ETV Bharat / bharat

ಕೇರಳ ವಿಧಾನಸಭೆ ವಿಶೇಷ ಅಧಿವೇಶನಕ್ಕೆ ಗವರ್ನರ್​ ಬ್ರೇಕ್​ - ಕೇರಳ ವಿಧಾನಸಭೆ ವಿಶೇಷ ಅಧಿವೇಶನ

ಹೊಸ ಕೃಷಿ ಕಾನೂನುಗಳ ಬಗ್ಗೆ ಚರ್ಚಿಸಲು ಕೇರಳ ವಿಧಾನಸಭೆಯಲ್ಲಿ ವಿಶೇಷ ಅಧಿವೇಶನ ಕರೆಯುವ ಸರ್ಕಾರದ ನಡೆಗೆ ಗವರ್ನರ್​ ಆರಿಫ್ ಮೊಹಮ್ಮದ್ ಖಾನ್ ಬ್ರೇಕ್​ ಹಾಕಿದ್ದಾರೆ.

ಗವರ್ನರ್​ ಆರಿಫ್ ಮೊಹಮ್ಮದ್ ಖಾನ್
ಗವರ್ನರ್​ ಆರಿಫ್ ಮೊಹಮ್ಮದ್ ಖಾನ್
author img

By

Published : Dec 23, 2020, 9:16 AM IST

ತಿರುವನಂತಪುರಂ: ಹೊಸ ಕೃಷಿ ಕಾನೂನುಗಳ ಬಗ್ಗೆ ಚರ್ಚಿಸಲು ರಾಜ್ಯ ವಿಧಾನಸಭೆಯಲ್ಲಿ ವಿಶೇಷ ಅಧಿವೇಶನವನ್ನು ಕರೆಯುವ ಸರ್ಕಾರದ ಯೋಜನೆಗೆ ಗವರ್ನರ್​ ಆರಿಫ್ ಮತ್ತೊಮ್ಮೆ ಬ್ರೇಕ್​ ಹಾಕಿದ್ದಾರೆ. ಈ ಹಿಂದೆಯೂ ಮನವಿ ಸಲ್ಲಿಸಲಾಗಿದ್ದು, ಅದಕ್ಕೂ ಸಹ ಒಪ್ಪಿಗೆ ನೀಡಿರಲಿಲ್ಲ.

ವಿಶೇಷ ಅಧಿವೇಶನಕ್ಕೆ ಕಾರಣವೇನೆಂದು ರಾಜ್ಯಪಾಲರು ಪ್ರತಿಕ್ರಿಯೆ ಕೋರಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರ, "ರೈತರ ಮೇಲೆ ಪರಿಣಾಮ ಬೀರುವ ನಿರ್ಣಾಯಕ ವಿಷಯಗಳ ಬಗ್ಗೆ ಚರ್ಚಿಸಬೇಕಾಗಿದೆ" ಎಂದು ತಿಳಿಸಿತ್ತು. ಆದರೆ ಇಷ್ಟು ಕಡಿಮೆ ಸಮಯದಲ್ಲಿ ವಿಶೇಷ ಅಧಿವೇಶನವನ್ನು ಕರೆಯಲು ಯಾವುದೇ ತುರ್ತು ಪರಿಸ್ಥಿತಿ ಇಲ್ಲ ಎಂದು ಉಲ್ಲೇಖಿಸಿ ಮತ್ತು ಸರ್ಕಾರದ ವಿವರಣೆ ‘ಅತೃಪ್ತಿಕರ’ ಎಂದು ಗವರ್ನರ್​ ಆರಿಫ್ ಮೊಹಮ್ಮದ್ ಖಾನ್ ಮನವಿಯನ್ನು ನಿರಾಕರಿಸಿದ್ದರು.

ಇದನ್ನು ಓದಿ: ಬೊಕ್ಕಸ ಹೊರೆ : ನಷ್ಟದ ಹಾದಿಯಲ್ಲೇ ಮುಂದುವರಿಯುತ್ತಿರುವ 19 ಸಾರ್ವಜನಿಕ ಉದ್ದಿಮೆಗಳು !

ಇದರ ಬೆನ್ನಲ್ಲೇ ರಾಜ್ಯ ಕೃಷಿ ಸಚಿವ ವಿ.ಎಸ್. ಸುನೀಲ್ ಕುಮಾರ್ ಅವರು ರಾಜ್ಯಪಾಲರನ್ನು ಖುದ್ದಾಗಿ ಭೇಟಿಯಾಗಲು ಅನುಮತಿ ಕೋರಿ ಅಧಿವೇಶನದ ಅಗತ್ಯತೆಯನ್ನು ವಿವರವಾಗಿ ತಿಳಿಸಿದ್ದರು. ಅದನ್ನು ಸಹ ತಿರಸ್ಕರಿಸಿದರು. ಸರ್ಕಾರ ಬುಧವಾರ ಅಧಿವೇಶನ ನಡೆಸಲು ಅವಕಾಶ ನೀಡುವಂತೆ ರಾಜ್ಯಪಾಲರನ್ನು ಕೋರಿ ಸ್ಪೀಕರ್ ಪಿ. ಶ್ರೀರಾಮಕೃಷ್ಣನ್ ಎರಡನೇ ಬಾರಿಗೆ ಶಿಫಾರಸು ಸಲ್ಲಿಸಿದ್ದರು. ಆದರೆ ಭಾರತೀಯ ಸಂಸತ್ತು ಅಂಗೀಕರಿಸಿದ ಮಸೂದೆಗಳ ವಿರುದ್ಧ ರಾಜ್ಯ ಸರ್ಕಾರವು ವಿಧಾನಸಭೆಯಲ್ಲಿ ಚರ್ಚಿಸುವುದು ಅಸಂವಿಧಾನಿಕ ಎಂದು ಬಹಿರಂಗವಾಗಿ ಹೇಳಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.