ETV Bharat / bharat

ಬದುಕಿದ ಬಡಜೀವಗಳು : ಮಳೆಯಿಂದ ರಕ್ಷಣೆಗಾಗಿ ಕಟ್ಟಡದ ಕೆಳಗಿದ್ದವರು ಪ್ರಾಣಾಪಾಯದಿಂದ ಪಾರು - ಮಹಾರಾಷ್ಟ್ರದಲ್ಲಿ ಮಳೆಯ ಸುದ್ದಿ

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗಿದೆ. ಇನ್ನು, ಮಹಾರಾಷ್ಟ್ರದ ಹಲವೆಡೆ ಭಾರಿ ಮಳೆ ಸುರಿಯುತ್ತಿದ್ದು, ಕೆಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಹೆಚ್ಚಾಗಿದೆ..

kolhapur-a-wall-of-a-delipidated-building-collapsed-person-had-miraculous-escape
ಬದುಕಿದ ಬಡಜೀವಗಳು: ಮಳೆಯಿಂದ ರಕ್ಷಣೆಗಾಗಿ ಕಟ್ಟಡದ ಕೆಳಗಿದ್ದವರು ಪ್ರಾಣಾಪಾಯದಿಂದ ಪಾರು
author img

By

Published : Jul 14, 2021, 4:47 PM IST

ಕೊಲ್ಹಾಪುರ,(ಮಹಾರಾಷ್ಟ್ರ) : ಮಳೆಯಿಂದ ರಕ್ಷಣೆಗಾಗಿ ಕಟ್ಟಡದ ಕೆಳಗೆ ನಿಂತಿದ್ದ ವ್ಯಕ್ತಿಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ರೋಮಾಂಚನಕಾರಿ ಘಟನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದಿದೆ.

ಕೊಲ್ಹಾಪುರ ನಗರದ ಮಹಾದ್ವಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮಳೆಯ ಕಾರಣದಿಂದ ಮೊದಲೇ ಶಿಥಿಲಗೊಂಡಿದ್ದ ಕಟ್ಟಡದ ಭಾಗವೊಂದು ಕುಸಿದಿದೆ. ಈ ವೇಳೆ ಕಟ್ಟಡದ ಕೆಳಗೆ ನಿಂತಿದ್ದ ವ್ಯಕ್ತಿಗಳಿಗೆ ಹೊರಗೆ ಬರುವಂತೆ ಬೇರೆಯವರು ಸೂಚಿಸಿದ ಕಾರಣದಿಂದ ಇಬ್ಬರು ಹೊರಗೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಟ್ಟಡ ಕುಸಿತದ ವಿಡಿಯೋ

ಅಲ್ಲಿಯೇ ನಿಂತಿದ್ದ ವ್ಯಕ್ತಿಯೋರ್ವ ತನ್ನ ಮೊಬೈಲ್​ನಲ್ಲಿ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗಿದೆ. ಇನ್ನು, ಮಹಾರಾಷ್ಟ್ರದ ಹಲವೆಡೆ ಭಾರಿ ಮಳೆ ಸುರಿಯುತ್ತಿದ್ದು, ಕೆಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಹೆಚ್ಚಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.