎಡಿಜಿಪಿ, ಕಚೇರಿಯ 6ನೇ ಮಹಡಿ, ಪಂಜಾಬ್ ಪೊಲೀಸ್ ಹೆಡ್​​​​ಕ್ವಾಟರ್ಸ್​​​, ಸೆಕ್ಟರ್ 9-C ವಿಳಾಸದಲ್ಲಿ ಜನರು ಭೇಟಿ ಮಾಡಬಹುದು.

ಇಲ್ಲಿದೆ ದೂರವಾಣಿ ಸಂಖ್ಯೆ, ಇ-ಮೇಲ್​ ಮಾಹಿತಿ: 2015ರ ಅಕ್ಟೋಬರ್ 14ರಂದು ನಡೆದ ಕೋಟಕಪುರ ಗುಂಡಿನ ದಾಳಿ ಪ್ರಕರಣದ ತನಿಖೆ ಅಂತಿಮ ಹಂತ ತಲುಪಿದ್ದು, ಈ ಬಗ್ಗೆ ಉಲ್ಲೇಖಿಸಬಹುದು. ವಾಟ್ಸ್​ಆ್ಯಪ್​​ ಸಂಖ್ಯೆ 98759 83237 ಅಥವಾ ಇ-ಮೇಲ್​ ಐಡಿಗೆ ಸಂದೇಶ ಕಳುಹಿಸಬಹುದು. newsit2021kotkapuracase@gmail.com ಗೆ ಇ-ಮೇಲ್ ಮಾಡುವ ಮೂಲಕ ಮಾಹಿತಿ ಹಂಚಿಕೊಳ್ಳಬಹುದು. ಈ ಹಂತದಲ್ಲಿ ಯಾವುದೇ ಜವಾಬ್ದಾರಿಯುತ ವ್ಯಕ್ತಿ ನೀಡಿದ ಯಾವುದೇ ಮಾಹಿತಿಯನ್ನು ಎಸ್‌ಐಟಿ ಪರಿಗಣಿಸಲಿದೆ. ಇದರಿಂದ ತನಿಖೆಯನ್ನು ಕಾನೂನು ಪ್ರಕ್ರಿಯೆ ಮೂಲಕ ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಲು ಬಹಳ ಪ್ರಯೋಜನಕಾರಿಯಾಗಲಿದೆ ಎಂದು ಎಡಿಜಿಪಿ ಮಾಹಿತಿ ನೀಡಿದರು.

ಎಸ್‌ಐಟಿ ವಹಿಸಿರುವ ಈ ಜವಾಬ್ದಾರಿಯನ್ನು ಪೂರ್ಣಗೊಳಿಸಲು ಪಂಜಾಬ್ ಜನರು ನೀಡಿರುವ ಬೆಂಬಲಕ್ಕೆ ಎಡಿಜಿಪಿ ಧನ್ಯವಾದ ಅರ್ಪಿಸಿದರು. ಪಂಜಾಬ್‌ನ ಯಾವುದೇ ವ್ಯಕ್ತಿ ನೀಡಿದ ಮಾಹಿತಿಯು ಕೋಟಕ್‌ಪುರ ಗುಂಡಿನ ಘಟನೆಗೆ ಸಂಬಂಧಿಸಿದ ತನಿಖೆಯ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಲು ಉಪಯುಕ್ತವಾಗಿದೆ ಎಂದು ಅವರು ಹೇಳಿದರು.

ಪಂಜಾಬ್, ಹರಿಯಾಣ ಹೈಕೋರ್ಟ್ ಸೂಚನೆ ಏನಿತ್ತು?: ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸೂಚನೆ ಮೇರೆಗೆ ರಾಜ್ಯ ಸರ್ಕಾರ ಕೋಟಕಪುರ ಗುಂಡಿನ ದಾಳಿ ಘಟನೆಯ ತನಿಖೆಗೆ ಎಡಿಜಿಪಿ ಅವರನ್ನು ನೇಮಿಸಿದೆ. ಎಲ್.ಕೆ.ಯಾದವ್, ಐ.ಜಿ. ರಾಕೇಶ್ ಅಗರ್ವಾಲ್ ಹಾಗೂ ಎಸ್‌ಎಸ್‌ಪಿ ಮೊಗಾ ಅವರು ಗುಲ್ನೀತ್ ಸಿಂಗ್ ಖುರಾನಾ ಸೇರಿದಂತೆ ಹಿರಿಯ ಅಧಿಕಾರಿಗಳ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ. ವಿಶೇಷ ತನಿಖಾ ತಂಡವು ತನ್ನ ಮೊದಲ ವರದಿಯನ್ನು 2023ರ ಫೆಬ್ರವರಿ 24ರಂದು ನ್ಯಾಯಾಲಯಕ್ಕೆ ಸಲ್ಲಿಸಿತ್ತು.

ಇದನ್ನೂ ಓದಿ: ಹೊಸ ಸಂಸತ್ತಿನ ಹೊರಗೆ ಪ್ರಧಾನಿ ಪದವಿ ಪ್ರದರ್ಶಿಸಲು ಸಂಜಯ್ ರಾವತ್ ಆಗ್ರಹ

ಹಿಂದೆ ನಡೆದಿತ್ತು ಸುಖಬೀರ್ ಸಿಂಗ್ ಬಾದಲ್ ವಿಚಾರಣೆ: ಕೋಟಕಪುರದ ಗುಂಡಿನ ದಾಳಿಯ ಘಟನೆ ಮತ್ತು ಧರ್ಮನಿಂದೆಯ ವಿಷಯವು ರಾಜಕೀಯದ ಜ್ವಲಂತ ವಿಷಯವಾಗಿದೆ. ಬಹಳ ಹಿಂದಿನಿಂದಲೂ ಮತೀಯ ಮತ್ತು ಧಾರ್ಮಿಕ ವಿಷಯವಾಗಿದೆ ಎಂದು ಉಲ್ಲೇಖಿಸಬಹುದು. ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಅವರನ್ನು ಚಂಡೀಗಢದಲ್ಲಿ ಎಸ್‌ಐಟಿ ಸುಮಾರು ಮೂರು ಗಂಟೆಗಳ ಕಾಲ ಈ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿತು. ವಿಚಾರಣೆ ಬಳಿಕ ಸುಖಬೀರ್ ಸಿಂಗ್ ಬಾದಲ್ ಮಾಧ್ಯಮದವರನ್ನು ಸಂಪರ್ಕಿಸದೇ ಅಲ್ಲಿಂದ ತೆರಳಿದ್ದರು.

ಇದನ್ನೂ ಓದಿ: ಹೆತ್ತ ಮಗಳ ಕತ್ತು ಸೀಳಿ ಕೊಂದ ತಂದೆ, ಮಗನಿಂದ ಹತಳಾದ ತಾಯಿ: ಆರೋಪಿಗಳ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.