ತಿರುವನಂತಪುರಂ(ಕೇರಳ) : ರಾಜ್ಯದ ಪ್ರಮುಖ ಹುದ್ದೆಗಳಿಗೆ ಮಹಿಳಾಮಣಿಗಳನ್ನು ನೇಮಿಸುವ ಮೂಲಕ ಕೇರಳ ಸರ್ಕಾರ ಹೊಸ ಇತಿಹಾಸ ಸೃಷ್ಟಿಸಿದೆ. ರಾಜ್ಯದ 14 ಜಿಲ್ಲೆಗಳ ಪೈಕಿ 8 ಜಿಲ್ಲೆಗಳಿಗೆ ಮಹಿಳಾ ಜಿಲ್ಲಾಧಿಕಾರಿಗಳಿದ್ದಾರೆ. ಇದೇ ಮೊದಲ ಬಾರಿಗೆ ರಾಜ್ಯವು ಅತಿ ಹೆಚ್ಚು ಮಹಿಳಾಧಿಕಾರಿಗಳನ್ನು ಹೊಂದಿದೆ. ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಮೊದಲಿಗೆ ಮಹಿಳಾ ಜಿಲ್ಲಾಧಿಕಾರಿ ನೇಮಕವಾದರು.
ಮಹಿಳಾ ಜಿಲ್ಲಾಧಿಕಾರಿಗಳ ಪಟ್ಟಿ
ತಿರುವನಂತಪುರಂ | ಡಾ.ನವಜೋತ್ ಖೋಸಾ |
ಪಥನಮತ್ತಟ್ಟ | ಡಾ.ದಿವ್ಯಾ ಎಸ್ ಅಯ್ಯರ್ |
ಕೊಟ್ಟಾಯಂ | ಡಾ.ಪಿ.ಕೆ.ಜಯಶ್ರೀ |
ಇಡುಕ್ಕಿ | ಶೀಬಾ ಜಾರ್ಜ್ |
ತ್ರಿಶೂರ್ | ಹರಿತಾ ವಿ.ಕುಮಾರ್ |
ಪಾಲಕ್ಕಾಡ್ | ಮೃನ್ಮಾಯಿ ಜೋಶಿ |
ವಯನಾಡು | ಡಾ.ಅಧೀಲಾ ಅಬ್ದುಲ್ಲಾ |
ಕಾಸರಗೋಡು | ಭಂಡಾರಿ ಸ್ವಾಗತ್ ರಣವೀರ್‌ಚಂದ್ |
ಇಷ್ಟು ಜನರಲ್ಲಿ ನವಜೋತ್ ಖೋಸಾ, ದಿವ್ಯಾ ಅಯ್ಯರ್ ಮತ್ತು ಅಧೀಲಾ ಅಬ್ದುಲ್ಲಾ ವೈದ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.