ಪಾಟ್ನಾ: ಎನ್ಡಿಎ ಮೈತ್ರಿಕೂಟದ ಅತಿ ಪ್ರಮುಖ ಪಕ್ಷವಾದ ಜೆಡಿಯು ನಡುವೆ ಭಿನ್ನಾಭಿಪ್ರಾಯಕ್ಕೆ ವೇದಿಕೆ ಸಜ್ಜಾಗಿದೆ ಎಂದು ಗೋಚರಿಸುತ್ತಿದೆ. ಬಿಹಾರದಲ್ಲಿ ಲವ್ ಜಿಹಾದ್ ಕಾನೂನಿಗೆ ಜೆಡಿಯು ಪಕ್ಷ ಆಕ್ಷೇಪ ವ್ಯಕ್ತಪಡಿಸಿದೆ.
ಈ ಕುರಿತು ಮಾತನಾಡಿದ ಜೆಡಿಯು ಪಕ್ಷದ ವಕ್ತಾರ ಕೆ.ಸಿ.ತ್ಯಾಗಿ ತಮ್ಮ ಪಕ್ಷ ಲವ್ ಜಿಹಾದ್ ಕಾನೂನು ಎಂದು ಕರೆಯಲ್ಪಡುವ ವಿವಾದಾತ್ಮಕ ಮತಾಂತರ ವಿರೋಧಿ ಕಾಯ್ದೆಗೆ ನಮ್ಮ ಸಹಮತ ಇಲ್ಲ ಎಂದು ಹೇಳಿದ್ದಾರೆ.
ಓದಿ: ಗುಜರಾತ್ ಎಟಿಎಸ್ ವಿಶೇಷ ಕಾರ್ಯಾಚರಣೆ: ದಾವೂದ್ ಇಬ್ರಾಹಿಂ ಸಹಚರನ ಬಂಧನ
ಅರುಣಾಚಲ ಪ್ರದೇಶದ ಆರು ಜೆಡಿಯು ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಇದು ಉತ್ತಮ ಮೈತ್ರಿ ರಾಜಕಾರಣದ ಸಂಕೇತವಲ್ಲ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.