ತಿರುವನಂತಪುರಂ(ಕೇರಳ): ಈ ವರ್ಷದ ಕೇರಳ ವಿಷು ಬಂಪರ್ ಲಾಟರಿ ಫಲಿತಾಂಶ ಪ್ರಕಟವಾಗಿದೆ. ಟಿಕೆಟ್ ಸಂಖ್ಯೆ ವಿಇ 475588 ಮೊದಲ ಬಹುಮಾನ 12 ಕೋಟಿ ರೂ ಗೆದ್ದಿದೆ. ಮಲಪ್ಪುರಂ ಜಿಲ್ಲೆಯ ತಿರೂರ್‌ನಲ್ಲಿರುವ ಎಂ 5087 ಏಜೆನ್ಸಿಯಿಂದ ಆದರ್ಶ್ ಎಂಬ ಏಜೆಂಟ್ ಮಾರಾಟ ಮಾಡಿದ ಟಿಕೆಟ್‌ಗೆ ಪ್ರಥಮ ಬಹುಮಾನ ಘೋಷಣೆ ಆಗಿದೆ. ಈ ಮಧ್ಯೆ ಅದೃಷ್ಟಶಾಲಿ ವಿಜೇತರ ವಿವರ ಮಾತ್ರ ಇನ್ನೂ ಬಹಿರಂಗವಾಗಿಲ್ಲ.
ಮೊದಲ ಬಹುಮಾನದ ವಿಜೇತರು ಶೇ 10ರಷ್ಟು ಏಜೆನ್ಸಿ ಕಮಿಷನ್ ಮತ್ತು ಶೇ 30ರಷ್ಟು ಇತರ ತೆರಿಗೆಗಳನ್ನು ಹೊರತುಪಡಿಸಿ ಅಂತಿಮ ಮೊತ್ತದ 60 ರಷ್ಟನ್ನು ಪಡೆಯುತ್ತಾರೆ. ದ್ವಿತೀಯ ಬಹುಮಾನ ಆರು ಮಂದಿಗೆ ತಲಾ 1 ಕೋಟಿ ರೂ ಗೆದ್ದಿದ್ದಾರೆ. ವಿಎ 513003, ವಿಬಿ 678985, ವಿಸಿ 743934, ವಿಡಿ 175757, ವಿಇ 797565 ಮತ್ತು ವಿಜಿ 642218 ಸಂಖ್ಯೆಯ ಟಿಕೆಟ್‌ಗಳು ಎರಡನೇ ಬಹುಮಾನಕ್ಕೆ ಅರ್ಹವಾಗಿವೆ.
ತೃತೀಯ ಬಹುಮಾನವಾಗಿ ಆರು ಮಂದಿಗೆ ತಲಾ 10 ಲಕ್ಷ ರೂಗಳಂತೆ ಗೆದ್ದಿದ್ದಾರೆ. ವಿಎ 214064, ವಿಬಿ 770679, ವಿಸಿ 584088, ವಿಡಿ 265117, ವಿಇ 244099 ಮತ್ತು ವಿಜಿ 412997 ಸಂಖ್ಯೆಯ ಟಿಕೆಟ್‌ಗಳು ಮೂರನೇ ಬಹುಮಾನಕ್ಕೆ ಅರ್ಹವಾಗಿವೆ. ಆರು ಜನರ ನಾಲ್ಕನೇ ಬಹುಮಾನಕ್ಕೆ ತಲಾ 5 ಲಕ್ಷ ರೂ. ಬಹುಮಾನ ಮೊತ್ತ ನಿಗದಿ ಆಗಿದೆ. ನಾಲ್ಕನೇ ಬಹುಮಾನಕ್ಕೆ ಅರ್ಹರಾಗಿರುವ ಸಂಖ್ಯೆಗಳೆಂದರೆ ವಿಎ 714724, ವಿಬಿ 570166, ವಿಸಿ 271986, ವಿಡಿ 533093, ವಿಇ 453921 ಮತ್ತು ವಿಜಿ 572542.
ವಿಷು ಬಂಪರ್ ಲಾಟರಿ ಟಿಕೆಟ್‌ಗೆ 300 ರೂ ಬೆಲೆ: ಐದನೇ ಬಹುಮಾನವು ಆರು ಜನರಿಗೆ ತಲಾ 2 ಲಕ್ಷ ರೂ.ಗಳಂತೆ ನಿಗದಿ ಆಗಿತ್ತು. ವಿಎ 359107, ವಿಬಿ 125025, ವಿಸಿ 704607, ವಿಡಿ 261086, ವಿಇ 262870 ಮತ್ತು ವಿಜಿ 262310 ನಂಬರ್ಗಳಿಗೆ ಐದನೇ ಬಹುಮಾನ ನೀಡಲಾಗಿದೆ. ತಿರುವನಂತಪುರದಲ್ಲಿ ಬುಧವಾರ ಮಧ್ಯಾಹ್ನ 2 ಗಂಟೆಗೆ ಈ ಲಾಟರಿ ಟಿಕೆಟ್ಗಳ ಡ್ರಾ ನಡೆಯಿತು. ಈ ಬಾರಿಯ ವಿಷು ಬಂಪರ್ ಲಾಟರಿ ಟಿಕೆಟ್‌ಗೆ 300 ರೂ ಬೆಲೆ ನಿಗದಿಯಾಗಿತ್ತು. ಈ ಬಾರಿ 42 ಲಕ್ಷ ಟಿಕೆಟ್‌ಗಳು ಮಾರಾಟವಾಗಿದ್ದವು ಎಂಬುದು ವಿಶೇಷ
ಲಾಟರಿ ಏಜೆಂಟ್ ಮಧುಸೂದನ್ ಟಿಕೆಟ್ ಮಾರಾಟ: ಈ ಹಿಂದೆ ವಿಷು ಬಂಪರ್ ಮೊದಲ ಬಹುಮಾನ 10 ಕೋಟಿ ರೂ ನಿಗದಿಯಾಗಿತ್ತು. ಕಳೆದ ಜನವರಿಯಲ್ಲಿ ರಾಜ್ಯ ಲಾಟರಿಯ ಕ್ರಿಸ್ಮಸ್-ಹೊಸ ವರ್ಷದ ಬಂಪರ್ ಟಿಕೆಟ್ ಡ್ರಾ ಕೂಡ ನಡೆದಿತ್ತು. ಎಕ್ಸ್ ಡಿ 236433 ನಂಬರ್ ಟಿಕೆಟ್ ಮೊದಲ ಬಹುಮಾನ 16 ಕೋಟಿ ರೂ. ಪಾಲಕ್ಕಾಡ್‌ನ ಲಾಟರಿ ಏಜೆಂಟ್ ಮಧುಸೂದನನ್ ಮೊದಲ ಬಹುಮಾನದ ಟಿಕೆಟ್ ಅನ್ನು ಮಾರಾಟ ಮಾಡಿದ್ದರು.
ಇದನ್ನೂ ಓದಿ: ₹25 ಕೋಟಿ ಲಾಟರಿ ಗೆದ್ದ ಕೇರಳದ ವ್ಯಕ್ತಿಯ ಕೈ ಸೇರುವುದು 15 ಕೋಟಿ ರೂಪಾಯಿ, 10 ಕೋಟಿ ಟ್ಯಾಕ್ಸ್!