ಖಂಡ್ವಾ (ಮಧ್ಯಪ್ರದೇಶ): ಕೊರೊನಾ ಸೋಂಕು ತಗುಲಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಧ್ಯಪ್ರದೇಶದ ಖಂಡ್ವಾ ಕ್ಷೇತ್ರದ ಬಿಜೆಪಿ ಸಂಸದ ನಂದಕುಮಾರ್ ಸಿಂಗ್ ಚೌಹಾಣ್ ಇಂದು ಕೊನೆಯುಸಿರೆಳೆದಿದ್ದಾರೆ.
ಜನವರಿ 11 ರಂದು ನಂದಕುಮಾರ್ ಅವರ ಕೋವಿಡ್ ವರದಿ ಪಾಸಿಟಿವ್ ಬಂದಿತ್ತು. ಭೋಪಾಲ್‌ನ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ದೆಹಲಿಯ ಏಮ್ಸ್ಗೆ ಶಿಫ್ಟ್ ಮಾಡಲಾಗಿತ್ತು. ಆದರೆ ನಂದಕುಮಾರ್ ವಿಧಿವಶರಾಗಿರುವುದಾಗಿ ಅವರ ಪುತ್ರ ಹರ್ಷವರ್ಧನ್ ಖಚಿತಪಡಿಸಿದ್ದಾರೆ.
ಇದನ್ನೂ ಓದಿ: ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯಿಂದ ರೈತನ ಗುಂಡಿಕ್ಕಿ ಹತ್ಯೆ
2014 ಹಾಗೂ 2019ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಖಂಡ್ವಾ ಕ್ಷೇತ್ರದಿಂದ ಸ್ಫರ್ಧಿಸಿ ಎರಡೂ ಬಾರಿ ಜಯಭೇರಿ ಬಾರಿಸಿದ್ದರು.
ಸಿಎಂ, ಪಿಎಂ ಸಂತಾಪ
ಸಂಸದರ ಅಗಲಿಕೆಗೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಜನಪ್ರೀಯ ನಾಯಕ ನಮ್ಮನ್ನು ಬಿಟ್ಟು ಹೋಗಿರುವುದು ದುಃಖ ತಂದಿದೆ. ಪಕ್ಷ ಒಬ್ಬ ಕಾರ್ಯಕರ್ತನನ್ನು ಕಳೆದುಕೊಂಡಿದೆ, ಸಂಘಟಕರಾಗಿದ್ದ ಅಂತಹ ನಾಯಕ ಇನ್ನಿಲ್ಲವಾಗಿದೆ ಎಂದು ಶಿವರಾಜ್ ಸಿಂಗ್ ಚೌಹಾಣ್ ದುಃಖ ವ್ಯಕ್ತಪಡಿಸಿದ್ದಾರೆ.
-
Saddened by the demise of Lok Sabha MP from Khandwa Shri Nandkumar Singh Chauhan Ji. He will be remembered for his contributions to Parliamentary proceedings, organisational skills and efforts to strengthen the BJP across Madhya Pradesh. Condolences to his family. Om Shanti.
— Narendra Modi (@narendramodi) March 2, 2021 " class="align-text-top noRightClick twitterSection" data="
">Saddened by the demise of Lok Sabha MP from Khandwa Shri Nandkumar Singh Chauhan Ji. He will be remembered for his contributions to Parliamentary proceedings, organisational skills and efforts to strengthen the BJP across Madhya Pradesh. Condolences to his family. Om Shanti.
— Narendra Modi (@narendramodi) March 2, 2021Saddened by the demise of Lok Sabha MP from Khandwa Shri Nandkumar Singh Chauhan Ji. He will be remembered for his contributions to Parliamentary proceedings, organisational skills and efforts to strengthen the BJP across Madhya Pradesh. Condolences to his family. Om Shanti.
— Narendra Modi (@narendramodi) March 2, 2021
ಮಧ್ಯಪ್ರದೇಶದಾದ್ಯಂತ ಬಿಜೆಪಿಯನ್ನು ಬಲಪಡಿಸುವಲ್ಲಿ ನಂದಕುಮಾರ್ರ ಕೊಡುಗೆಗಾಗಿ ಎಂದಿಗೂ ಅವರನ್ನು ಸ್ಮರಿಸಲಾಗುವುದು. ಅವರ ಕುಟುಂಬಕ್ಕೆ ನನ್ನ ಸಾಂತ್ವನಗಳು ಎಂದು ಪಿಎಂ ಮೋದಿ ಟ್ವೀಟ್ ಮಾಡಿದ್ದಾರೆ.