ETV Bharat / bharat

ಡಿ. 31ರಂದು ಮುಂಬೈ ಮೇಲೆ ಉಗ್ರರ ದಾಳಿ ಮಾಹಿತಿ.. ಎಲ್ಲ ಸಿಬ್ಬಂದಿ ರಜೆ ರದ್ದುಗೊಳಿಸಿದ ಪೊಲೀಸ್​​ ಇಲಾಖೆ

author img

By

Published : Dec 30, 2021, 9:00 PM IST

Mumbai Police On High Alert: ಹೊಸ ವರ್ಷದ ಸಂಭ್ರಮಾಚರಣೆ ಖುಷಿಯಲ್ಲಿರುವ ಮುಂಬೈನಲ್ಲಿ ಉಗ್ರರು ದಾಳಿ ನಡೆಸುವ ಸಾಧ್ಯತೆಯ ಮಾಹಿತಿ ಲಭ್ಯವಾಗಿರುವ ಕಾರಣ, ಪೊಲೀಸ್​ ಸಿಬ್ಬಂದಿ ರಜೆ ರದ್ದುಗೊಳಿಸಲಾಗಿದ್ದು, ಸೇವೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

Mumbai Police cancels leaves
Mumbai Police cancels leaves

ಮುಂಬೈ: ಖಲಿಸ್ತಾನಿ ಉಗ್ರರು ನಗರದಲ್ಲಿ ಭಯೋತ್ಪಾದಕ ಕೃತ್ಯ ನಡೆಸಬಹುದೆಂದು ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ ಎಲ್ಲ ಸಿಬ್ಬಂದಿ ರಜೆ ರದ್ದುಗೊಳಿಸಿದೆ. ನಾಳೆ ಎಲ್ಲರೂ ಕರ್ತವ್ಯಕ್ಕೆ ಹಾಜರಾಗುವಂತೆ ಮಹತ್ವದ ಆದೇಶ ಸಹ ಹೊರಡಿಸಲಾಗಿದೆ.

ಹೆಚ್ಚಿನ ಭದ್ರತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಡಿಸೆಂಬರ್ 31ರಂದು ಎಲ್ಲ ಪೊಲೀಸ್​ ಸಿಬ್ಬಂದಿ ರಜೆ ಹಾಗೂ ವಾರದ ರಜೆ ರದ್ದುಗೊಳಿಸಲಾಗಿದೆ. ಡಿಸೆಂಬರ್​​ 31ರಂದು ಮುಂಬೈನ ಕೆಲವೊಂದು ಪ್ರದೇಶಗಳಲ್ಲಿ ಹೆಚ್ಚಿನ ಜನದಟ್ಟಣೆ ಕಂಡು ಬರಲಿದ್ದು, ಈ ಪ್ರದೇಶಗಳ ಮೇಲೆ ಖಲಿಸ್ತಾನಿ ಉಗ್ರರು ದಾಳಿ ನಡೆಸಬಹುದೆಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿರಿ: ಕುಡಿದ ಮತ್ತಿನಲ್ಲಿ ಜಗಳ.. ಸ್ನೇಹಿತನ ಮರ್ಮಾಂಗವನ್ನೇ ಕತ್ತರಿಸಿದ ಯುವಕ!

ಕೋವಿಡ್​ ಕಾರಣದಿಂದಾಗಿ ಈಗಾಗಲೇ ಮುಂಬೈನಲ್ಲಿ ಸೆಕ್ಷನ್​ 144 ಜಾರಿಯಲ್ಲಿದ್ದು, ರೆಸ್ಟೋರೆಂಟ್​, ಪಬ್​, ಬಾರ್​, ಹೋಟೆಲ್​ಗಳ ಮೇಲೆ ನಿರ್ಬಂಧ ವಿಧಿಸಿದೆ.

ಪ್ರಮುಖವಾಗಿ ಹೆಚ್ಚಿನ ಭದ್ರತೆ ದೃಷ್ಟಿಯಿಂದ ಮುಂಬೈನ ಪ್ರಮುಖ ಸ್ಥಳಗಳಾದ ದಾದರ್​, ಬಾಂದ್ರಾ ಚರ್ಚ್​ಗೇಟ್​​, ಕುರ್ಲಾ, ಮುಂಬೈ ಗೇಟ್​, ತಾಜ್​ ಹೋಟೆಲ್​ ಸೇರಿದಂತೆ ಪ್ರಮುಖ ರೈಲ್ವೆ ನಿಲ್ದಾಣ ಹಾಗೂ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಪೊಲೀಸ್ ಪಡೆ ನಿಯೋಜನೆ ಮಾಡಲು ನಿರ್ಧರಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.