ಚೆನ್ನೈ: ಫಾಸ್ಟ್ಫುಡ್ನ ದೈತ್ಯ ಕಂಪನಿ ಕೆಎಫ್‌ಸಿ ಇಂಡಿಯಾ ನಗರದಲ್ಲಿನ ಅತ್ಯಂತ ಸುಸ್ಥಿರ ರೆಸ್ಟೋರೆಂಟ್ ಎಂದು ಹೇಳಿಕೊಳ್ಳುವ ಕೆಎಫ್‌ಸಿಕಾನ್ಸ್‌ಶಿಯಸ್ ಅನ್ನು ಅನಾವರಣಗೊಳಿಸಿದೆ. ಪರಿಸರ ಸ್ನೇಹಿ ರೆಸ್ಟೋರೆಂಟ್ ಇದಾಗಿದೆ. ಅಷ್ಟೇ ಅಲ್ಲ, ಕೆಎಫ್‌ಸಿ ಈ ವರ್ಷ ದೇಶಾದ್ಯಂತ ಇನ್ನೂ 20 ಮಳಿಗೆಗಳನ್ನು ತೆರೆಯುವ ಯೋಜನೆ ಹೊಂದಿದೆ.
ದೇಶದಲ್ಲಿ ಕ್ವಿಕ್ ಸರ್ವಿಸ್ ರೆಸ್ಟೋರೆಂಟ್ ಉದ್ಯಮಕ್ಕೆ ಮೊದಲನೆ ಸ್ಥಾನ ಎಂದರೆ ಅದು ಕೆಎಫ್ಸಿಗೆ. ಈಗ ಈ ರೆಸ್ಟೋರೆಂಟ್ ಚೆನ್ನೈನ ತಿಯಾಗರಾಯನಗರ (ಟಿ. ನಗರ)ದಲ್ಲಿದೆ. ಕೆಎಫ್‌ಸಿಕಾನ್ಸ್‌ಶಿಯಸ್ ನೊಂದಿಗಿನ 2030ರ ವೇಳೆಗೆ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಶೇ.46 ರಷ್ಟು ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ.
ಈ ರೆಸ್ಟೋರೆಂಟ್ ವಿನ್ಯಾಸವನ್ನು ಪರಿಸರ ಸ್ನೇಹಿ ವಸ್ತುಗಳ ಬಳಕೆ ಮತ್ತು ತ್ಯಾಜ್ಯ ಮರುಪಬಳಕೆ ಮಾಡಿ ನಿರ್ಮಾಣ ಮಾಡಲಾಗಿದೆ. 2022ರ ವೇಳೆಗೆ ಇಂತಹ ಇನ್ನೂ 20 ರೆಸ್ಟೋರೆಂಟ್‌ಗಳನ್ನು ಪ್ರಾರಂಭಿಸುವ ಗುರಿ ಹೊಂದಲಾಗಿದೆ. ಗ್ರಾಹಕರು ತಮ್ಮ ನೆಚ್ಚಿನ ಕೆಎಫ್‌ಸಿ ಭಕ್ಷ್ಯಗಳನ್ನು ಹೆಚ್ಚು ಜವಾಬ್ದಾರಿಯುತ ರೀತಿ ಆನಂದಿಸಲು ಪ್ರಯತ್ನಿಸುತ್ತಿದೆ ಎಂದು ಸಂಸ್ಥೆ ತಿಳಿಸಿದೆ.
ಕೆಎಫ್‌ಸಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸಮೀರ್ ಮೆನನ್ ಪ್ರಕಾರ, ನಾವು ಹೆಚ್ಚಿನ ಉದ್ದೇಶದೊಂದಿಗೆ ಭವಿಷ್ಯವನ್ನು ಪೋಷಿಸಲು ಉತ್ಸುಕರಾಗಿದ್ದೇವೆ. ನಮ್ಮ ಗ್ರಾಹಕರು, ಸಮುದಾಯಗಳು ಮತ್ತು ಪರಿಸರಕ್ಕೆ ಉತ್ತಮ ಭವಿಷ್ಯವನ್ನು ಸೃಷ್ಟಿಸಲು ಈ ಮೂಲಕ ನಾವು ಸಿದ್ಧ ಎಂದಿದ್ದಾರೆ.
ಪರಿಸರ ಸ್ನೇಹಿ ಹೇಗೆ? : ರೆಸ್ಟೋರೆಂಟ್‌ನಲ್ಲಿರುವ ಸೌರ ಫಲಕಗಳು ಇಂಧನ ಉಳಿಸಲು ಸಹಾಯ ಮಾಡುತ್ತದೆ. ಪ್ರತಿ ವರ್ಷ ಸುಮಾರು 18,000 ಯೂನಿಟ್‌ಗಳಷ್ಟು ವಿದ್ಯುತ್ ಅನ್ನು ಈ ಮೂಲಕ ಉಳಿಸಲಾಗುತ್ತದೆ. ಹಾಗೆ ಆರ್‌ಒ ವ್ಯವಸ್ಥೆಯಿಂದ ಸಂಗ್ರಹಿಸಲಾದ ಶೇ.100ರಷ್ಟು ನೀರನ್ನು ವಾಶ್‌ರೂಮ್‌ಗಳಲ್ಲಿ ಫ್ಲಶ್ ಮಾಡಲು ಬಳಸಲಾಗುತ್ತದೆ.
ನೈಸರ್ಗಿಕ ಮತ್ತು ಎಲ್ಇಡಿ ದೀಪಗಳ ಬಳಕೆಯನ್ನು ಮಾಡಲಾಗುತ್ತದೆ. ಆದರೆ, ಅಡುಗೆಮನೆಯಲ್ಲಿನ ಇಂಧನ ನಿರ್ವಹಣಾ ವ್ಯವಸ್ಥೆಗೆ ಆಪ್ಟಿಮೈಸ್ಡ್ ಬಳಕೆಯನ್ನು ಮಾಡಲಾಗುತ್ತಿದೆ ಹಾಗೂ ಗೋಡೆಗೆ ಸ್ಥಳೀಯ ಮಣ್ಣಿನ ಟೈಲ್ಸ್‌ಗಳಂತಹ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ವಿವಾದಿತ ಹೇಳಿಕೆ: ಬಿಜೆಪಿಯಿಂದ ನೂಪುರ್ ಶರ್ಮಾ, ನವೀನ್ ಜಿಂದಾಲ್ ಅಮಾನತು