ETV Bharat / bharat

ಶಬರಿಮಲೆಗೆ ಜು.17ರಿಂದ ಭಕ್ತರಿಗೆ ಅವಕಾಶ... ಕೋವಿಡ್​ ಟೆಸ್ಟ್, ವ್ಯಾಕ್ಸಿನ್​​​ ಕಡ್ಡಾಯ - ಕೇರಳ ಶಬರಿಮಲೆ ದೇಗುಲ ಓಪನ್​

ಶಬರಿಮಲೆ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು 48 ಗಂಟೆಗೂ ಮೊದಲು ಮಾಡಿದ ಆರ್​ಟಿ-ಪಿಸಿಆರ್​ ಪರೀಕ್ಷೆಯನ್ನೊಳಗೊಂಡ ಕೋವಿಡ್​ ನೆಗೆಟಿವ್ ಪ್ರಮಾಣ ಪತ್ರ ತರಬೇಕು ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

Sabarimala temple
Sabarimala temple
author img

By

Published : Jul 10, 2021, 7:58 PM IST

ತಿರುವನತಪುರಂ(ಕೇರಳ): 2ನೇ ಹಂತದ ಕೋವಿಡ್​ ಅಲೆ ಕಡಿಮೆಯಾಗುತ್ತಿದ್ದು, ಇದೀಗ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದೆ. ಕೆಲವೊಂದು ರಾಜ್ಯಗಳಲ್ಲಿ ಸಂಪೂರ್ಣವಾಗಿ ಲಾಕ್​ಡೌನ್​ ತೆಗೆದುಹಾಕಲಾಗಿದ್ದು, ದೇವಸ್ಥಾನಗಳಿಗೆ ಭೇಟಿ ನೀಡಲು ಅವಕಾಶ ನೀಡಲಾಗಿದೆ. ಇದರ ಬೆನ್ನಲ್ಲೇ ಕೇರಳದಲ್ಲೂ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಭೇಟಿಗೆ ಇದೀಗ ಭಕ್ತರಿಗೆ ಅವಕಾಶ ಮಾಡಿಕೊಡಲಾಗಿದ್ದು, ಜುಲೈ 17ರಿಂದ 21ರವರೆಗೆ ತೆರಳಬಹುದಾಗಿದೆ. ತಿಂಗಳ ಪೂಜೆಗೋಸ್ಕರ ಈ ಅವಕಾಶ ಮಾಡಿಕೊಡಲಾಗಿದೆ ಎಂದು ತಿರುವಾಂಕೂರು ದೇವಸಂ ಮಂಡಳಿ (ಟಿಡಿಬಿ) ಮಾಹಿತಿ ಹಂಚಿಕೊಂಡಿದೆ.

  • Kerala's Sabarimala temple to be opened for devotees from July 17 to 21 for monthly puja. Devotees with complete COVID vaccination certificates or RTPCR negative report, issued within 48 hrs, will be allowed. Maximum of 5,000 devotees will be allowed through online booking system pic.twitter.com/qvmKoIWjBN

    — ANI (@ANI) July 10, 2021 " class="align-text-top noRightClick twitterSection" data=" ">

ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಕೋವಿಡ್​ ವ್ಯಾಕ್ಸಿನ್​ ಪಡೆದುಕೊಂಡಿರುವ ಪ್ರಮಾಣ ಪತ್ರ ಹಾಗೂ ಆರ್​​ಟಿ-ಪಿಸಿಆರ್​​ ನೆಗೆಟಿವ್​ ರಿಪೋರ್ಟ್​ ಕಡ್ಡಾಯವಾಗಿ ಹೊಂದಿರಬೇಕು ಎಂದಿದೆ. RTPCR ರಿಪೋರ್ಟ್​ 48 ಗಂಟೆಯೊಳಗೆ ಮಾಡಿಸಿದ್ದಾಗಿರಬೇಕು ಎಂದು ತಿಳಿಸಲಾಗಿದೆ. ಪ್ರತಿದಿನ 5 ಸಾವಿರ ಭಕ್ತರು ಇಲ್ಲಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದ್ದು, ಆನ್​ಲೈನ್​ ಬುಕ್ಕಿಂಗ್​ಗೆ ಅವಕಾಶ ನೀಡಲಾಗಿದೆ.

ಇದನ್ನೂ ಓದಿರಿ: ಭಯೋತ್ಪಾದಕರಿಗೆ ಆರ್ಥಿಕ ನೆರವು: ಕಾಶ್ಮೀರದ 11 ಸರ್ಕಾರಿ ನೌಕರರ ವಜಾ

ಕೇರಳದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದ ಕಾರಣ ಕಳೆದ ಕೆಲ ತಿಂಗಳಿಂದ ಅಯ್ಯಪ್ಪನ ದೇವಸ್ಥಾನ ಸಂಪೂರ್ಣವಾಗಿ ಬಂದ್​ ಆಗಿದ್ದು, ಅಲ್ಲಿನ ಅರ್ಚಕರು ಪೂಜೆ ನಡೆಸುತ್ತಿದ್ದಾರೆ. ಇದೀಗ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಕೊರೊನಾ ಹಾವಳಿ ಕಡಿಮೆಯಾಗಿದ್ದ ಸಂದರ್ಭದಲ್ಲೂ ಇದೇ ರೀತಿಯ ಅವಕಾಶ ನೀಡಲಾಗಿತ್ತು. ಆದರೆ 2ನೇ ಹಂತದ ಕೋವಿಡ್​ ಅಲೆ ದಿಢೀರ್​ ಆಗಿ ಹೆಚ್ಚಾಗುತ್ತಿದ್ದಂತೆ ದೇವಸ್ಥಾನ ಬಂದ್​ ಮಾಡಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.