ತಿರುವನಂತಪುರಂ(ಕೇರಳ): ಮಾಹಿತಿ ವಿನಿಮಯಕ್ಕಾಗಿ ಟೆಲಿಗ್ರಾಂ, ಮೆಸೆಂಜರ್ ಗುಂಪುಗಳನ್ನು ರಚನೆ ಮಾಡಿಕೊಂಡಿದ್ದನ್ನು ನೋಡಿದ್ದೇವೆ. ಆದರೆ, ಕೇರಳದಲ್ಲಿ ಲೈಂಗಿಕತೆಗಾಗಿ 'ಪತ್ನಿಯರ ವಿನಿಮಯ' ಮಾಡಿಕೊಳ್ಳುವ ದಂಧೆ ನಡೆಸಲು ಗ್ರೂಪ್ ರಚಿಸಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ.
ಈ ಬಗ್ಗೆ ಮಹಿಳೆಯೊಬ್ಬರು ದೂರು ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳದ ಕೊಟ್ಟಾಯಂ ಜಿಲ್ಲೆಯ ಕರುಕಾಚಲ್ನಲ್ಲಿ ಹಣ ಮತ್ತು ಲೈಂಗಿಕತೆಗಾಗಿ ಪತ್ನಿಯರ ವಿನಿಮಯ ಮಾಡಿಕೊಳ್ಳಲೆಂದೇ ಟೆಲಿಗ್ರಾಂ, ಮೆಸೆಂಜರ್ ಗ್ರೂಪ್ ರಚನೆ ಮಾಡಿಕೊಂಡಿದ್ದಾರೆ. ಹಣಕ್ಕಾಗಿ ತಮ್ಮ ಹೆಂಡತಿಯರನ್ನು ಪರ ಪುರುಷರ ಜೊತೆ ವಿನಿಮಯ ಮಾಡಿಕೊಳ್ಳುತ್ತಿದ್ದರು.
ಈ ಗುಂಪುಗಳಲ್ಲಿ ಸಿರಿವಂತ ಕುಟುಂಬದವರೇ ಇದ್ದಾರೆ ಎಂದು ಹೇಳಲಾಗುತ್ತಿದೆ. ಕೇರಳದ ಮೂರು ಜಿಲ್ಲೆಯ 1 ಸಾವಿರಕ್ಕೂ ಅಧಿಕ ಜನರು ಈ ಗುಂಪುಗಳ ಸದಸ್ಯರಾಗಿದ್ದಾರೆ. ಹಣ ಮತ್ತು ಲೈಂಗಿಕ ಸುಖಕ್ಕಾಗಿ ತಮ್ಮ ಪತ್ನಿಯನ್ನು ಬೇರೆ ಗಂಡಸರ ಜೊತೆ ವಿನಿಮಯ ಮಾಡಿಕೊಂಡಿದ್ದಾರೆ. ಮೂವರು ಗಂಡಸರ ಜೊತೆ ಒಬ್ಬ ಮಹಿಳೆಯನ್ನೂ ಹಂಚಿಕೊಂಡ ಬಗ್ಗೆಯೂ ಉದಾಹರಣೆ ಇದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಗುಂಪುಗಳ ಮೇಲೆ ತೀವ್ರ ನಿಗಾ ಇರಿಸಿದ್ದು, ಇವರು ಬೇರೆ ಗುಂಪುಗಳ ಜೊತೆ ಸಂಪರ್ಕ ಹೊಂದಿದ್ದಾರಾ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಅಲ್ಲದೇ, ಈ ಗುಂಪುಗಳಲ್ಲಿ 25 ಜನರ ಮೇಲೂ ನಿಗಾ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಸುಲ್ಲಿ ಡೀಲ್ ಆ್ಯಪ್ನಲ್ಲಿ ಮುಸ್ಲಿಂ ಹುಡುಗಿಯರೇ ಟಾರ್ಗೆಟ್.. ಹಿಂದೂ ಧರ್ಮದ ವಿರುದ್ಧ ಹೇಳಿಕೆ ನೀಡ್ತಿದ್ದವರ ಹರಾಜು