ETV Bharat / bharat

ಅಂಧತ್ವ ಮೆಟ್ಟಿ ನಿಂತ ಬಾಲೆ.. CBSE 12ನೇ ತರಗತಿಯಲ್ಲಿ 496 ಅಂಕಗಳಿಸಿ ದೇಶಕ್ಕೆ ಮೊದಲ ಸ್ಥಾನ - ವಿದ್ಯಾರ್ಥಿನಿ ಹನ್ನಾ ಸೈಮನ್​

ಸಿಬಿಎಸ್​​ಇ 12ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ಹನ್ನಾ 496 ಅಂಕ ಗಳಿಕೆ ಮಾಡಿದ್ದಾರೆ. ಈ ಮೂಲಕ ದೇಶಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.

Hannah Alice Simon
Hannah Alice Simon
author img

By

Published : Jul 25, 2022, 3:02 PM IST

Updated : Jul 25, 2022, 10:58 PM IST

ಕೊಚ್ಚಿ(ಕೇರಳ): ಸಾಧನೆ ಮಾಡಬೇಕು ಎಂಬ ಛಲ, ಹಂಬಲ ಇರುವವರಿಗೆ ಯಾವುದೇ ಸಮಸ್ಯೆ, ತೊಂದರೆಗಳಿದ್ದರೂ ಅಡ್ಡಿಯಾಗಲ್ಲ. ಇಂತಹ ಅನೇಕ ಉದಾಹರಣೆಗಳು ನಮ್ಮ ಕಣ್ಮುಂದೆ ನಡೆದು ಹೋಗಿವೆ. ಸದ್ಯ ಹುಟ್ಟು ಅಂಧತ್ವ ಹೊಂದಿದ್ದ ಬಾಲೆಯೊಬ್ಬರು ಸಿಬಿಎಸ್​ಇ 12ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಬರೋಬ್ಬರಿ 496 ಅಂಕ ಗಳಿಕೆ ಮಾಡಿದ್ದಾರೆ. ಈ ಮೂಲಕ ಸಾವಿರಾರು ವಿಶೇಷ ಚೇತನ ಮಕ್ಕಳಿಗೆ ದಾರಿ ದೀಪವಾಗಿದ್ದಾರೆ.

ಈಗಾಗಲೇ ಯೂಟ್ಯೂಬರ್​​, ಗಾಯಕ ಮತ್ತು ಪ್ರೇಕರ ಭಾಷಣಕಾರರಾಗಿ ಕೆಲಸ ಮಾಡ್ತಿರುವ ಹನ್ನಾ ಸೈಮನ್​ ಈ ಸಾಧನೆ ಮಾಡಿದ್ದಾರೆ. ಸಿಬಿಎಸ್​​ಇ 12ನೇ ತರಗತಿಯಲ್ಲಿ ವಿಶೇಷ ಚೇತನ ವಿದ್ಯಾರ್ಥಿಗಳ ವಿಭಾಗದಲ್ಲಿ ಅಗ್ರಸ್ಥಾನ ಗಳಿಸಿದ್ದು, 500 ಅಂಕಗಳಿಗೆ 496 ಮಾರ್ಕ್ಸ್ ಪಡೆದುಕೊಂಡಿದ್ದಾರೆ.

CBSE 12ನೇ ತರಗತಿಯಲ್ಲಿ 496 ಅಂಕಗಳಿಸಿ ದೇಶಕ್ಕೆ ಮೊದಲ ಸ್ಥಾನ

ಕೇರಳದ ಕೊಚ್ಚಿಯಲ್ಲಿರುವ ಹನ್ನಾ ಮೈಕ್ರೋಫ್ಥಾಯಾದಿಂದ(Microphthalmia) ಬಳಲುತ್ತಿದ್ದಾರೆ. ಈಗಾಗಲೇ ವೆಲ್ಕಮ್ ಹೋಮ್ ಎಂಬ ಪುಸ್ತಕ ಬಿಡುಗಡೆ ಮಾಡಿರುವ ಅವರು, ಅದರಲ್ಲಿ ಆರು ಯುವ ಸಾಧಕರಿಯರ ಬಗ್ಗೆ ಬರೆದಿದ್ದಾರೆ. ಶಾಲೆಯಲ್ಲಿ ಕಿರುಕುಳಕ್ಕೊಳಗಾಗಿರುವುದಾಗಿ ವಿದ್ಯಾರ್ಥಿನಿ ಹೇಳಿಕೊಂಡಿದ್ದು, ಅನೇಕ ರೀತಿಯ ಸವಾಲು ಮೆಟ್ಟಿನಿಂತಿದ್ದಾರೆ. ಬಾಲ್ಯದಿಂದ ಅನೇಕ ತೊಂದರೆ ಅನುಭವಿಸಿದ್ದರಿಂದ ಇದೀಗ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿರಿ: ಜಮೀನಿನಲ್ಲಿ ತರಬೇತಿ ವಿಮಾನ ಪತನ.. ಯುವ ಮಹಿಳಾ ಪೈಲಟ್​ಗೆ ಗಾಯ

ಹನ್ನಾಗೆ ಆತ್ಮವಿಶ್ವಾಸ ತುಂಬುತ್ತಿದ್ದ ಪೋಷಕರು: ಹುಟ್ಟಿನಿಂದಲೇ ವಿಶೇಷ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿಗೆ ಪೋಷಕರು ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದ್ದಾರೆ. ಮನೆಯಲ್ಲಿ ಮೂವರು ಮಕ್ಕಳಿದ್ದು, ಎಲ್ಲರನ್ನೂ ಒಂದೇ ರೀತಿಯಾಗಿ ನಡೆಸಿಕೊಳ್ಳುತ್ತಿದ್ದರು. ಶಾಲಾ ಮೈದಾನಕ್ಕೆ ಕರೆದುಕೊಂಡು ಹೋಗಿ, ಅವರ ಕೈ ಹಿಡಿದುಕೊಂಡು ಓಡುತ್ತಿದ್ದರು.

  • Kochi, Kerala | Hannah Simon, a YouTuber, singer & motivational speaker, suffering from Microphthalmia (birth defect resulting in blindness for her) topped CBSE Class XII in category of students with disabilities— scoring 496 out of 500

    She says, "Really happy & grateful to God" pic.twitter.com/TopuyXqE6m

    — ANI (@ANI) July 25, 2022 " class="align-text-top noRightClick twitterSection" data=" ">

ಹನ್ನಾಳ ತಂದೆ ಸೈಮನ್​ ಆಕೆಯಲ್ಲಿ ಮತ್ತಷ್ಟು ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದ್ದರು. ಇದರಿಂದ ಶಾಲೆಯಲ್ಲಿ ಯಾವುದೇ ಸಮಸ್ಯೆ ಎದುರಾದರೂ, ಆತ್ಮವಿಶ್ವಾಸದಿಂದ ಎದುರಿಸುತ್ತಿದ್ದರು. 19 ವರ್ಷದ ಹನ್ನಾ ಇದೀಗ ದೇಶದ ವಿಕಲಾಂಗ ವಿದ್ಯಾರ್ಥಿಗಳ ವಿಭಾಗದಲ್ಲಿ ಟಾಪರ್​ ಆಗಿದ್ದು, ಕಾಕಿನಾಡಿನ ರಾಜಗಿರಿ ಕ್ರಿಸ್ತ ಜಯಂತಿ ಪಬ್ಲಿಕ್​ ಸ್ಕೂಲ್​​ನಲ್ಲಿ ಓದುತ್ತಿದ್ದಾರೆ.

Last Updated : Jul 25, 2022, 10:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.