ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಮಾನ್ಸೂನ್ ಅಧಿವೇಶನಕ್ಕೆ ಸಂಬಂಧಿಸಿದಂತೆ ಕಾರ್ಯತಂತ್ರ ರೂಪಿಸುವ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕಚೇರಿಯಲ್ಲಿ ಪ್ರತಿಪಕ್ಷದ ರಾಜಕೀಯ ನಾಯಕರು ಚರ್ಚೆ ನಡೆಸಿದರು.
ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ನಾಯಕರು ಸೋಮವಾರ ಸಂಸತ್ತಿನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ಆನಂದ್ ಶರ್ಮಾ (ಕಾಂಗ್ರೆಸ್), ರಾಮ್ ಗೋಪಾಲ್ ಯಾದವ್ (ಎಸ್‌ಪಿ), ಮನೋಜ್ ಜಾ (ಆರ್‌ಜೆಡಿ), ತಿರುಚಿ ಶಿವ (ಡಿಎಂಕೆ), ಬಿನೊಯ್ ವಿಶ್ವಂ (ಸಿಪಿಐ), ಸುಶೀಲ್ ಕುಮಾರ್ ಗುಪ್ತಾ (ಎಎಪಿ), ಇ ಕರೀಮ್ (ಸಿಪಿಐ-ಎಂ) ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ಮಾನ್ಸೂನ್ ಅಧಿವೇಶನವು 20 ಜುಲೈ 2021 ರಂದು ಪ್ರಾರಂಭವಾಗಿದ್ದು, ಆಗಸ್ಟ್ 19 ರವರೆಗೆ ಮುಂದುವರಿಯಲಿದೆ.