ETV Bharat / bharat

ಹಳೆಯ ವಸ್ತುಗಳಿಂದ ಹೊಸ ರೂಪ ಪಡೆದ 'ಕಿತಾಬಿ ಮಸ್ತಿ': 9 ವರ್ಷದ ಬಾಲಕಿಯ ಶ್ರಮದಲ್ಲಿ ಅರಳಿದ ಗ್ರಂಥಾಲಯ

author img

By ETV Bharat Karnataka Team

Published : Oct 28, 2023, 7:11 PM IST

Updated : Oct 28, 2023, 7:37 PM IST

ಮನುಷ್ಯನ ಜ್ಞಾನ ದಾಹ ತಣಿಸುವ ಮೂಲವೇ ಪುಸ್ತಕ. ಅವುಗಳ ಸಂರಕ್ಷಣಾ ಸ್ಥಳವೇ ಗ್ರಂಥಾಲಯ. ಬಡಮಕ್ಕಳ ಜ್ಞಾನಕ್ಕಾಗಿ 9 ವರ್ಷದ ಬಾಲಕಿ ಆರಂಭಿಸಿದ್ದ ಟೆಂಟ್​ ಗ್ರಂಥಾಲಯ ಈಗ 'ಕಿತಾಬಿ ಮಸ್ತಿ'ಯಾಗಿ ಬದಲಾಗಿದೆ.

ಕಿತಾಬಿ ಮಸ್ತಿ
ಕಿತಾಬಿ ಮಸ್ತಿ
ಹಳೆಯ ವಸ್ತುಗಳಿಂದ ಹೊಸ ರೂಪ ಪಡೆದ ಕಿತಾಬಿ ಮಸ್ತಿ

ಭೋಪಾಲ್ (ಮಧ್ಯಪ್ರದೇಶ): 9 ವರ್ಷದ ಬಾಲಕಿ ಮುಸ್ಕಾನ್​ಳ ಶ್ರಮದಿಂದ ತಾತ್ಕಾಲಿಕ ಟೆಂಟ್‌ನಲ್ಲಿ ಸಣ್ಣ ಗ್ರಂಥಾಲಯವನ್ನು ಪ್ರಾರಂಭಿಸಲಾಗಿತ್ತು. ಇದೀಗ 'ಕಿತಾಬಿ ಮಸ್ತಿ'ಯಾಗಿ ಮಾರ್ಪಾಟಾಗಿದೆ. ಆರ್ಕಿಟೆಕ್ಚರ್ (ವಾಸ್ತುಶಾಸ್ತ್ರ) ವಿದ್ಯಾರ್ಥಿಗಳು ಹಳೆಯ ವಸ್ತುಗಳನ್ನೇ ಬಳಸಿಕೊಂಡು ಗ್ರಂಥಾಲಯವನ್ನು ನವೀಕರಿಸಿದ್ದಾರೆ. ಇಲ್ಲಿಗೆ ಬಡ ಮಕ್ಕಳು ಜ್ಞಾನವನ್ನು ಪಡೆಯಲು ಆಗಮಿಸುತ್ತಿದ್ದಾರೆ.

ಭೋಪಾಲ್‌ನ ಹೃದಯಭಾಗದಲ್ಲಿರುವ ದುರ್ಗಾ ಬಸ್ತಿಯಲ್ಲಿ ಈ ಕಿತಾಬಿ ಮಸ್ತಿ ಗ್ರಂಥಾಲಯವಿದೆ. ಇದು ಬಡ ಮಕ್ಕಳ ಕನಸುಗಳ ಪಿಸುಮಾತಿಗೆ ಕಿವಿಕೊಟ್ಟಿದೆ. ಕಿತಾಬಿ ಮಸ್ತಿ ಗ್ರಂಥಾಲಯವು ಅಕ್ಷರ ದಾಹದ ಶಕ್ತಿಗೆ ಸಾಕ್ಷಿಯಾಗಿದೆ. 7 ವರ್ಷಗಳ ಹಿಂದೆ ಮುಸ್ಕಾನ್ ಅಹಿವಾರ್ ಎಂಬ 9 ವರ್ಷದ ಬಾಲಕಿ ಟೆಂಟ್​ನಲ್ಲಿ ಪುಸ್ತಕಗಳನ್ನು ಶೇಖರಿಸಿಟ್ಟು ಗ್ರಂಥಾಲಯ ಆರಂಭಿಸಿದ್ದರು. ಇಂತಹ ಅಕ್ಷರಧಾಮಕ್ಕೆ ಆರ್ಕಿಟೆಕ್ಚರ್ ವಿದ್ಯಾರ್ಥಿಗಳ ರಾಷ್ಟ್ರೀಯ ಸಂಘವು ಹೊಸ ಒಳಪು ನೀಡಿದೆ.

ಹಳೆಯ ವಸ್ತುಗಳಿಂದ ಹೊಸ ರೂಪ: ಆರ್ಕಿಟೆಕ್ಚರ್ ವಿದ್ಯಾರ್ಥಿಗಳು ತಮ್ಮ ಕೌಶಲದಿಂದ ಈ ಅಕ್ಷರಧಾಮಕ್ಕೆ ಹೊಸರೂಪು ನೀಡಬೇಕೆಂದು ನಿರ್ಧರಿಸಿ, ಹಳೆಯ ವಸ್ತುಗಳನ್ನೇ ನವೀಕರಿಸಿ ಇದೀಗ ಗ್ರಂಥಾಲಯಕ್ಕೆ ಹೊಸ ರೂಪ ನೀಡಿದ್ದಾರೆ. ಒಂದು ತಿಂಗಳೊಳಗೆ ಮುಸ್ಕಾನ್ ಅವರ ಅಕ್ಷರಕ್ರಾಂತಿಗೆ ಜೀವ ತುಂಬಿದ್ದಾರೆ.

ಇದೀಗ ಕಿತಾಬಿ ಮಸ್ತಿಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ. ಬಡ ಮಕ್ಕಳ ಪ್ರೀತಿಯ ಮತ್ತು ಅಕ್ಷರ ಸ್ವರ್ಗವಾಗಿ ಹೊರಹೊಮ್ಮಿದೆ. ಜೀವನದ ಕಟು ವಾಸ್ತವಗಳಿಂದ ಕೆಲಕಾಲ ದೂರವಿರಿಸಿ ಅಕ್ಷರ ಜ್ಞಾನದೆಡೆಗೆ ಅವರನ್ನು ಕೈಬೀಸಿ ಕರೆಯುತ್ತಿದೆ. ಮುಸ್ಕಾನ್ ಅವರ ದೂರದೃಷ್ಟಿಯ ಗ್ರಂಥಾಲಯವು ಅದರ ನಾಲ್ಕು ಗೋಡೆಗಳನ್ನು ಮೀರಿ ವಿಸ್ತರಿಸುತ್ತಿದೆ. ಸ್ವಯಂಸೇವಕರು ಕೂಡ ಈ ಯುವ ಮನಸ್ಸುಗಳನ್ನು ಪೋಷಿಸಲು ತಮ್ಮ ಸಹಾಯಹಸ್ತುವನ್ನು ಚಾಚಿದ್ದಾರೆ.

ಇದು ಗ್ರಂಥಾಲಯವಲ್ಲ, ದಾರಿ ದೀಪ: ಕಿತಾಬಿ ಮಸ್ತಿ ಗ್ರಂಥಾಲಯಕ್ಕೆ ಈಗ ಬುದ್ಧಿಜೀವಿಗಳ, ಜನರ ಸಹಕಾರ ದೊರಕುತ್ತಿದೆ. ಅವರಲ್ಲಿರುವ ಪುಸ್ತಕಗಳನ್ನು ಇಲ್ಲಿಗೆ ತಂದು ನೀಡುತ್ತಿದ್ದಾರೆ. ಇದು ಕೇವಲ ಗ್ರಂಥಾಲಯವಲ್ಲ, ಬಡ ಮಕ್ಕಳ ಭರವಸೆಯ ಬೆಳಕಾಗಿದೆ. ಈ ಪುಸ್ತಕಗಳ ಮೂಲಕವೇ ಮಕ್ಕಳು ಉಜ್ವಲ ಭವಿಷ್ಯವನ್ನು ಕಂಡುಕೊಳ್ಳುತ್ತಿದ್ದಾರೆ.

ಈಟಿವಿ ಭಾರತ್ ಜೊತೆ ಮಾತನಾಡಿದ ಸಂಸ್ಥಾಪಕಿ ಮುಸ್ಕಾನ್, 2016ರ ಜನವರಿ 26 ರಂದು ನಾನು ಈ ಗ್ರಂಥಾಲಯವನ್ನು ಪ್ರಾರಂಭಿಸಿದಾಗ ನನಗೆ 9 ವರ್ಷ ವಯಸ್ಸಾಗಿತ್ತು. ನನ್ನಲ್ಲಿದ್ದ ಕೆಲವು ಪುಸ್ತಕಗಳನ್ನು ಮನೆಯ ಹೊರಗೆ ಹಗ್ಗದಲ್ಲಿ ನೇತುಹಾಕಿ ಮಕ್ಕಳ ಗಮನ ಸೆಳೆದೆ. ವರ್ಣರಂಜಿತ ಚಿತ್ರಗಳು ಮಕ್ಕಳನ್ನು ಆಕರ್ಷಿಸಿದವು. ಅವರು ಪುಸ್ತಕಗಳನ್ನು ಓದಲು ನಿಯಮಿತವಾಗಿ ನನ್ನ ಮನೆಗೆ ಭೇಟಿ ನೀಡಲು ಆರಂಭಿಸಿದರು. ಇದು ಮುಂದೆ ಕಿತಾಬಿ ಮಸ್ತಿಯಾಗಿ ಬೆಳೆಯಿತು ಎಂದು ಹೇಳಿದರು.

ಮನೆ ಚಿಕ್ಕದಾಗಿದ್ದ ಕಾರಣ ಮಕ್ಕಳು ಬಂದಾಗ ಸ್ಥಳದ ಅಭಾವ ಎದುರಾಯಿತು. ಹೀಗಾಗಿ ಗ್ರಂಥಾಲಯವನ್ನು ದುರ್ಗಾ ಪೂಜೆಗೆ ಬಳಸುವ ಜಾಗಕ್ಕೆ ಸ್ಥಳಾಂತರಿಸಿದೆವು. ಫ್ಲೆಕ್ಸ್‌ಗಳನ್ನು ಸುತ್ತಲೂ ಕಟ್ಟಿ ಅಲ್ಲಿಯೇ ಪುಸ್ತಕಗಳನ್ನು ಮಕ್ಕಳಿಗೆ ಓದಲು ನೀಡಲಾಯಿತು. ಇದೀಗ ಕೆಲ ಸ್ವಯಂಸೇವಕರು ಗ್ರಂಥಾಲಯವನ್ನು ಮಾರ್ಪಡಿಸಿದರು. ಅದಕ್ಕೆ ಕಿತಾಬಿ ಮಸ್ತಿ ಎಂದು ಹೆಸರಿಟ್ಟೆವು. ಈಗ 25 ರಿಂದ 30 ಮಕ್ಕಳು ಇಲ್ಲಿ ಜ್ಞಾನಾರ್ಜನೆಗೆ ಬರುತ್ತಾರೆ ಎಂದು ಹೇಳುತ್ತಾರೆ.

ಒಂದು ತಿಂಗಳಲ್ಲಿ ಗ್ರಂಥಾಲಯ ರೆಡಿ: ಗ್ರಂಥಾಲಯ ನವೀಕರಿಸಿದವರಲ್ಲಿ ಒಬ್ಬರಾದ ಪಂಕಜ್ ಠಾಕೂರ್ ಮಾತನಾಡಿ, ನ್ಯಾಷನಲ್ ಅಸೋಸಿಯೇಷನ್ ​​ಆಫ್ ಆರ್ಕಿಟೆಕ್ಚರ್​ನ 60 ವಿದ್ಯಾರ್ಥಿಗಳು ಈ ಗ್ರಂಥಾಲಯವನ್ನು ನವೀಕರಿಸಿದರು. ಅವರು ಟಿನ್ ಕ್ಯಾನ್​ಗಳು, ಟೆರಾಕೋಟಾ ಟೈಲ್ಸ್, ರಟ್ಟಿನ ವಸ್ತುಗಳು ಸೇರಿದಂತೆ ಹಳೆಯ ವಸ್ತುಗಳನ್ನು ಬಳಸಿ ಗ್ರಂಥಾಲಯಕ್ಕೆ ಒಂದೇ ತಿಂಗಳಲ್ಲಿ ಹೊಸ ರೂಪ ನೀಡಿದರು. ಮಕ್ಕಳು ಇಲ್ಲಿ ಸಮಯ ಕಳೆಯಲು ಇಷ್ಟಪಡುತ್ತಾರೆ. ಅವರು ಓದುವುದರ ಜೊತೆಗೆ ಮೋಜು ಮಾಡುತ್ತಾರೆ. ನಾನು 9-11 ನೇ ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಹೇಳಿದರೆ, ಮುಸ್ಕಾನ್ ಚಿಕ್ಕ ಮಕ್ಕಳನ್ನು ನೋಡಿಕೊಳ್ಳುತ್ತಾರೆ ಎಂದರು.

ಇದನ್ನೂ ಓದಿ: 12 ವರ್ಷದ ಬಾಲಕಿಯಿಂದ ಲೈಬ್ರರಿ ಸ್ಥಾಪನೆ: 'ಮನ್ ಕಿ ಬಾತ್'ನಲ್ಲಿ ಪ್ರಧಾನಿ ಮೆಚ್ಚುಗೆ... ಮೋದಿ ಭೇಟಿಗೆ ಪಿಎಂಒನಿಂದ ಆಹ್ವಾನ

Last Updated : Oct 28, 2023, 7:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.