ETV Bharat / bharat

ಆಸ್ತಿ ವಿವಾದ: ಕೊಲೆ ಆರೋಪಿಯ ತಲೆ ಮೇಲೆ ಟ್ರ್ಯಾಕ್ಟರ್​​ ಹರಿಸಿ ಕೊಲೆ - tamiladu news

ರಾತ್ರಿ ತಮಿಳುನಾಡು ವಿಧಾನಸಭಾ ಚುನಾವಣಾ ಪ್ರಚಾರದ ಗುಂಗಿನಲ್ಲಿ ಮಾತನಾಡಲು ಕರೆಯಿಸಿಕೊಂಡ ಕೊಲೆಗಾರರ ತಂಡ ವ್ಯಕ್ತಿಯ ತಲೆ ಮೇಲೆ‌ ಟ್ರ್ಯಾಕ್ಟರ್​ ಹರಿಸಿ ಭೀಕರವಾಗಿ ಕೊಂದಿದೆ.

killed a man in tamilnadu
ಕೊಲೆ ಆರೋಪಿಯ ತಲೆ ಮೇಲೆ ಟ್ರಾಕ್ಟರ್​ ಹರಿಸಿ, ಸೈಜುಗಲ್ಲು ಎತ್ತಿಹಾಕಿ ಕೊಲೆ
author img

By

Published : Apr 2, 2021, 2:05 PM IST

ತಳಿ(ತಮಿಳುನಾಡು): ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕೆಲ ವರ್ಷಗಳ ಹಿಂದೆ ನಡೆದ ಕೊಲೆ ಪ್ರಕರಣದ ಸೇಡಿಗಾಗಿ ಯುವಕನೊಬ್ಬನನ್ನು ಕೊಲೆ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಬುಲೆಟ್ ಚೆನ್ನಕೃಷ್ಣ. ಸಂಬಂಧಿಗಳಿಂದಲೇ ಕೊಲೆಯಾದವ. ತಮಿಳು ನಾಡಿನ ಹುಲಿ ಬಂಡೆ ಗ್ರಾಮದಲ್ಲಿ ಈ ಘಟನೆ ಜರುಗಿದೆ. ರಾತ್ರಿ ತಮಿಳುನಾಡು ವಿಧಾನಸಭಾ ಚುನಾವಣಾ ಪ್ರಚಾರದ ಗುಂಗಿನಲ್ಲಿ ಮಾತನಾಡಲು ಕರೆಯಿಸಿಕೊಂಡ ಕೊಲೆಗಾರರ ತಂಡ ಚೆನ್ನಕೃಷ್ಣನ ತಲೆ ಮೇಲೆ‌ ಟ್ರ್ಯಾಕ್ಟರ್​ ಹರಿಸಿ ಗಾಯಗೊಳಿಸಿದ್ದರು. ಆಗಲೂ ಪ್ರಾಣ ಹೋಗದಿದ್ದಾಗ ಕೆಳಗೆ ಬಿದ್ದವನ ಮೇಲೆ ಮೂರು ಸೈಜುಗಲ್ಲುಗಳನ್ನು ತಲೆ ಮೇಲೆ ಹಾಕಿ ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಕೊಲೆಯಾದವ
ಕೊಲೆಯಾದವ

ಕೊಲೆಗೆ ಕಾರಣ:

ಕುಟುಂಬದ ಆಸ್ತಿಗಾಗಿ ಹಿರಿಯನಾದ ಓಬೇಗೌಡ ಎಂಬುವನನ್ನು ಕೆಲ ವರ್ಷಗಳ ಹಿಂದೆ ಬರ್ಬರವಾಗಿ ಕೊಲೆ ಮಾಡಿದ್ದ ಆರೋಪದಲ್ಲಿ ಬುಲೆಟ್ ಚೆನ್ನಕೃಷ್ಣ ಜೈಲು ಪಾಲಾಗಿದ್ದ. ಅನಂತರ ಜಾಮೀನು ಪಡೆದು ಆನೇಕಲ್ ಆದಿಗೊಂಡನಹಳ್ಳಿಯಲ್ಲಿ ವಾಸವಿದ್ದ. ಕೋರ್ಟಿನಲ್ಲಿ ಕೊಲೆ ಪ್ರಕರಣ ವಿಚಾರಣಾ ಹಂತದಲ್ಲಿತ್ತು. ಈ ಹಿನ್ನೆಲೆ ಓಬೇಗೌಡನ ಮಗ ಇಪ್ಪತ್ತೆರೆಡು ವರ್ಷದ ಮುರುಗೇಶ್ ಮತ್ತು ಓಬೇಗೌಡನ ತಮ್ಮ ನಲವತ್ತು ವರ್ಷದ ಪಾಪಯ್ಯ ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ.

ಇದೀಗ ಪ್ರಕರಣ ತಮಿಳುನಾಡಿನ ತಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.