ಕೋಲ್ಕತಾ: ನ್ಯಾಯಾಧೀಶರಿಗೆ ದೂರವಾಣಿ ಮೂಲಕ ಅವಾಚ್ಯ ಶಬ್ದಗಳಿಂದ ಮಾತನಾಡಿದ ವ್ಯಕ್ತಿಯನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.
ನ್ಯಾಯಾಧೀಶರು ಕೆಲವು ತಿಂಗಳ ಹಿಂದೆ ಮೊಬೈಲ್ ಆ್ಯಪ್ ಮೂಲಕ ಕರೆಯೊಂದನ್ನು ಸ್ವೀಕರಿಸಿದ್ದರು. ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಅವಾಚ್ಯ ಶಬ್ದಗಳಿಂದ ಮನಬಂದಂತೆ ನಿಂದಿಸಿದ್ದಾನೆ. ಈ ಕುರಿತು ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ.
ಬಂಧಿತ ಆರೋಪಿ ಕೇಂದ್ರ ಸರ್ಕಾರಿ ನೌಕರನ ಮಗ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಶತ್ರು ಕ್ಷಿಪಣಿಗಳಿಂದ ಹಡಗು ರಕ್ಷಣೆಗೆ ಅತ್ಯಾಧುನಿಕ 'ಚಾಫ್': ಏನಿದು?