ಹೈದರಾಬಾದ್ : ಸೂಪರ್‌ಮೂನ್, ಬ್ಲಡ್ ಮೂನ್ ಮತ್ತು ಚಂದ್ರ ಗ್ರಹಣವನ್ನು ನೋಡಿದ ನಂತರ, ವರ್ಷದ ಮೊದಲ ಸೂರ್ಯಗ್ರಹಣ ಜೂನ್ 10ರಂದು ಮಧ್ಯಾಹ್ನ 1: 42ರಿಂದ ಸಂಜೆ 6.41ರೊಳಗೆ ವೀಕ್ಷಿಸಬಹುದು ಎಂದು ನಾಸಾ ತಿಳಿಸಿದೆ. ಇದು 2021ರ ಮೊದಲ ಸೂರ್ಯಗ್ರಹಣವಾಗಲಿದೆ.
ಭಾರತದ ಈಶಾನ್ಯ ರಾಜ್ಯವಾದ ಅರುಣಾಚಲ ಪ್ರದೇಶದಲ್ಲಿ ಭಾಗಶಃ ಸೂರ್ಯಗ್ರಹಣ ಗೋಚರವಾಗಲಿದೆ. ಉತ್ತರ ಅಮೆರಿಕ, ಕೆನಡಾ, ಯುರೋಪ್ ಮತ್ತು ರಷ್ಯಾಗಳಲ್ಲಿ ಪೂರ್ಣ ಗ್ರಹಣವು ಗೋಚರವಾಗಲಿದೆ.
'ರಿಂಗ್ ಆಫ್ ಫೈರ್' ಎಂದೂ ಕರೆಯಲ್ಪಡುವ ಈ ವಿದ್ಯಮಾನವು ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಬಂದಾಗ ಸಂಭವಿಸುತ್ತದೆ. ಚಂದ್ರನು ಭೂಮಿಯಿಂದ ದೂರದಲ್ಲಿದ್ದಾಗ ವಾರ್ಷಿಕ ಸೂರ್ಯಗ್ರಹಣ ಸಂಭವಿಸುತ್ತದೆ. ಗ್ರಹದಿಂದ ದೂರವಿರುವುದರಿಂದ ಚಂದ್ರನಿಗೆ ಸೂರ್ಯನ ಬೆಳಕನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗುವುದಿಲ್ಲ.
ಆದ್ದರಿಂದ ಸೂರ್ಯನ ಬೆಳಕು 'ರಿಂಗ್ ಆಫ್ ಫೈರ್' ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. 2021ರ ಎರಡನೇ ಸೂರ್ಯಗ್ರಹಣ ಡಿಸೆಂಬರ್ 4 ರಂದು ಸಂಭವಿಸಲಿದೆ ಎಂದು ವರದಿಗಳು ತಿಳಿಸಿವೆ.