ಕೇರಳ (ತಿರುವನಂತಪುರಂ): ಓಣಂನ ಉತ್ರಾಂ ದಿನದಂದು (ತಿರುವೋಣಂ ಮುಂಚಿನ ದಿನ, ವಿಶೇಷ ದಿನ) ಮದ್ಯ ಮಾರಾಟದಲ್ಲಿ ಕೇರಳ ದಾಖಲೆಯ ಮಾರಾಟ ಕಂಡಿದೆ. ಬಿವರೇಜಸ್ ಕಾರ್ಪೊರೇಷನ್ (ಬೆವ್ಕೊ) ಮತ್ತು ಕನ್ಸ್ಯೂಮರ್‌ಫೆಡ್‌ನ ಔಟ್‌ಲೆಟ್‌ಗಳ ಮೂಲಕ 117 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ. ಪೂರಡಂ ದಿನದಂದು ಬೆವ್ಕೋ 104 ಕೋಟಿ ರೂ.ಗಳ ಮದ್ಯ ಮಾರಾಟ ಮಾಡಿದೆ.
ಒಂದು ದಿನದ ಮದ್ಯ ಮಾರಾಟ 100 ಕೋಟಿ ದಾಟಿರುವುದು ಬೆವ್ಕೋ ಇತಿಹಾಸದಲ್ಲಿ ಇದೇ ಮೊದಲು. ಕಳೆದ ವರ್ಷ ಪೂರಾಡಂ ದಿನದಂದು 78 ಕೋಟಿ ರೂ. ಉತ್ರಾಂ ದಿನ 85 ಕೋಟಿ ರೂ.ಗಳ ಮದ್ಯ ಮಾರಾಟವಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಬಂಪರ್ ಮದ್ಯ ಮಾರಾಟವಾಗಿದೆ.
ಓಣಂ ಹಬ್ಬದ ಒಂದೇ ವಾರದಲ್ಲಿ ಇಡೀ ರಾಜ್ಯದಲ್ಲಿ 625 ಕೋಟಿ ರೂ.ಗಳ ಮದ್ಯ ಮಾರಾಟವಾಗಿದೆ. ಇದು ರಾಜ್ಯದ ಇತಿಹಾಸದಲ್ಲಿಯೂ ದಾಖಲೆಯಾಗಿದೆ. ಬೆವ್ಕೊದ ಶೇ. 85 ರಷ್ಟು ಮಾರಾಟವನ್ನು ರಾಜ್ಯ ಸರ್ಕಾರವೇ ವಹಿಸಿಕೊಂಡಿರುವುದು ಆರ್ಥಿಕ ಮುಗ್ಗಟ್ಟಿನ ಸಂದರ್ಭದಲ್ಲಿ ದೊಡ್ಡ ಪರಿಹಾರವಾಗಿದೆ.
ಉತ್ರಾಂ ದಿನದಲ್ಲಿ ರಾಜ್ಯದ ಐದು ಮಳಿಗೆಗಳಲ್ಲಿ ಮದ್ಯ ಮಾರಾಟ ಒಂದು ಕೋಟಿ ದಾಟಿದೆ. ಕೊಲ್ಲಂನ ಆಶ್ರಮದಲ್ಲಿರುವ ಬೆವ್ಕೋ ಔಟ್ಲೆಟ್ ಅತಿ ಹೆಚ್ಚು ಮದ್ಯವನ್ನು ಮಾರಾಟ ಮಾಡಿದೆ. ಇಲ್ಲಿ 1.6 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ. ಇರಿಂಗಲಕುಡ, ಚೆರ್ತಲ ಕೋರ್ಟ್ ಜಂಕ್ಷನ್, ಪಯ್ಯನ್ನೂರು ಮತ್ತು ತಿರುವನಂತಪುರಂ ಪವರ್‌ಹೌಸ್ ರಸ್ತೆಯ ಮಳಿಗೆಗಳಲ್ಲೂ ಭಾರಿ ಮಾರಾಟವಾಗಿದೆ.
ಬೆವ್ಕೋದಲ್ಲಿ ಹೊಸದಾಗಿ ನೇಮಕಗೊಂಡ ಎಂ ಡಿ ಯೋಗೇಶ್ ಗುಪ್ತಾ ಅವರ ಮಧ್ಯಸ್ಥಿಕೆಯು ಈ ಹಿಂದೆ ಇದ್ದ ಮದ್ಯದ ಕೊರತೆಯನ್ನು ಸಂಪೂರ್ಣವಾಗಿ ಪರಿಹರಿಸುವಲ್ಲಿ ಮತ್ತು ಓಣಂ ಸಮಯದಲ್ಲಿ ಅಗ್ಗದ ಜನಪ್ರಿಯ ಮದ್ಯದ ಬ್ರ್ಯಾಂಡ್‌ಗಳನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುವಲ್ಲಿ ಗಮನಾರ್ಹ ಯಶಸ್ಸು ಕಂಡಿದೆ. ಇದೇ ಈ ಬಾರಿ ಮದ್ಯ ಮಾರಾಟ ಹೆಚ್ಚಳಕ್ಕೆ ಕಾರಣವಾಗಿದೆ.
ಓದಿ: ದೇಶ, ರಾಜ್ಯದ ವಿವಿಧೆಡೆ ಹೀಗಿದೆ ಇಂದಿನ ಪೆಟ್ರೋಲ್-ಡೀಸೆಲ್ ದರ..