ETV Bharat / bharat

ಖ್ಯಾತ ಗಾಯಕ ಕೃಷ್ಣಕುಮಾರ್​​ ಕುನ್ನತ್​​ ವಿಧಿವಶ.. ಮೋದಿ ಸೇರಿ ಅನೇಕರಿಂದ ಕಂಬನಿ - singer Krishnakumar Kunnath

ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್​ ನಿನ್ನೆ ರಾತ್ರಿ ವಿಧಿವಶರಾಗಿದ್ದಾರೆ. ಕೋಲ್ಕತ್ತಾದಲ್ಲಿ ಆಯೋಜನೆ ಮಾಡಲಾಗಿದ್ದ ಸಂಗೀತ ಕಾರ್ಯಕ್ರಮದ ಬೆನ್ನಲ್ಲೇ ಹೋಟೆಲ್​ಗೆ ತೆರಳಿದ್ದ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿತ್ತು.

KK passes away after concert in Kolkata
KK passes away after concert in Kolkata
author img

By

Published : Jun 1, 2022, 6:29 AM IST

ಕೋಲ್ಕತ್ತಾ: ಕನ್ನಡ, ಹಿಂದಿ, ತಮಿಳು ಸೇರಿದಂತೆ ವಿವಿಧ ಭಾಷೆಯ ಸಿನಿಮಾಗಳಲ್ಲಿ ಹಿನ್ನೆಲೆ ಗಾಯಕರಾಗಿ ಅತಿದೊಡ್ಡ ಹೆಸರು ಮಾಡಿದ್ದ ಕೃಷ್ಣಕುಮಾರ್ ಕುನ್ನತ್(53)​ ವಿಧಿವಶರಾಗಿದ್ದಾರೆ. ನಿನ್ನೆ ರಾತ್ರಿ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಕೋಲ್ಕತ್ತಾದಲ್ಲಿ ಆಯೋಜನೆ ಮಾಡಲಾಗಿದ್ದ ಸಂಗೀತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು, ತದನಂತರ ಹೋಟೆಲ್​ ತಲುಪಿದಾಗ ಆರೋಗ್ಯದಲ್ಲಿ ದಿಢೀರ್​​ ಏರುಪೇರು ಕಂಡು ಬಂದಿದೆ.

ಕೋಲ್ಕತ್ತಾದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೆಕೆ

ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆಸ್ಪತ್ರೆಗೆ ತಲುಪುವ ಮೊದಲೇ ವಿಧಿವಶರಾಗಿದ್ದರು ಎಂದು ವರದಿಯಾಗಿದೆ. ಮೂಲಗಳ ಪ್ರಕಾರ ಅವರಿಗೆ ಹೃದಯಾಘಾತವಾಗಿದೆ ಎಂದು ಹೇಳಲಾಗ್ತಿದೆ. ಕೋಲ್ಕತ್ತಾದಲ್ಲಿ ಆಯೋಜನೆ ಮಾಡಲಾಗಿದ್ದ ಕಾನ್ಸರ್ಟ್‌ನಲ್ಲಿ ಪಾಲ್ಗೊಂಡಿದ್ದ ಕೃಷ್ಣಕುಮಾರ್ ಕುನ್ನತ್ ಸುಮಾರು ಒಂದೂವರೆ ಗಂಟೆ ಕಾಲ ಹಾಡಿದ್ದರು. ಕೃಷ್ಣಕುಮಾರ್​ ಕುನ್ನತ್​​ ತಮಿಳು, ಮಲಯಾಳಂ, ಮರಾಠಿ, ಬೆಂಗಾಲಿ ಭಾಷೆಗಳಲ್ಲೂ ಹಾಡಿದ್ದಾರೆ. 1968ರ ಆಗಸ್ಟ್​​ 23ರಂದು ದೆಹಲಿಯಲ್ಲಿ ಜನಸಿದ್ದ ಕೃಷ್ಣ ಕುಮಾರ್ ಕುನ್ನತ್​​ ಅವರು ಕೆಕೆ ಎಂದು ಪ್ರಸಿದ್ಧರಾಗಿದ್ದರು. ಖ್ಯಾತ ಗಾಯಕ ಎ.ಆರ್​ ರೆಹಮಾನ್​ ಅವರು ಕುನ್ನತ್​ ಅವರನ್ನ ಚಿತ್ರರಂಗಕ್ಕೆ ಪರಿಚಯ ಮಾಡಿಸಿದ್ದರು.

KK passes away after concert in Kolkata
ಖ್ಯಾತ ಗಾಯಕ ಕೃಷ್ಣಕುಮಾರ್​​ ಕುನ್ನತ್​​ ವಿಧಿವಶ

ಇದನ್ನೂ ಓದಿ: ಕನ್ನಡದಲ್ಲಿ ಮಾತನಾಡಿದ ಬಾಲಿವುಡ್ ಸುಂದರಿ ರಕ್ಕಮ್ಮ: ವಿಡಿಯೋ

ಪ್ರಧಾನಿ ಮೋದಿ ಸಂತಾಪ: ಕೃಷ್ಣಕುಮಾರ್​ ಕುನ್ನತ್ ದಿಢೀರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ಕೃಷ್ಣಕುಮಾರ್​ ಕುನ್ನತ್ ಅವರ ಅಕಾಲಿಕ ಸಾವು ಮನಸ್ಸಿಗೆ ನೋವು ತರಿಸಿದೆ. ಕೆಕೆ ಅವರ ಹಾಡುಗಳಲ್ಲಿ ಎಲ್ಲ ರೀತಿಯ ಭಾವನೆ ಇರುತ್ತಿದ್ದವು. ಎಲ್ಲ ವಯೋಮಾನದವರನ್ನ ತಮ್ಮ ಹಾಡುಗಳ ಮೂಲಕ ರಂಜಿಸಿದ್ದರು. ಅವರ ಹಾಡುಗಳ ಮೂಲಕ ಸದಾ ನೆನಪಿನಲ್ಲಿ ಉಳಿದುಕೊಳ್ಳಲಿದ್ದಾರೆ ಎಂದಿದ್ದಾರೆ.

  • Saddened by the untimely demise of noted singer Krishnakumar Kunnath popularly known as KK. His songs reflected a wide range of emotions as struck a chord with people of all age groups. We will always remember him through his songs. Condolences to his family and fans. Om Shanti.

    — Narendra Modi (@narendramodi) May 31, 2022 " class="align-text-top noRightClick twitterSection" data=" ">

ಅಕ್ಷಯ್ ಕುಮಾರ್​ ಕಂಬನಿ: ಕೆಕೆ ನಿಧನವಾರ್ತೆ ಕೇಳಿ ತೀವ್ರ ನೋವು ಹಾಗೂ ಆಘಾತವಾಗಿದೆ. ಇಂದು ಸಿನಿಮಾ ರಂಗಕ್ಕೆ ದೊಡ್ಡ ನಷ್ಟ. ಓಂ ಶಾಂತಿ ಎಂದು ನಟ ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ. ಉಳಿದಂತೆ ಅರ್ಮಾನ್​ ಮಲಿಕ್​, ಫರಾನ್ ಅಖ್ತರ್​, ಕರಣ್ ಜೋಹರ್ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ.

  • Extremely sad and shocked to know of the sad demise of KK. What a loss! Om Shanti 🙏🏻

    — Akshay Kumar (@akshaykumar) May 31, 2022 " class="align-text-top noRightClick twitterSection" data=" ">

ETV Bharat Logo

Copyright © 2024 Ushodaya Enterprises Pvt. Ltd., All Rights Reserved.