ETV Bharat / bharat

ದೇಶದಲ್ಲಿ 'ಕೈ' ಬಲವರ್ಧನೆಗೆ ಖರ್ಗೆ ರಣತಂತ್ರ: ಪಕ್ಷ, ಪ್ರತಿಪಕ್ಷಗಳ ಒಗ್ಗಟ್ಟಿಗೆ ಏಕಕಾಲದಲ್ಲಿ ರೂಪುರೇಷೆ - ಸೋನಿಯಾ ಗಾಂಧಿ

ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಕಾರ್ಯ ವೈಖರಿ ಮತ್ತು ಅವರ ಕಾರ್ಯತಂತ್ರ ಬಗ್ಗೆ 'ಈಟಿವಿ ಭಾರತ್​'ನ ಅಮಿತ್ ಅಗ್ನಿಹೋತ್ರಿ ವಿಶ್ಲೇಷಣೆ ಹೀಗಿದೆ...

kharge-burning-midnight-oil-to-push-congress-prospects-in-polls-opposition-unity
ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಕಾರ್ಯ ವೈಖರಿ
author img

By

Published : Apr 14, 2023, 5:47 PM IST

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಪುನಶ್ಚೇತನಕ್ಕೆ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ರಾಜ್ಯ ಘಟಕಗಳಲ್ಲಿನ ಆಂತರಿಕ ಕಲಹಗಳ ಶಮನದೊಂದಿಗೆ ಹೊಸ ನೇಮಕಾತಿಗಳು ಮತ್ತು ಚುನಾವಣಾ ಸಿದ್ಧತೆಗಳ ಪರಿಶೀಲನೆ ಮತ್ತು ಅಭ್ಯರ್ಥಿಗಳನ್ನು ಅನುಮೋದಿಸುವುದು ಮತ್ತು 2024ರ ಲೋಕಸಭೆ ಚುನಾವಣಾ ಕದನಕ್ಕೆ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಏಕಕಾಲದಲ್ಲಿ ತಂತ್ರ ರೂಪಿಸುತ್ತಿದ್ದಾರೆ.

ಕಳೆದ ವರ್ಷ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷತೆ ರೇಸ್‌ನಿಂದ ಹಿಂದೆ ಸರಿದಾಗ ಅಕ್ಟೋಬರ್‌ನಲ್ಲಿ ಖರ್ಗೆ ಹೊಸ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. 2024ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಪಕ್ಷವನ್ನು ಮುನ್ನಡೆಸಲು ಪಕ್ಷಕ್ಕೆ ಕಿರಿಯ ಮತ್ತು ಹೆಚ್ಚು ಶಕ್ತಿಯುತ ವ್ಯಕ್ತಿಯ ಅಗತ್ಯವಿರುವ ಸಮಯದಲ್ಲಿ 80 ವರ್ಷ ವಯಸ್ಸಿನ ಖರ್ಗೆಯವರನ್ನು ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ಪಕ್ಷವು ಸಾಕಷ್ಟು ಟೀಕೆಗಳನ್ನೂ ಎದುರಿಸಿತ್ತು.

ಆದರೆ, ಪಕ್ಷದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ನಂತರ ತಮ್ಮ ಜವಾಬ್ದಾರಿಯನ್ನು ನಿಭಾಯಿಸಲು ಖರ್ಗೆ ಸಾಕಷ್ಟು ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಪಕ್ಷ ಸಂಘಟನೆಯನ್ನು ನಿರ್ವಹಿಸುವ ಅನುಭವಿ ಮತ್ತು ಹಳೆಯ ಪಕ್ಷಕ್ಕೆ ಸೈದ್ಧಾಂತಿಕ ದಿಕ್ಸೂಚಿಯನ್ನು ಒದಗಿಸುವ ಮೂಲಕ ಪರಿಪೂರ್ಣ ವ್ಯವಸ್ಥೆಯನ್ನು ಕಟ್ಟಲು ಶ್ರಮಿಸುತ್ತಿದ್ದಾರೆ ಎನ್ನುತ್ತಾರೆ ಪಕ್ಷದ ಪ್ರಮುಖರು.

ಬೆಳಗ್ಗೆ 9ರಿಂದ ರಾತ್ರಿ 2ರವರೆಗೆ ಕೆಲಸ: "ಖರ್ಗೆ ಅವರು ಬಹು ಕಾರ್ಯಗಳನ್ನು ಏಕಕಾಲಕ್ಕೆ ನಿರ್ವಹಿಸುತ್ತಿದ್ದಾರೆ. ಪಕ್ಷದ ಪ್ರಚಾರಕ್ಕಾಗಿ ದೇಶಾದ್ಯಂತ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಅವರು ತುಂಬಾ ಕ್ರಿಯಾಶೀಲರಾಗಿದ್ದು, ಆ ಶಕ್ತಿಯನ್ನು ಪಕ್ಷಕ್ಕೆ ನೀಡಲು ಪ್ರಯತ್ನಿಸುತ್ತಿದ್ದಾರೆ. ಪಕ್ಷಕ್ಕೆ ಖರ್ಗೆ ಅವರಂತಹ ಅಧ್ಯಕ್ಷರು ಬೇಕಾಗಿದ್ದರು'' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮನೀಶ್ ಚತ್ರತ್ 'ಈಟಿವಿ ಭಾರತ್‌'ಗೆ ತಿಳಿಸಿದರು. ''ಜೊತೆಗೆ ಕಾಂಗ್ರೆಸ್‌ನಲ್ಲಿ ಗಾಂಧಿ ಕುಟುಂಬದ ಪಾತ್ರ ಪ್ರಮುಖವಾಗಿದೆ. ರಾಹುಲ್ ಗಾಂಧಿ ನಮ್ಮ ರಾಷ್ಟ್ರೀಯ ನಾಯಕರಾಗಿದ್ದು, ಸೋನಿಯಾ ಗಾಂಧಿ ಅವರ ಸಲಹೆ ಮೌಲ್ಯಯುತವಾಗಿದೆ. ಗಾಂಧಿ-ಖರ್ಗೆ ಜೋಡಿ ಪಕ್ಷಕ್ಕಾಗಿ ಉತ್ತಮವಾಗಿ ಕೆಲಸ ಮಾಡುತ್ತಿದೆ'' ಎಂದು ಹೇಳಿದರು.

ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಗುರುದೀಪ್ ಸಿಂಗ್ ಸಪ್ಪಲ್ ಮಾತನಾಡಿ, ''ಹಗಲು ರಾತ್ರಿ ಖರ್ಗೆ ಪಕ್ಷದ ಕಾರ್ಯಗಳಲ್ಲಿ ತೊಡಿಸಿಕೊಳ್ಳುತ್ತಿದ್ದಾರೆ. ಗುರುವಾರ ಬೆಳಗ್ಗೆ 9ರಿಂದ ತಡರಾತ್ರಿ 2ರವರೆಗೆ ಸರಣಿ ಸಭೆಗಳಲ್ಲಿ ಅವರು ಭಾಗವಹಿಸಿದ್ದರು. ಆದರೆ, ಯಾವುದೇ ಒತ್ತಡದ ಲಕ್ಷಣಗಳು ಖರ್ಗೆ ಅವರಲ್ಲಿ ಕಾಣಲಿಲ್ಲ" ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ಖರ್ಗೆ ಯುಗಾರಂಭ: ಪಕ್ಷದ​ ಪುನಶ್ಚೇತನವೇ ಸವಾಲು

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ಬಿಕ್ಕಟ್ಟಿನ ಬಗ್ಗೆ ಎಐಸಿಸಿ ಉಸ್ತುವಾರಿ ಎಸ್​.ಎಸ್.ರಾಂಧವ ಗುರುವಾರ ಖರ್ಗೆ ಅವರಿಗೆ ವಿವರಿಸಿದರು. ಇದೇ ವೇಳೆ ಕರ್ನಾಟಕದ ಚುನಾವಣಾ ಸಿದ್ಧತೆಗಳನ್ನು ಪರಿಶೀಲಿಸಿದರು. ಬಾಕಿ ಉಳಿದಿರುವ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲು ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜೊತೆಗೆ ತೆಲಂಗಾಣ ಮತ್ತು ಕೋಲಾರಕ್ಕೆ ತಮ್ಮ ಪ್ರವಾಸ ಕುರಿತ ಪೂರ್ವ ಸಿದ್ಧತಾ ಪರಿಶೀಲನೆ ನಡೆಸಿದರು. 2024ರ ಲೋಕಸಭೆ ಚುನಾವಣೆಗೆ ವಿರೋಧ ಪಕ್ಷಗಳ ಒಗ್ಗಟ್ಟಿನ ನಿಟ್ಟಿನಲ್ಲಿ ಎನ್​ಸಿಪಿ ನಾಯಕ ಶರದ್ ಪವಾರ್ ಅವರೊಂದಿಗೆ ಖರ್ಗೆ ಮಾತುಕತೆ ನಡೆಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಜಂಟಿ ಕಾರ್ಯತಂತ್ರ: ಮುಂಬರುವ ಲೋಕಸಭೆ ಚುನಾವಣೆಗೆ ಪ್ರತಿಪಕ್ಷಗಳ ಒಗ್ಗಟ್ಟು ಸಾಧಿಸುವತ್ತ ಕಾಂಗ್ರೆಸ್​ ಪ್ರಮುಖವಾದ ದೃಷ್ಟಿ ನೆಟ್ಟಿದೆ. ಈ ಒಗ್ಗಟ್ಟಿನ ನೀಲನಕ್ಷೆ ಕುರಿತು ಚರ್ಚಿಸಲು ನಿರಂತರ ಮಾತುಕತೆಗಳನ್ನು ನಡೆಸಲಾಗುತ್ತದೆ. ರಾಹುಲ್ ಗಾಂಧಿ ಜೊತೆಗೂಡಿ ಜೆಡಿಯು ನಾಯಕರಾದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪಮುಖ್ಯಮಂತ್ರಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರೊಂದಿಗೆ ಖರ್ಗೆ ಚರ್ಚಿಸಿದ್ದಾರೆ. ಇದಾದ ಒಂದು ದಿನದ ನಂತರ ಶರದ್ ಪವಾರ್ ಅವರೊಂದಿಗೆ ಸಭೆ ನಡೆಸಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಅದಾನಿ-ಹಿಂಡೆನ್‌ಬರ್ಗ್ ವಿಷಯದ ಬಗ್ಗೆ ಜಂಟಿ ಸಂಸದೀಯ ಸಮಿತಿ ತನಿಖೆಗೆ ಒತ್ತಾಯಿಸಿ ಖರ್ಗೆ ಅವರು 20 ಪಕ್ಷಗಳ ನೇತೃತ್ವ ವಹಿಸಿ ಒತ್ತಾಯಿಸಿದ್ದರು. ಇದರ ನಡುವೆ ಪವಾರ್ ಅವರು "ಅದಾನಿಯನ್ನು ಟಾರ್ಗೆಟ್ ಮಾಡಲಾಗುತ್ತಿದೆ" ಎಂದು ಹೇಳುವ ಮೂಲಕ ಕಾಂಗ್ರೆಸ್​ ಬೆಚ್ಚಿ ಬೀಳಿಸುವಂತೆ ಮಾಡಿದ್ದರು. ಇಂತಹ ಸಂದರ್ಭದಲ್ಲಿ ಪವಾರ್ ಅವರೊಂದಿಗಿನ ಸಭೆಯಲ್ಲಿ ರಾಹುಲ್ ಉಪಸ್ಥಿತಿಯು ಪ್ರಮುಖವಾಗಿದ್ದು, ಪತ್ರಿಪಕ್ಷಗಳಿಂದ ಪವಾರ್ ದೂರ ಸರಿಯದಂತೆ ನೋಡಿಕೊಳ್ಳಲಾಗುತ್ತಿದೆ ಎನ್ನುತ್ತವೆ ಪಕ್ಷದ ಮೂಲಗಳು.

ಸರಣಿ ಸಭೆಗಳ ನಡುವೆ ಖರ್ಗೆ ಶುಕ್ರವಾರ ತೆಲಂಗಾಣದ ಮಂಚೇರಿಯಲ್‌ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿಂದ ಶನಿವಾರ ಬೆಂಗಳೂರಿಗೆ ತಲುಪುತ್ತಾರೆ. ಭಾನುವಾರ ಕೋಲಾರದಲ್ಲಿ ರಾಹುಲ್ ಗಾಂಧಿ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಖರ್ಗೆಯವರಲ್ಲಿ ಪಕ್ಷಕ್ಕೆ ಒಬ್ಬ ನಾಯಕ ಸಿಕ್ಕಿದ್ದು, ಅವರಿಗೆ ಸಂಘಟನೆ ಮತ್ತು ಚುನಾವಣೆಯನ್ನು ಹೇಗೆ ಎದುರಿಸಬೇಕು ಎಂಬುದು ಗೊತ್ತಿದೆ. ಅದಲ್ಲದೇ, ಅವರು ಪಕ್ಷದ ಸಿದ್ಧಾಂತವನ್ನು ಚೆನ್ನಾಗಿ ಹೇಳಬಲ್ಲರು. ಇದೇ ಕಾರಣಕ್ಕೆ ಗಾಂಧಿ ಕುಟುಂಬವು ಖರ್ಗೆ ಅವರ ಮೊರೆ ಹೋಗುವಂತೆ ಮಾಡಿದೆ ಎಂದು ಪಕ್ಷದ ಒಳಗಿನವರು ಹೇಳುತ್ತಾರೆ.

ಇದನ್ನೂ ಓದಿ: ಎಐಸಿಸಿ ಅಧ್ಯಕ್ಷರಾಗಿ ಖರ್ಗೆ ಪ್ರಭಾವ.. ರಾಜ್ಯ ವಿಧಾನಸಭೆ ಚುನಾವಣೆಗೆ ಸಹಕಾರಿಯೇ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.