ತಿರುವನಂತಪುರಂ (ಕೇರಳ): ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಉಲ್ಬಣಗೊಳ್ಳುತ್ತಿರುವುದಕ್ಕೆ ರಾಜ್ಯದಲ್ಲಿ ಈಗಾಗಲೇ ಇರುವ ವಾರಾಂತ್ಯದ ಸಂಪೂರ್ಣ ಲಾಕ್‌ಡೌನ್ ಮುಂದುವರಿಸಲು ಸರ್ಕಾರ ತೀರ್ಮಾನಿಸಿದೆ.
ಅಷ್ಟೇ ಅಲ್ಲದೆ ಕೇರಳದಲ್ಲಿ ನಿತ್ಯ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಕೇಂದ್ರ ಸರ್ಕಾರವು 6 ಸದಸ್ಯರ ತಜ್ಞರ ತಂಡವನ್ನು ಕೇರಳಕ್ಕೆ ಕಳುಹಿಸಲು ತೀರ್ಮಾನ ಕೈಗೊಂಡಿದೆ. ಶೀಘ್ರದಲ್ಲೇ ಆ ತಂಡ ಕೇರಳಕ್ಕೆ ಭೇಟಿ ನೀಡಿ ಕೊರೊನಾ ಪರಿಸ್ಥಿತಿ ಪರಿಶೀಲನೆ ನಡೆಸಲಿದೆ.
-
Central Government is sending 6 member team to Kerala headed by NCDC Director.
— Mansukh Mandaviya (@mansukhmandviya) July 29, 2021 " class="align-text-top noRightClick twitterSection" data="
As large number of COVID cases are still being reported in Kerala, the team will aid state’s ongoing efforts in #COVID19 management.
">Central Government is sending 6 member team to Kerala headed by NCDC Director.
— Mansukh Mandaviya (@mansukhmandviya) July 29, 2021
As large number of COVID cases are still being reported in Kerala, the team will aid state’s ongoing efforts in #COVID19 management.Central Government is sending 6 member team to Kerala headed by NCDC Director.
— Mansukh Mandaviya (@mansukhmandviya) July 29, 2021
As large number of COVID cases are still being reported in Kerala, the team will aid state’s ongoing efforts in #COVID19 management.
ಕೇರಳ ರಾಜ್ಯದಲ್ಲಿ ದಿನವೂ ಹೆಚ್ಚಿನ ಸಂಖ್ಯೆಯ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಹೀಗಾಗಿ ತಜ್ಞರ ತಂಡ ಕೇರಳಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.
ಕೇಂದ್ರ ಸರ್ಕಾರ ಎನ್‌ಸಿಡಿಸಿ ನಿರ್ದೇಶಕರ ನೇತೃತ್ವದಲ್ಲಿ 6 ಸದಸ್ಯರ ತಂಡವನ್ನು ಕೇರಳಕ್ಕೆ ಕಳುಹಿಸುತ್ತಿದೆ. ಕೇರಳದಲ್ಲಿ ಹೆಚ್ಚಿನ ಸಂಖ್ಯೆಯ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಕೊರೊನಾ ನಿರ್ವಹಣೆಯಲ್ಲಿ ರಾಜ್ಯದ ನಿರಂತರ ಪ್ರಯತ್ನಗಳಿಗೆ ತಂಡವು ಸಹಾಯ ಮಾಡುತ್ತದೆ ಎಂದು ಮನ್ಸುಖ್ ಮಾಂಡವಿಯಾ ಟ್ವೀಟ್ ಮಾಡಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಹೆಚ್ಚು ಮತ್ತು ಕಡಿಮೆ ಇದ್ದಲ್ಲಿ ಆಯಾ ನಿರ್ಬಂಧಗಳು ಮುಂದುವರಿಯುತ್ತವೆ. ಶೇ. 5 ಕ್ಕಿಂತ ಕಡಿಮೆ ಟಿಪಿಆರ್ ಹೊಂದಿರುವ ಪ್ರದೇಶಗಳನ್ನು “ವಲಯ-ಎ”, ಶೇ.5 ರಿಂದ ಶೇ.10 ನಡುವೆ ವಲಯ-ಬಿ, ಶೇ.10 ರಿಂದ 15 ನಡುವೆ ವಲಯ-ಸಿ ಮತ್ತು ಶೇ.15 ಕ್ಕಿಂತ ಹೆಚ್ಚು ವಲಯ-ಡಿ ಎಂದು ಗುರುತಿಸಿ ವರ್ಗೀಕರಿಸಲಾಗಿದೆ. ವಲಯ-ಬಿ ಯಲ್ಲಿ ಭಾಗಶಃ ಲಾಕ್‌ಡೌನ್, ವಲಯ-ಸಿ ಯಲ್ಲಿ ಲಾಕ್‌ಡೌನ್ ಮತ್ತು ವಲಯ-ಡಿ ಯಲ್ಲಿ ಟ್ರಿಪಲ್ ಲಾಕ್‌ಡೌನ್ ಅನ್ನು ಸರ್ಕಾರ ವಿಧಿಸಿದೆ.