ETV Bharat / bharat

ಬೇರೆಯವರ ಮನೆ ಗೋಡೆ ಬಳಿ ಮೂತ್ರ ವಿಸರ್ಜನೆ.. ವಿರೋಧಿಸಿದ ವ್ಯಕ್ತಿಗೆ ಥಳಿತ, ಮೂವರು ಪೊಲೀಸ್​ ಸಿಬ್ಬಂದಿ ಸಸ್ಪೆಂಡ್​ - ಕೇರಳದಲ್ಲಿ ಮೂವರು ಪೊಲೀಸರ ಅಮಾನತು

ಕಿಲಿಮನೂರುನಲ್ಲಿ ಪೊಲೀಸರು ತೋರಿದ ಅಶಿಸ್ತಿಗೆ ಅಮಾನತು- ಇಲಾಖಾ ವಿಚಾರಣೆ- ಮೂವರು ಪೊಲೀಸರ ವಿರುದ್ಧ ಎಫ್ಐಆರ್​

suspended
ಸಾರ್ವಜನಿಕ ಸ್ಥಳದಲ್ಲಿ ಪೊಲೀಸರಿಂದ ಮೂತ್ರ ವಿಸರ್ಜನೆ
author img

By

Published : Jul 24, 2022, 9:50 PM IST

ತಿರುವನಂತಪುರಂ(ಕೇರಳ) : ಶಿಸ್ತು ಪಾಲಿಸಬೇಕಾದ ಪೊಲೀಸರೇ ಮಾಡಿದ ಅಶಿಸ್ತಿಗೆ ಮೂವರನ್ನು ಅಮಾನತು ಮಾಡಲಾಗಿದೆ. ಕಿಲಿಮನೂರ್ ಬಳಿ ತನ್ನ ಮನೆಯ ಗೋಡೆಯ ಹೊರಗೆ ಪೊಲೀಸರು ಮೂತ್ರ ವಿಸರ್ಜನೆ ಮಾಡುವುದನ್ನು ವಿರೋಧಿಸಿದಕ್ಕೆ ವ್ಯಕ್ತಿಯೊಬ್ಬನಿಗೆ ಥಳಿಸಿದ ಘಟನೆ ನಡೆದಿದೆ. ಈ ಸಂಬಂಧ ಮೂವರು ಪೊಲೀಸರನ್ನು ಇಲಾಖೆ ಅಮಾನತುಗೊಳಿಸಿದೆ.

ಪೊಲೀಸರು ವ್ಯಕ್ತಿಗೆ ಹೊಡೆದಿರುವ ಸುದ್ದಿ ತಿಳಿಯುತ್ತಿದ್ದಂತೆ ಮೂವರನ್ನು ಅಮಾನತುಗೊಳಿಸಿ, ಅವರ ವಿರುದ್ಧ ಎಫ್​​ಐಆರ್​ ದಾಖಲಿಸಿಕೊಳ್ಳಲಾಗಿದೆ. ಇಲಾಖಾ ವಿಚಾರಣೆ ಬಾಕಿ ಇದೆ ಎಂದು ರಾಜ್ಯ ಪೊಲೀಸ್‌ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಇಲಾಖಾ ವಿಚಾರಣೆಯ ಜೊತೆಗೆ, ಮೂವರ ವಿರುದ್ಧ ಅದೇ ದಿನ ಎಫ್‌ಐಆರ್ ದಾಖಲಾಗಿರುವುದರಿಂದ ಕ್ರಿಮಿನಲ್ ಮೊಕದ್ದಮೆಯನ್ನೂ ಎದುರಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಘಟನೆ ಶನಿವಾರ ಮಧ್ಯಾಹ್ನ ನಡೆದಿದ್ದು, ಅಂದೇ ಎಫ್‌ಐಆರ್‌ ದಾಖಲಿಸಿ, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕಿಲಿಮನೂರು ಪೊಲೀಸ್‌ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ, ನಂತರ ಅವರನ್ನು ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಆದಾಗ್ಯೂ, ಪೊಲೀಸರು ತಮ್ಮ ದೂರಿನ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ, ತನ್ನ ಹೇಳಿಕೆಯನ್ನು ದಾಖಲಿಸುವ ವಿವಿಧ ಕಾರ್ಯವಿಧಾನಗಳನ್ನು ವಿಳಂಬ ಮಾಡಿದ್ದಾರೆ ಮತ್ತು ವಿಷಯವನ್ನು ಇತ್ಯರ್ಥಗೊಳಿಸಲು ಪದೇ ಪದೇ ಪ್ರಯತ್ನಿಸಿದರು ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

ಘಟನೆ ಹಿನ್ನೆಲೆ : ನಿನ್ನೆ ಪೊಲೀಸರು ವ್ಯಕ್ತಿಯೊಬ್ಬನಿಗೆ ಸೇರಿದ ಮನೆಯ ಹೊರೆಗೆ ಮೂತ್ರ ವಿಸರ್ಜನೆ ಮಾಡಿದ್ದಾರೆ. ಇದನ್ನು ಆ ಮನೆಯ ವ್ಯಕ್ತಿ ವಿರೋಧಿಸಿದ್ದಕ್ಕೆ ಅವರ ತಲೆಗೆ ಹೊಡೆದರು ಮತ್ತು ಅವರ ಕೈಗಳಿಗೆ ಸಹ ಗಾಯಗೊಳಿಸಿದ್ದಾರಂತೆ. ಈ ಬಗ್ಗೆ ವರದಿಯಾದ ನಂತರ ಪೊಲೀಸರ ವಿರುದ್ಧ ಕ್ರಮ ಜರುಗಿಸಲಾಗಿದೆ.

ಇದನ್ನೂ ಓದಿ : ಮಗಳ ವಿರುದ್ಧ ಆರೋಪ.. ಕಾಂಗ್ರೆಸ್​ಗೆ ಸಚಿವೆ ಸ್ಮೃತಿ ಇರಾನಿ ಲೀಗಲ್ ನೋಟಿಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.