ಎರ್ನಾಕುಲಂ(ಕೇರಳ): ಎರ್ನಾಕುಲಂನ ಆಲುವಾದಲ್ಲಿ ಸ್ಥಾಪಿತವಾಗಿರುವ ಕೇರಳ ಸ್ಟೇಟ್ ಸೀಡ್ ಫಾರ್ಮ್ ದೇಶದ ಮೊದಲ ಕಾರ್ಬನ್ ನ್ಯೂಟ್ರಲ್ ಸೀಡ್ ಫಾರ್ಮ್ ಎಂದು ಘೋಷಿಸಲಾಗಿದೆ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಡಿಸೆಂಬರ್ 10 ರಂದು ಫಾರ್ಮ್ ಅನ್ನು ಕಾರ್ಬನ್ ನ್ಯೂಟ್ರಲ್ ಫಾರ್ಮ್ ಎಂದು ಘೋಷಿಸಲಿದ್ದಾರೆ.
ಸಮಗ್ರ ಕೃಷಿ ತಂತ್ರವನ್ನು ಅಳವಡಿಸಿಕೊಂಡಿರುವ ಈ ಫಾರ್ಮ್, ಆವರಣದಲ್ಲಿ ಸಾವಯವ ಗೊಬ್ಬರ ಮತ್ತು ಜೈವಿಕ ಕೀಟನಾಶಕಗಳನ್ನು ಬಿಟ್ಟು. ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸುವುದಿಲ್ಲ.
ಕಾರ್ಬನ್ ನ್ಯೂಟ್ರಲ್ ಫಾರ್ಮ್ ಎಂದರೇನು?: ಫಾರ್ಮ್‌ನಿಂದ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಮತ್ತು ಜಮೀನಿನಲ್ಲಿ ಇಂಗಾಲದ ಅನಿಲವು ಸಮಾನವಾದಾಗ, ಅದನ್ನು ಕಾರ್ಬನ್ ನ್ಯೂಟ್ರಲ್ ಫಾರ್ಮ್ ಎಂದು ಕರೆಯಲಾಗುತ್ತದೆ. ಸಾವಯವ ಕೃಷಿಯು ಈ ಸ್ಥಿತಿಯನ್ನು ಸಾಧಿಸಲು ಕೃಷಿಗೆ ಸಹಾಯ ಮಾಡುವುದಿಲ್ಲ. ಆದ್ದರಿಂದ ಹೊರಸೂಸುವಿಕೆಯ ಮಟ್ಟವನ್ನು ತಗ್ಗಿಸಲು ಮತ್ತು ಅನಿಲದ ಮಟ್ಟವನ್ನು ಸುಧಾರಿಸಲು ಹಲವಾರು ವೈಜ್ಞಾನಿಕ ವಿಧಾನಗಳನ್ನು ಬಳಸಲಾಗುತ್ತದೆ.
ಕೇರಳ ಕೃಷಿ ವಿಶ್ವವಿದ್ಯಾನಿಲಯವು ಎರಡು ತಿಂಗಳ ಸುದೀರ್ಘ ಅಧ್ಯಯನದ ನಂತರ ಕೇರಳ ರಾಜ್ಯದ ಸೀಡ್ ಫಾರ್ಮ್‌ಗೆ ಈ ಸ್ಥಾನಮಾನವನ್ನು ನೀಡಲಾಯಿತು. "ನಾವು ಒಂದು ಹೆಜ್ಜೆ ಮುಂದೆ ಹೋಗಿದ್ದೇವೆ ಮತ್ತು ನಮ್ಮ ಹೊರಸೂಸುವಿಕೆ ಅನಿಲವು ಕಡಿಮೆ ಇರುವುದರಿಂದ ಕಾರ್ಬನ್-ನ್ಯೂಟ್ರಲ್ ಫಾರ್ಮ್ ಸ್ಥಾನಮಾನವನ್ನು ಸಾಧಿಸಿದ್ದೇವೆ" ಎಂದು ಕೃಷಿ ಸಹಾಯಕ ಕೃಷಿ ನಿರ್ದೇಶಕಿ ಲಿಸಿಮೋಲ್ ಜೆ ವಡಕ್ಕೋಟ್ ಈಟಿವಿ ಭಾರತ್‌ಗೆ ತಿಳಿಸಿದರು.
1919ರಲ್ಲಿ ಕೃಷಿ ತರಬೇತಿ ಸಂಸ್ಥೆಯಾಗಿ ಸ್ಥಾಪಿಸಲಾದ ಈ ಫಾರ್ಮ್ ಸರ್ಕಾರದ ಅಧಿನಕ್ಕೆ ಒಳಪಟ್ಟು ಸ್ಟೇಟ್ ಸೀಡ್ ಫಾರ್ಮ್ ಆಗಿ ಬದಲಿಸಲಾಯಿತು, ಈ ಜಮೀನಿನಲ್ಲಿ ಕಳೆದ 10 ವರ್ಷಗಳಿಂದ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳನ್ನು ಇಲ್ಲಿ ಬಳಸುತ್ತಿಲ್ಲ.
ಪ್ರಾಣಿ ಸಾಕಾಣಿಕೆಗೆ ಪ್ರೋತ್ಸಾಹ: ಈ ಜಮೀನಿನಲ್ಲಿ ಬೀಜದ ಉತ್ಪಾದನೆಗಿಂತ ಭತ್ತದ ಕೃಷಿ ಚಟುವಟಿಕೆ ಮುಖ್ಯವಾಗಿದೆ. ಜೊತೆಗೆ ಕಾಸರಗೋಡಿನ ಕುಬ್ಜ ಹಸುಗಳು, ಕುಟ್ಟನಾಡನ್ ಬಾತುಕೋಳಿಗಳು, ಕೋಳಿಗಳು, ಮಲಬಾರಿ ಆಡುಗಳು ಮತ್ತು ಮೀನುಗಳನ್ನು ಸಹ ಸಮಗ್ರ ಕೃಷಿ ತಂತ್ರದ ಭಾಗವಾಗಿ ಇಲ್ಲಿ ಸಾಕಲಾಗುತ್ತದೆ.
ವಿಧವಿಧವಾದ ಭತ್ತದ ತಳಿಗಳು: ಇಲ್ಲಿ ಉತ್ಪಾದನೆಯಾಗುವ ಭತ್ತದ ಕಾಳುಗಳು ಹೆಚ್ಚಿನ ಇಳುವರಿಯನ್ನು ನೀಡುತ್ತವೆ. ಸ್ಥಳೀಯ ಭತ್ತದ ತಳಿಗಳಾದ 'ಜಾವರ', ರಕ್ತಶಾಲಿ, ಚೊಟ್ಟಾಡಿ, ವಡಕ್ಕನ್ ವೆಳ್ಳಾರಿ ಖೈಮಾ, ಪೊಕ್ಕಲಿಲ್, ಮ್ಯಾಜಿಕ್ ರೈಸ್, ಉತ್ತಮ ಗುಣಮಟ್ಟದ ಬೀಜಗಳ ಉತ್ಪಾದನೆಗಾಗಿ ಇಲ್ಲಿ ಬೆಳೆಸಲಾಗುತ್ತದೆ.
ಭತ್ತದ ರಕ್ಷಣೆಗೆ ಬಾತುಕೋಳಿ: ಭತ್ತದ ಗದ್ದೆಗಳಿಂದ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಬಾತುಕೋಳಿ ಭತ್ತದ ಕೃಷಿ ವಿಧಾನವನ್ನು ಬಳಸಲಾಗುತ್ತದೆ. ಈ ವಿಧಾನದಲ್ಲಿ, ಕೀಟಗಳ ದಾಳಿಯನ್ನು ಕಡಿಮೆ ಮಾಡಲು ಮತ್ತು ಇಂಗಾಲದ ಸ್ವೀಕಾರ ಸುಧಾರಿಸಲು ಗದ್ದೆಗಳಲ್ಲಿ ಬಾತುಕೋಳಿಗಳನ್ನು ಸಾಕಲಾಗುತ್ತದೆ.
ಸೋಲಾರ್ ಬಳಕೆ: ಸಾವಯವ ಗೊಬ್ಬರ ತಯಾರಿಸಲು ಹೈನುಗಾರಿಕೆಯನ್ನು ಪ್ರಾರಂಭಿಸಿದ್ದಾರೆ. ಎಲ್ಲಾ ಸಾವಯವ ತ್ಯಾಜ್ಯವನ್ನು ಸಾವಯವ ಗೊಬ್ಬರವಾಗಿ ಪರಿವರ್ತಿಸಲಾಗುತ್ತದೆ. ಮೇಲ್ಛಾವಣಿಯ ಮೇಲೆ ಅಳವಡಿಸಲಾಗಿರುವ ಸೌರ ಫಲಕಗಳು ಕೃಷಿಗೆ ಅಗತ್ಯವಿರುವ ಹೆಚ್ಚಿನ ವಿದ್ಯುತ್ ಒದಗಿಸುತ್ತವೆ. ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಹೆಚ್ಚಿನ ಸೋಲಾರ್ ಪ್ಯಾನಲ್ಗಳನ್ನು ಅಳವಡಿಸಲಾಗಿದೆ.
ಭತ್ತದ ತಳಿಗಳಲ್ಲದೇ, ಸ್ವೀಟ್ ಕಾರ್ನ್, ಟಪಿಯೋಕಾ, ರಾಗಿ, ಚಿಯಾ, ಎಳ್ಳು, ಪಪ್ಪಾಯಿ, ಟೊಮೆಟೊ, ಕ್ಯಾಪ್ಸಿಕಂ, ಎಲೆಕೋಸು, ಬದನೆ, ಮತ್ತು ಗಜದ ಉದ್ದದ ಬೀನ್ಸ್ ಅನ್ನು ಇಲ್ಲಿ ಬೆಳೆಯಲಾಗುತ್ತದೆ. ಹಸುಗಳಿಗೆ ಹುಲ್ಲು ಕೂಡ ಇಲ್ಲೆ ಬೆಳೆಯಲಾಗಿದೆ.
ದೋಣಿಯ ಮೂಲಕ ಪ್ರಯಾಣ: ಒಟ್ಟು 14 ಎಕರೆ ವಿಸ್ತಾರದ ಈ ಫಾರ್ಮ್ ಆಲುವಾ ಅರಮನೆಯಿಂದ ದೋಣಿ ಮೂಲಕ ಮಾತ್ರ ತಲುಪಬಹುದು. ಈ ಕೇಂದ್ರವು ತನ್ನ ಸಾವಯವ ಉತ್ಪಾದನೆ ಮತ್ತು ಇಂಗಾಲದ ಹೊರಸೂಸುವಿಕೆಯಲ್ಲಿನ ಕಡಿತಕ್ಕಾಗಿ ಅಪೇಕ್ಷಣೀಯ ದಾಖಲೆಯನ್ನು ಗಳಿಸುವುದರ ಜೊತೆಗೆ ಕೃಷಿ ಉತ್ಸಾಹಿಗಳಿಗೆ ಉತ್ತಮ ಪ್ರವಾಸೋದ್ಯಮ ಕೇಂದ್ರವಾಗಿದೆ.
ಇದನ್ನೂ ಓದಿ: ಎಲ್ಲ ರಾಷ್ಟ್ರೀಯ ಉದ್ಯಾನದ ಬಾಗಿಲು ತೆರವು: ದೇಶ ವಿದೇಶಿ ಪರಿಸರ ಪ್ರೇಮಿಗಳಿಗೆ ಖುಷಿ