ETV Bharat / bharat

ಬಿಹಾರದಲ್ಲಿ ಜ.5 ರಂದು 'ಮಿನಿ ಭಾರತ್ ಜೋಡೋ ಯಾತ್ರೆ' ಆರಂಭಿಸಲಿರುವ ಖರ್ಗೆ

ಬಿಹಾರದಲ್ಲಿ ಕಾಂಗ್ರೆಸ್‌ ಪಕ್ಷವು ತಾನು ಕಳೆದುಕೊಂಡ ನೆಲೆಯನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದೆ.

author img

By

Published : Dec 28, 2022, 8:23 PM IST

AICC President Mallikarjuna Kharge
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ನವದೆಹಲಿ : ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಜನವರಿ 5 ರಂದು ಬಿಹಾರದ ಬಂಕಾದಲ್ಲಿ ಮಿನಿ ಭಾರತ್‌ ಜೋಡೋ ಯಾತ್ರೆಗೆ ಚಾಲನೆ ನೀಡುವರು. 'ಅಂದು ನಾವು ದೊಡ್ಡ ರ್ಯಾಲಿ ಆಯೋಜಿಸುತ್ತಿದ್ದು ದೇಶಾದ್ಯಂತ ಸಂದೇಶ ನೀಡಲಿದ್ದೇವೆ' ಎಂದು ಬಿಹಾರ ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಾ.ಅಶೋಕ್ ಕುಮಾರ್ ಹೇಳಿದ್ದಾರೆ.

ಬಂಕಾ ನಂತರ 17 ಜಿಲ್ಲೆಗಳ ಮೂಲಕ 1,200 ಕಿ.ಮೀ ದೂರ ಈ ಯಾತ್ರೆ ಸಾಗಲಿದ್ದು, ಪಾಟ್ನಾ ಮತ್ತು ಬೋಧಗಯಾದಲ್ಲಿ ಎರಡು ದೊಡ್ಡ ರ್ಯಾಲಿಗಳನ್ನು ಆಯೋಜಿಸಲಾಗಿದೆ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಯಶಸ್ಸು ಅವರಿಗೆ ಹೊಸ ಇಮೇಜ್ ತಂದುಕೊಟ್ಟಿದೆ. ಹೊಸ ಯಾತ್ರೆಯು ಬಿಹಾರದ ಜನಸಾಮಾನ್ಯರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಅವರ ಕಷ್ಟಗಳನ್ನು ಆಲಿಸಲು ನಮಗೆ ಅವಕಾಶ ನೀಡುತ್ತದೆ ಎಂದು ಅವರು ತಿಳಿಸಿದರು.

ಬಿಹಾರ ಯಾತ್ರೆಯು ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಷ್ಟ್ರವ್ಯಾಪಿ ಭಾರತ್ ಜೋಡೋ ಯಾತ್ರೆಯ ಸ್ಥಳೀಯ ಆವೃತ್ತಿಯಾಗಿದೆ. ರಾಜ್ಯಸಭಾ ಸದಸ್ಯ ಅಖಿಲೇಶ್ ಪ್ರಸಾದ್ ಸಿಂಗ್ ಅವರನ್ನು ಬಿಹಾರ ಕಾಂಗ್ರೆಸ್​ ಘಟಕದ ಮುಖ್ಯಸ್ಥರನ್ನಾಗಿ ಖರ್ಗೆ ಹೆಸರಿಸಿದ ಕೆಲವೇ ದಿನಗಳಲ್ಲಿ ಸಾಂಸ್ಥಿಕ ಪುನರುಜ್ಜೀವನವನ್ನು ಕಾರ್ಯಗತಗೊಳಿಸಲಾಗುತ್ತಿದೆ. ಪ್ರಸ್ತುತ ರಾಜ್ಯ, ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ಸಮಿತಿಗಳ ವಿಷಯದಲ್ಲಿ ಪಕ್ಷವು ರಾಜ್ಯಾದ್ಯಂತ ಕಡಿಮೆ ಸಾಂಸ್ಥಿಕ ಅಸ್ತಿತ್ವ ಹೊಂದಿದೆ.

ಇದನ್ನೂ ಓದಿ : ಸಾಂಸ್ಥಿಕ ಸುಧಾರಣೆ ಪರ ಬ್ಯಾಟ್ ಬೀಸಿದ ಖರ್ಗೆ: ಭಾರತ ಜೋಡೋದಿಂದ ಬಿಜೆಪಿಗೆ ನಡುಕ ಎಂದು ಟಾಂಗ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.