ETV Bharat / bharat

ಸಲಿಂಗಕಾಮದ ಗೀಳು.. ವಿದ್ಯಾಭ್ಯಾಸದಲ್ಲಿ ವಿಫಲ, IIT ಆಕಾಂಕ್ಷಿ ಆತ್ಮಹತ್ಯೆ

ಐಐಟಿ ಆಕಾಂಕ್ಷಿಗೆ ಸಲಿಂಗಕಾಮದ ಹುಚ್ಚು- ಅಧ್ಯಯನಕ್ಕೆ ಕುತ್ತು- ವಿದ್ಯಾಭ್ಯಾಸ ನಿಭಾಯಿಸಲು ವಿಫಲವಾದ ಕಾರಣ ಆತ್ಮಹತ್ಯೆ

ಐಐಟಿಗೆ ಕೋಚಿಂಗ್ ಪಡೆಯುತ್ತಿದ್ದ 16 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ

author img

By

Published : Jul 31, 2022, 3:45 PM IST

ಕೋಟಾ(ರಾಜಸ್ಥಾನ): ಐಐಟಿಗೆ ಕೋಚಿಂಗ್ ಪಡೆಯುತ್ತಿದ್ದ 16 ವರ್ಷದ ವಿದ್ಯಾರ್ಥಿಯೊಬ್ಬ ಸಲಿಂಗಕಾಮದ ತೊಂದರೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ರಾಜಸ್ಥಾನದ ಕೋಟಾದ ಹಾಸ್ಟೆಲ್‌ನಲ್ಲಿ ಶನಿವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜವಾಹರ್ ನಗರ ಪೊಲೀಸರ ಪ್ರಕಾರ, ವಿದ್ಯಾರ್ಥಿ ಮಧ್ಯಪ್ರದೇಶದ ಛಿಂದ್ವಾರಾ ನಿವಾಸಿ. ಈತನ ಶವದ ಬಳಿ ಆತ್ಮಹತ್ಯೆ ಪತ್ರವೂ ಪತ್ತೆಯಾಗಿದೆ. ಆತ್ಮಹತ್ಯೆ ಪತ್ರದ ಪ್ರಕಾರ, ತನ್ನ ಹೆತ್ತವರ ಕ್ಷಮೆಯಾಚಿಸಿದ್ದಾನೆ. ತನ್ನ ಸಹೋದರನ ಅಧ್ಯಯನದ ಖರ್ಚಿನ ಬಗ್ಗೆ ಕಾಳಜಿಯನ್ನೂ ತೋರಿಸಿದ್ದಾನೆ. ಅದರಂತೆ, ತನ್ನ ಸಲಿಂಗಕಾಮ ಮತ್ತು ತಾನು ಪ್ರೀತಿ ಮಾಡುತ್ತಿದ್ದ ಯುವಕನ ಬಗ್ಗೆಯೂ ಉಲ್ಲೇಖಿಸಿದ್ದಾನೆ. ಅಧ್ಯಯನದಲ್ಲಿ ವಿಫಲನಾಗಿದ್ದೇನೆ. ಆದರೆ, ಸಂಗಾತಿಯ ಮೇಲೆ ನಿಜವಾದ ಪ್ರೀತಿ ಇತ್ತು ಎಂದು ಬರೆದಿದ್ದಾನೆ.

'ಕ್ಷಮಿಸಿ ಅಪ್ಪಾ, ನಾನು ಯಾವುದಕ್ಕೂ ಅರ್ಹನಲ್ಲ, ನಿಮ್ಮ ಮಗ ತುಂಬಾ ಹೋರಾಡಿದನು. ಆದರೆ, ಸೋತನು, ನನ್ನ ಮೇಲೆ ತುಂಬಾ ಹಣವನ್ನು ವ್ಯರ್ಥ ಮಾಡಿದ್ದಕ್ಕಾಗಿ ಕ್ಷಮೆಯಾಚಿಸುತ್ತೇನೆ. ಈಗ ನೀವು ಕೇವಲ ಸಹೋದರನ ಶಿಕ್ಷಣದ ವೆಚ್ಚವನ್ನು ಮಾತ್ರ ಮಾಡಬೇಕಾಗಿದೆ. ನಾನು ಪ್ರೀತಿ ಮಾಡಿದ್ದು ನಿಜ. ಆದರೆ, ಅದು ಹುಡುಗನೊಂದಿಗೆ. ನಾನು ಆತನನ್ನು ತುಂಬಾ ಪ್ರೀತಿಸುತ್ತೇನೆ' ಎಂದು ನೋವಿನ ವಿದಾಯ ಹೇಳಿದ್ದಾನೆ.

ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಯ ತಂದೆ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಪಶ್ಚಿಮ ಬಂಗಾಳದಲ್ಲಿ ಹಣದೊಂದಿಗೆ ಸಿಕ್ಕಿಬಿದ್ದ ಜಾರ್ಖಂಡ್​ನ ಕಾಂಗ್ರೆಸ್​ ಶಾಸಕರ ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.