ETV Bharat / bharat

ಆರೋಪಿಗಳ ವಿಚಾರಣೆ.. ಮಾನವ ಹಕ್ಕುಗಳ ಉಲ್ಲಂಘನೆ ತಪ್ಪಿಸಲು ಅಮೆರಿಕ, ನೆದರ್​ಲೆಂಡ್​ ಪೊಲೀಸರಿಂದ ತರಬೇತಿ - ಮಾನವ ಹಕ್ಕುಗಳ ಉಲ್ಲಂಘನೆ

ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಇದು ದೇಶದಲ್ಲೇ ಮೊದಲ ಬಾರಿಗೆ ಪಶ್ಚಿಮ ಬಂಗಾಳದ ಕೋಲ್ಕತ್ತಾ ಪೊಲೀಸರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಅಮೆರಿಕ ಮತ್ತು ನೆದರ್​ಲೆಂಡ್​ ಪೊಲೀಸರಿಂದ ಹೊಸ ತಂತ್ರ ಕಲಿಯಲು ಯೋಜಿಸಲಾಗಿದೆ.

kolkata-police-is-planning-to-learn-new-interrogation-technique-from-usa-and-netherlands-police
ಆರೋಪಿಗಳ ವಿಚಾರಣೆ... ಮಾನವ ಹಕ್ಕುಗಳ ಉಲ್ಲಂಘನೆ ತಪ್ಪಿಸಲು ಅಮೆರಿಕ, ನೆದರ್​ಲೆಂಡ್​ ಪೊಲೀಸರಿಂದ ತರಬೇತಿ
author img

By

Published : Dec 3, 2022, 9:37 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಆರೋಪಿಗಳ ವಿಚಾರಣೆಗೆ ವಿಶೇಷ ತಂತ್ರವನ್ನು ಬಳಸಲು ಪಶ್ಚಿಮ ಬಂಗಾಳದ ಕೋಲ್ಕತ್ತಾ ಪೊಲೀಸರು ಯೋಜಿಸಿದ್ದಾರೆ. ಈ ತಂತ್ರವನ್ನು ಅಮೆರಿಕ ಮತ್ತು ನೆದರ್​ಲೆಂಡ್​ ಪೊಲೀಸರಿಂದ ಕಲಿಯಲು ಕೋಲ್ಕತ್ತಾ ಪೊಲೀಸರು ಮುಂದಾಗಿದ್ದಾರೆ.

ಪ್ರಸ್ತುತ ಯಾವುದೇ ಆರೋಪಿಗಳು ಮತ್ತು ಅಪರಾಧಿಗಳಿಗೆ ಪೊಲೀಸರು ದೈಹಿಕ ಹಿಂಸೆ ಅಥವಾ ಥಳಿಸುವುದು ಕಷ್ಟಕರವಾಗಿದೆ. ಅಲ್ಲದೇ, ಪೊಲೀಸ್​ ಕಸ್ಟಡಿಯಲ್ಲಿದ್ದಾಗ ಅತಿಯಾದ ಗಾಯ, ಹಿಂಸೆ ಮಾಡಿದರೆ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪವನ್ನೂ ಪೊಲೀಸರು ಎದುರಿಸಬೇಕಾಗಿದೆ. ಆದ್ದರಿಂದ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಇದು ದೇಶದಲ್ಲೇ ಮೊದಲ ಬಾರಿಗೆ ಪೊಲೀಸರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ.

ಇಲ್ಲಿಯವರೆಗೆ ಭಾರತೀಯ ಪೊಲೀಸರ ವಿಚಾರಣೆಯ ವಿಧಾನ ಮತ್ತು ಅಮೆರಿಕ ಪೊಲೀಸರ ಶೈಲಿಯ ನಡುವೆ ಸಂಪೂರ್ಣ ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನು ತೊಡೆದುಹಾಕಲು ಕೋಲ್ಕತ್ತಾ ಪೊಲೀಸರು ಅಮೆರಿಕನ್ ತಂತ್ರಗಳನ್ನು ಕಲಿಯಲು ಯೋಜಿಸುತ್ತಿದ್ದಾರೆ. ಜೊತೆಗೆ ನೆದರ್​​​ಲ್ಯಾಂಡ್​ ​ ಪೊಲೀಸರಿಂದ ವಿಶೇಷ ತಂತ್ರ ಕಲಿಯಲು ಮುಂದಾಗಿದ್ದಾರೆ.

ಇದನ್ನೂ ಓದಿ: ನ್ಯಾಯಾಂಗವು ಪ್ರಜಾಪ್ರಭುತ್ವದ ಕಾವಲುಗಾರ: ನ್ಯಾಯಮೂರ್ತಿ ಚಂದ್ರ ಧಾರಿ ಸಿಂಗ್

ಆರೋಪಿಗಳ ವಿಚಾರಣೆ ಕುರಿತಂತೆ ಅಮೆರಿಕದಲ್ಲಿ ಮೂಲ ಷರತ್ತುಗಳು ಇವೆ. ಅಮೆರಿಕನ್ ಪೊಲೀಸ್ ಶೈಲಿಯಲ್ಲಿ ಅಪರಾಧಿಗಳು ಅಥವಾ ಆರೋಪಿಗಳನ್ನು ಬಂಧಿಸಿದ ನಂತರ ಪೊಲೀಸ್ ಠಾಣೆಯಲ್ಲಿ ಸೌಹಾರ್ದಯುತವಾಗಿ ನಡೆಸಿಕೊಳ್ಳಬೇಕು. ತನಿಖಾ ಅಧಿಕಾರಿಗಳು ಆರೋಪಿ ಅಥವಾ ಅಪರಾಧಿಯ ವಿಶ್ವಾಸ ಗಳಿಸಬೇಕು.

ಕೋಲ್ಕತ್ತಾ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳ ಪ್ರಕಾರ, ಆರೋಪಿಯೊಂದಿಗೆ ಮೃದುವಾದ ಧ್ವನಿಯಲ್ಲಿ ಮಾತನಾಡುವುದು ಮತ್ತು ಗೌರವಯುತವಾಗಿ ಮಾತನಾಡುವ ಮೂಲಕ ವಿಶ್ವಾಸ ಗಳಿಸುವುದು ಅಪರಾಧಿ ಅಥವಾ ಆರೋಪಿಯ ಮನಸ್ಸಿನಲ್ಲಿರುವ ಅಪರಾಧದ ಗುಪ್ತ ರಹಸ್ಯಗಳ ಮೇಲೆ ಬೆಳಕು ಚೆಲ್ಲುತ್ತದೆ. ಇದರಿಂದ ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ಆದರೆ, ಈ ಪ್ರಕ್ರಿಯೆಯಲ್ಲಿ ಅಪರಾಧಿಗಳು ಅಥವಾ ಆರೋಪಿಗಳನ್ನು ಸೌಹಾರ್ದ ವಿಧಾನಗಳನ್ನು ಬಳಸಿಕೊಂಡು ವಿಚಾರಣೆ ಮಾಡುವುದು ಪೊಲೀಸರಿಗೆ ಒಂದೇ ಸವಾಲೇ ಸರಿ. ಏಕೆಂದರೆ, ಇದಕ್ಕೆ ಪೊಲೀಸರಿಗೆ ತಾಳ್ಮೆ ಬೇಕಾಗುತ್ತದೆ. ತಾಳ್ಮೆಯ ಈ ತಂತ್ರವನ್ನು ಅಳವಡಿಸಿಕೊಂಡರೆ, ದೈಹಿಕವಾಗಿ ಹಾನಿ ಮಾಡದೆಯೇ ಸತ್ಯವನ್ನು ಹೊರ ಹಾಕಲು ಸಾಧ್ಯವಿದೆ.

ಜೊತೆಗೆ ವಿವಿಧ ಅಪರಾಧಗಳ ಪ್ರಕರಣಗಳಲ್ಲಿ ಆರೋಪಿಗಳೊಂದಿಗೆ ಸ್ನೇಹದಿಂದ ಇರುವುದಕ್ಕಿಂತ ನಿಧಾನ ಗತಿಯಲ್ಲಿ ಇಡೀ ಘಟನೆಯನ್ನು ಅರ್ಥಮಾಡಿಕೊಳ್ಳುವುದು ಉತ್ತಮ. ಇದರಿಂದ ಆರೋಪಿಗಳನ್ನು ಥಳಿಸುವ ಅಭ್ಯಾಸ ಶಾಶ್ವತವಾಗಿ ಕೊನೆಗೊಳ್ಳುವುದನ್ನು ನಿರೀಕ್ಷಿಸಲು ಸಾಧ್ಯವಾಗುತ್ತದೆ ಎಂದು ಕೋಲ್ಕತ್ತಾ ಪೊಲೀಸರು ಹೇಳುತ್ತಾರೆ.

ಇದನ್ನೂ ಓದಿ: YSRCP regime.. ಆಂಧ್ರಕ್ಕೆ ಬಂದ ಹೊಸ ಕೈಗಾರಿಕೆಗಳಿಂತ ಬಿಟ್ಟು ಹೋದ ಕಂಪನಿಗಳೇ ಹೆಚ್ಚು..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.