ಜಿಂದ್(ಹರಿಯಾಣ): ರಾಷ್ಟ್ರವ್ಯಾಪಿ ಚಕ್ಕಾ ಜಾಮ್ ಘೋಷಿಸಿದ ಬಳಿಕ ರೈತ ಚಳವಳಿ ಮತ್ತೆ ವೇಗವನ್ನು ಪಡೆಯುತ್ತಿದ್ದು, ರೈತರು ನಿರಂತರವಾಗಿ ದೆಹಲಿ ಕಡೆಗೆ ಪ್ರಯಾಣಿಸುತ್ತಿದ್ದಾರೆ. ರೈತರನ್ನು ಒಟ್ಟುಗೂಡಿಸಲು ಹರಿಯಾಣದಲ್ಲಿ ಮಹಾ ಪಂಚಾಯತ್ ಪ್ರಾರಂಭಿಸಲಾಗಿದೆ.
ರಾಜ್ಯದಲ್ಲಿ ಪ್ರಾರಂಭವಾದ ಮಹಾಪಂಚಾಯತ್ ಮುಂದಿನ ದಿನಗಳಲ್ಲಿ ವಿವಿಧ ಜಿಲ್ಲೆಗಳಲ್ಲಿ ನಡೆಸಲಾಗುತ್ತದೆ. ಜಿಂದ್ನ ಕಾಂಡೇಲಾದಲ್ಲಿ ಮಹಾ ಪಂಚಾಯತ್ ನಡೆಯಲಿದ್ದು, ಇದರಲ್ಲಿ ರೈತ ಮುಖಂಡ ರಾಕೇಶ್ ಟಿಕಾಯತ್ ಕೂಡ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: ದೆಹಲಿ ಹಿಂಸಾಚಾರ ಪ್ರಕರಣ; ದೀಪ್ ಸಿಧು ಮಾಹಿತಿ ನೀಡಿದವರಿಗೆ ಲಕ್ಷ ರೂಪಾಯಿ ಬಹುಮಾನ
ದೆಹಲಿಯ ರೈತರ ಪ್ರತಿಭಟನೆಯ ಸ್ಥಳದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿದ ಕಾರಣವಾಗಿ ರೈತರು ಫೆಬ್ರವರಿ 6 ರಂದು ಎಲ್ಲ ರಾಜ್ಯ, ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡುವ 'ಚಕ್ಕಾ ಜಾಮ್' ಘೋಷಿಸಿದೆ.