ತಿರುವನಂತಪುರಂ: ನೆರೆಯ ಕೇರಳದಲ್ಲಿ ಸತತ 4ನೇ ದಿನವೂ ಹೊಸದಾಗಿ 20,000 ಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗಿದ್ದು, ಪರೀಕ್ಷಾ ಧನಾತ್ಮಕ ದರ (TPR) ಶೇ 13.61 ರಷ್ಟು ಏರಿಕೆಯಾಗಿದೆ. 116 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ 20,772 ಹೊಸ ಪ್ರಕರಣಗಳೊಂದಿಗೆ, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 33,70,137 ಕ್ಕೆ ತಲುಪಿದೆ. ಇನ್ನು, 116 ಸಾವುಗಳೊಂದಿಗೆ ಒಟ್ಟು ಮೃತರ ಸಂಖ್ಯೆ 16,701ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಸರ್ಕಾರದ ಪ್ರಕಟಣೆ ತಿಳಿಸಿದೆ.
ಒಂದೇ ದಿನ 14,651 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಒಟ್ಟು 31,92,104 ಮಂದಿ ಚೇತರಿಸಿಕೊಂಡಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,60,824 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 1,52,639 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಟಿಪಿಆರ್ ಶೇಕಡಾ 13.61 ರಷ್ಟು ಏರಿಕೆಯಾಗಿರುವುದು ಕಂಡುಬಂದಿದೆ. ಇಲ್ಲಿಯವರೆಗೆ 2 ಕೋಟಿ 70 ಲಕ್ಷ 49 ಸಾವಿರದ 431 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಅದು ಹೇಳಿದೆ.
ಸೋಂಕಿತರ ಜಿಲ್ಲಾವಾರು ವಿವರ:
ಮಲಪ್ಪುರಂ (3670), ಕೋಜಿಕೋಡ್ (2470), ಎರ್ನಾಕುಲಂ (2306), ತ್ರಿಶೂರ್ (2287), ಪಾಲಕ್ಕಾಡ್ (2070), ಕೊಲ್ಲಂ (1415), ಆಲಪ್ಪುಳ (1214), ಕಣ್ಣೂರು (1123), ರಾಜ್ಯದಲ್ಲಿ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳು. ತಿರುವನಂತಪುರಂ (1082) ಮತ್ತು ಕೊಟ್ಟಾಯಂ (1030) ಪ್ರಕರಣಗಳು ದಾಖಲಾಗಿವೆ. ಹೊಸ ಪ್ರಕರಣಗಳಲ್ಲಿ 81 ಆರೋಗ್ಯ ಕಾರ್ಯಕರ್ತರು, 137 ರಾಜ್ಯದ ಹೊರಗಿನಿಂದ ಬಂದವರು ಹಾಗೂ 932 ಪ್ರಕರಣಗಳಲ್ಲಿ ಸ್ಪಷ್ಟವಾಗಿಲ್ಲ ಎಂದು ಪ್ರಕಟಣೆ ತಿಳಿಸಿದೆ.